cars and bikes to staff:ಬೋನಸ್​ ರೂಪದಲ್ಲಿ ಸಿಬ್ಬಂದಿಗೆ ಕೋಟಿ ಮೌಲ್ಯದ ಕಾರು, ಬೈಕ್​ಗಳನ್ನು ನೀಡಿದ ಮಾಲೀಕ :ನೌಕರರು ಫುಲ್​ ಖುಷ್​

ತಮಿಳುನಾಡು :cars and bikes to staff : ಹಬ್ಬದ ಸಂದರ್ಭಗಳಲ್ಲಿ ಕಂಪನಿಗಳಲ್ಲಿ ಬೋನಸ್​ಗಳನ್ನು ನೀಡುವ ಪ್ರಕ್ರಿಯೆ ಅನೇಕ ಕಂಪನಿಗಳಲ್ಲಿ ಇದೆ. ಸಿಬ್ಬಂದಿ ಕೂಡ ಯಾವಾಗ ಬೋನಸ್​ ಪಡೆಯುವ ದಿನ ಬರುತ್ತೋ ಅಂತಾ ಕಾಯ್ತಿರ್ತಾರೆ. ಇದೀಗ ದೀಪಾವಳಿ ಹಬ್ಬ ಬೇರೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಬೋನಸ್​​ ನೀಡುವ ಸಿದ್ಧತೆಯನ್ನು ಮಾಡಿಕೊಳ್ತಿವೆ. ಆದರೆ ಚೆನ್ನೈ ಮೂಲದ ಉದ್ಯಮಿಯೊಬ್ಬರು ತಮ್ಮ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳಿಗೆ 1.2 ಕೋಟಿ ರೂಪಾಯಿ ಮೌಲ್ಯದ ಕಾರು ಹಾಗೂ ಬೈಕ್​ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.


ಚಲನಿ ಜ್ಯೂವೆಲ್ಲರಿ ಮಾಲೀಕರಾದ ಜಯಂತಿ ಲಾಲ್​ ಚಯಂತಿ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಸಿಬ್ಬಂದಿಗಳಿಗೆ ಬೆಲೆಬಾಳುವ ಎಂಟು ಕಾರುಗಳು ಹಾಗೂ 18 ಬೈಕುಗಳನ್ನು ಬೋನಸ್​ ರೂಪದಲ್ಲಿ ವಿತರಣೆ ಮಾಡಿದ್ದಾರೆ. ಮಾಲೀಕರ ಈ ನಡೆ ಚಲನಿ ಜ್ಯುವೆಲ್ಲರಿಯ ಕೆಲವು ಸಿಬ್ಬಂದಿಗಳ ಸಂತೋಷಕ್ಕೆ ಕಾರಣವಾಗಿದ್ದರೆ ಇನ್ನೂ ಕೆಲವು ಸಿಬ್ಬಂದಿ ಸಂತೋಷದಿಂದ ಕಣ್ಣೀರನ್ನೇ ಸುರಿಸಿದ ಘಟನೆ ಕೂಡ ನಡೀತು.

ಬೋನಸ್​ ರೂಪದಲ್ಲಿ ಜಯಂತಿ ಲಾಲ್​ ತಮ್ಮ ಕಂಪನಿ ನೌಕರರಿಗೆ ಐದತ್ತು ಸಾವಿರ ರೂಪಾಯಿಗಳನ್ನು ನೀಡಿ ಅವರನ್ನು ತೃಪ್ತಿ ಪಡಿಸಬಹುದಿತ್ತು. ಆದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಾರು ಹಾಗೂ ಬೈಕ್​ಗಳನ್ನು ಏಕೆ ಕೊಡಿಸಿದರು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಆದರೆ ಈ ಪ್ರಶ್ನೆಗೆ ಮಾಧ್ಯಮಗಳ ಎದುರು ಉತ್ತರಿಸಿದ ಜಯಂತಿ ಲಾಲ್​, ನಾನು ನಮ್ಮ ಸಿಬ್ಬಂದಿಯನ್ನು ಕುಟುಂಬಸ್ಥರಂತೆ ಕಾಣುತ್ತೇನೆ. ಈ ಎಲ್ಲಾ ಸಿಬ್ಬಂದಿ ಕಂಪನಿಯ ಎಲ್ಲಾ ಏರಿಳಿತದ ಸಂದರ್ಭದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಸಿಬ್ಬಂದಿಯ ಕೆಲಸವನ್ನು ಪ್ರೋತ್ಸಾಹಿಸಲು ಹಾಗೂ ಅವರ ಜೀವನಕ್ಕೆ ಏನಾದರೊಂದು ವಿಶೇಷವಾಗಿದ್ದನ್ನು ನೀಡಲು ಇಚ್ಛಿಸಿದೆ. ನನ್ನ ವ್ಯವಹಾರದ ಎಲ್ಲಾ ಏರಿಳಿತಗಳಲ್ಲಿ ಜೊತೆಯಾಗಿದ್ದಾರೆ. ನಾನು ಇಂದು ಉದ್ಯಮದಲ್ಲಿ ಲಾಭ ಗಳಿಸಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಸಿಬ್ಬಂದಿ. ಹೀಗಾಗಿ ಅವರಿಗೆ ಲಾಭದ ಅಂಶ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ : Congress President Polls :ಇಲ್ಲಿದೆ ನೋಡಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಪ್ರಮುಖ ವಿಚಾರಗಳು

ಇದನ್ನೂ ಓದಿ : Caffeine Cause Acne : ಕೆಫಿನ್‌ ನಿಂದ ಮೊಡವೆ ಹೆಚ್ಚಾಗುತ್ತದೆಯೇ; ತಜ್ಞರು ಹೇಳುವುದಾದರೂ ಏನು….

Chennai: Businessman gives cars and bikes to staff as Diwali gift

Comments are closed.