ಭಾರತೀಯ ಚಿತ್ರರಂಗದಲ್ಲೀಗ (Kantara Movie Yashs Dream) ಕಾಂತಾರ ಸಿನಿಮಾದ್ದೇ ಮಾತು. ಸ್ಯಾಂಡಲ್ ವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಎಲ್ಲರೂ ಕಾಂತಾರ ಸಿನಿಮಾ ತಂಡವನ್ನು ಗುಣಗಾನ ಮಾಡುತ್ತಿದ್ದಾರೆ.ನಟ ರಿಷಭ್ ಶೆಟ್ಟಿ ಕರಾವಳಿಯ ಸಂಸ್ಕೃತಿಯನ್ನೇ ಆಧಾರವಾಗಿಟ್ಟು ಕೊಂಡು ನಿರ್ದೇಶಿಸಿದ ಸಿನಿಮಾದ ಇದೀಗ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
KGF,RRR ಸೇರಿದಂತೆ ಹಲವು ಸಿನಿಮಾಗಳ ದಾಖಲೆಯನ್ನು ಕಾಂತಾರ ಉಡೀಸ್ ಮಾಡಿದೆ.ಬಾಕ್ಸ್ ಆಫೀಸ್ ಕಲೆಕ್ಷನ್ಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಹೊತ್ತಲೇ ನಟ ಯಶ್ ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡ ತಮ್ಮ ಕನಸಿನ ಮಾತು ಕನ್ನಡ ಚಿತ್ರರಂಗಕ್ಕೆ ಸಾಕ್ಷಿಯಾಗಿದೆ. ಕೆಜಿಎಫ್, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ನಟ ಯಶ್ ಕನ್ನಡ ಸಿನಿಮಾದ ಬಗ್ಗೆ ಮಾತನಾಡಿದ ವಿಡೀಯೋ ಒಂದು ಸಖತ್ ವೈರಲ್ ಆಗಿದೆ.
ಎಲ್ಲಾ ಕನ್ನಡ ಸಿನಿಮಾಗಳು ಒಳ್ಳೆಯ ಸಿನಿಮಾಗಳಾಗಿ ಅರ್ಪಿಸ ಬೇಕೆನ್ನುವ ಆಸೆ ಇದೆ. ನನ್ನದು ಒಂದು ಕನಸು ಇದೆ. ಹೇಗೆ ಬೇರೆ ಭಾಷೆಯವರು ಎಲ್ಲಾ ಸಿನಿಮಾಗಳು ಅಷ್ಟು ಬಿಸನೆಸ್ ಆಯ್ತು ಹೊರಗಡೆ ಇಷ್ಟು ಬಿಸನೆಸ್ ಆಯ್ತು ಅಂತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆ ತರಹದ ಕನ್ನಡ ಸಿನಿಮಾಗಳು ಆಗಬೇಕು. ತುಂಬಾ ಜನ ಕನ್ನಡಿಗರು ಇದ್ದೀರಾ ದೊಡ್ಡ ದೊಡ್ಡ ವಿಷಯಗಳಲ್ಲಿ ಎಲ್ಲಾ ರೀತಿಯ ಹೋಲ್ಡ್ ತೆಗೆದುಕೊಂಡಿದ್ದೀರಾ. ಹಾಗೆ ತಿಂಗಳಿಗೊಂದು ಅಥವಾ ಎರಡು ತಿಂಗಳಿಗೊಂದು ಒಳ್ಳೆಯ ಸಿನಿಮಾ ಒಟ್ಟಾರೆ ವರ್ಷಕ್ಕೆ ಐದಾರು ಒಳ್ಳೆಯ ಸಿನಿಮಾ ಅಂತೂ ಬರುತ್ತದೆ. ಕಟ್ಟ ಸಿನಿಮಾ ನನ್ನದು ಬಂದರೆ ದಯವಿಟ್ಟು ಸಂಸ್ಥೆಯವರು ನನ್ನ ಸಿನಿಮಾ ಕೂಡ ತರಬೇಡಿ, ಯಾಕೆಂದರೆ ಕೆಟ್ಟ ಸಿನಿಮಾ ನೋಡಿದರೆ ಅದರ ನಂತರ ಒಳ್ಳೆಯ ಐದಾರು ಸಿನಿಮಾ ಹಾಕಿದರೂ ಕೂಡ ಯಾರು ನೋಡುವುದಕ್ಕೆ ಬರುವುದಿಲ್ಲ. ಒಳ್ಳೆಯ ಸಿನಿಮಾ ಅನಿಸಿದಾಗ ದಯವಿಟ್ಟು ನೋಡಿ ನಮ್ಮ ನಿಮ್ಮ ನಂಟನ್ನು ಬೆಳಸಿಕೊಳ್ಳುವ ಹಾಗೆ ನನಗಿರುವ ಕನಸನ್ನು ಕಲಾವಿದರು ದಯವಿಟ್ಟು ನೇರವೇರಿಸಿ ಕೊಡಿ ಎಂದಿದ್ದಾರೆ.
ಇದನ್ನೂ ಓದಿ : Kantara: ‘ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಇದನ್ನೂ ಓದಿ : Kantara Hindi Box Office : ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದ ಕಾಂತಾರ ಹಿಂದಿ
ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೋಡುತ್ತಿದ್ದ ಮಹಿಳೆಯ ಮೇಲೆ ದೈವ ಆವಾಹನೆ
ಕಾಂತರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಿನ ಕಲೆಕ್ಷನ್ಸ್ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ. ಅಂದು ನಟ ಯಶ್ ಕನ್ನಡ ಚಿತ್ರರಂಗದ ಬಗ್ಗೆ ಕನಸು ಕಂಡಿದ್ದು ಇತ್ತೀಚಿನ ದಿನಗಳಲ್ಲಿ ನನಸಾಗುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆ ಕೆಜಿಎಫ್ ಸಿನಿಮಾದ ನಿರ್ಮಾಣದ ನಂತರ ಕಾಂತಾರ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ಸ್‌ನ್ನು ತಂದುಕೊಟ್ಟಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ, ತೆಲುಗು, ತಮಿಳಿ ಹಾಗೂ ಹಿಂದಿಯಲ್ಲೂ ಸಿನಿಪ್ರೇಕ್ಷಕರ ಮನವನ್ನು ಗೆದ್ದುಕೊಂಡಿದೆ. ಈ ಸಿನಿಮಾಕ್ಕೆ ರಿಷಭ್ ಶೆಟ್ಟಿಯವರು ನಟಿಸಿ, ಉತ್ತಮ ನಿರ್ದೇಶನವನ್ನು ಮಾಡಿದ್ದಾರೆ. ಇನ್ನೂ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಅದ್ಭುತ ಸಂಗೀತವನ್ನು ನೀಡಿದ್ದಾರೆ. ಚಿತ್ರದಲ್ಲಿ ಸಹ ಕಲಾವಿದರಾಗಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಸೇರಿದಂತೆ ಮುಂತಾದರು ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅರವಿಂದ್ ಕಶ್ಯಪ್ ಉತ್ತಮ ಛಾಯಗ್ರಹಣವನ್ನು ಮಾಡಿದ್ದಾರೆ.
Actor Yash’s dream came true through Kantara Movie Success