ಕೆಜಿಎಫ್- 2 ನಂತರ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಘೋಷಣೆ ಆಗಿಲ್ಲ. ನಟ ಯಶ್ ಮುಂದಿನ ಸಿನಿಮಾಕ್ಕಾಗಿ ಭರ್ಜರಿ ಕಸರತ್ತು ನಡೀತಿದೆ. ಇನ್ನು ಸಮಯ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ರಾಕಿ ಭಾಯ್ ಮಗುವಾಗಿ ಬಿಡುತ್ತಾರೆ. ಮಕ್ಕಳ ಜೊತೆ ಕಾಲ ಕಳೆಯುವ ಫೋಟೊ, ವಿಡಿಯೋ ಶೇರ್ ಮಾಡುತ್ತಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಮಗ ಯಥರ್ವ್ (Yash’s son Yatharv) ಜೊತೆಗಿನ ಕ್ಯೂಟ್ ಸಂಭಾಷಣೆಯ ಒಂದು ಕ್ಯೂಟ್ ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಮಗ ಯಥರ್ವ್ ತಂದೆಯನ್ನು ನೋಡಿ ನಾನೇ ನಿನಗಿಂತ ಸ್ಟ್ರಾಂಗ್ ಎಂದು ಹೇಳುವ ವಿಡಿಯೋ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.
ಏರ್‌ಪೋರ್ಟ್ ರಸ್ತೆಯ ಪ್ರೆಸ್ಟ್ರೀಜ್ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ನಟ ಯಶ್ ಮಡದಿ ಮಕ್ಕಳ ಜೊತೆ ವಾಸವಾಗಿದ್ದಾರೆ. ಇತ್ತೀಚೆಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಮನೆ ಮುಂದೆ ಜಮಾಯಿಸಿದ್ದರು. ನೆಚ್ಚಿನ ನಟನನ್ನು ನೋಡಿ ವಿಶ್ ಮಾಡಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಸದ್ಯ ಈ ವಿಡಿಯೋದಲ್ಲಿ ಸೋಫಾದಲ್ಲಿ ಕೂತು ಯಶ್ ಮಗ ಯಥರ್ವ್ ಜೊತೆ ಆಟ ಆಡುತ್ತಿರುವುದನ್ನು ನೋಡಬಹುದು. ಯಶ್ ಬೈಸಿಪ್ಸ್ ತೋರಿಸಿ ಹೇಗಿದೆ ಎಂದು ಕೇಳಿದ್ದರೆ, ಯಥರ್ವ್ ಸಾಫ್ಟ್ ಆಗಿದೆ ಎಂದು ಹೇಳಿದ್ದಾನೆ. ಅದಕ್ಕೆ ಯಶ್, ಹಾಗಾದರೆ ನಿನ್ನ ಬೈಸಿಪ್ಸ್ ತೋರಿಸು, ಎಂದಾಗ ಮುಷ್ಠಿ ಬಿಗಿ ಹಿಡಿದು ಕೈ ಮಡಿಚಿ ನೋಡು ನನ್ನ ಬೈಸಿಪ್ಸ್ ಬಹಳ ಗಟ್ಟಿಯಾಗಿದೆ ಎನ್ನುತ್ತಾನೆ. ಹಾಗಾದರೆ ನನ್ನ ಬೈಸಿಪ್ಸ್ ಸ್ಟ್ರಾಂಗ್ ಇಲ್ವಾ ಅಂದ್ರೆ, ನೋಡು ಬೇಕಿದ್ದರೆ ಸಾಫ್ಟ್ ಆಗಿದೆ. ನನ್ನದು ಗಟ್ಟಿಯಾಗಿದೆ ಎಂದು ಕ್ಯೂಟ್ ಆಗಿ ಹೇಳಿದ್ದಾನೆ. ಸೂಪರ್ ಮಗನೇ ನೀನು ತುಂಬಾ ಸ್ಟ್ರಾಂಗ್ ಎಂದು ಯಶ್ ಮಗನನ್ನು ಎತ್ತಿಕೊಂಡಿದ್ದಾರೆ.
ಸಿನಿಮಾ ಕೆಲಸಗಳು ಇಲ್ಲದೇ ಇರುವುದರಿಂದ ಬಹುತೇಕ ಸಮಯವನ್ನು ಯಶ್ ಮನೆಯಲ್ಲೇ ಕಳೆಯುತ್ತಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ವಿದೇಶಕ್ಕೆ ಹೋಗಿ ಬಂದಿದ್ದರು. ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನವೂ ಯಶ್ ಅಭಿಮಾನಿಗಳ ಕೈಗೆ ಸಿಕ್ಕಿರಲಿಲ್ಲ. ಬಹಳ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡ್ತಿದ್ದೀನಿ. ಅದಕ್ಕೆ ಮತ್ತಷ್ಟು ಸಮಯ ಬೇಕು. ಬರೀ ಕೈಯಲ್ಲಿ ನಿಮ್ಮ ಮುಂದೆ ಬಂದು ನಿಲ್ಲಲ್ಲ. ಕ್ಷಮಿಸಿ, ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಯಶ್ ಬಹಿರಂಗ ಪತ್ರ ಬರೆದಿದ್ದರು.
ಕೆಜಿಎಫ್- 2 ಸಿನಿಮಾ ಬಂದು 9 ತಿಂಗಳು ಕಳೆದರೂ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಸುಳಿವು ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಯಶ್19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಇನ್ನು ಎಷ್ಟು ದಿನ ಕಾಯುವುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ. ಮುಂದಿನ ಸಿನಿಮಾ ಅನೌನ್ಸ್ ಯಾವಾಗ? ಶೂಟಿಂಗ್ ಯಾವಾಗ? ರಿಲೀಸ್ ಯಾವಾಗ? ಎಂದು ಲೆಕ್ಕಾಚಾರ ಹಾಕಿ ಹಾಕಿ ಸುಸ್ತಾಗಿದ್ದಾರೆ. ಇನ್ನೆರಡು ವರ್ಷ ನೆಚ್ಚಿನ ನಟನನ್ನು ತೆರೆಮೇಲೆ ನೋಡೋದು ಕಷ್ಟ ಎಂದು ಕೊಂಡಿದ್ದಾರೆ.
ಇದನ್ನೂ ಓದಿ : ‘ಹೊಯ್ಸಳ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ : ಪೊಲೀಸ್ ಲುಕ್‌ನಲ್ಲಿ ಅಬ್ಬರಿಸಿದ ಡಾಲಿ
ಇದನ್ನೂ ಓದಿ : 100 ದಿನ ಪೂರೈಸಿದ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ
ಇದನ್ನೂ ಓದಿ : ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್
ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಯಾರು ಆಕ್ಷನ್ ಕಟ್ ಹೇಳ್ತಾರೆ? ನಿರ್ದೇಶಕರು ಯಾರು? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಯಶ್19 ಸಿನಿಮಾ ಬಹುತೇಕ ಖಚಿತ ಎನ್ನಲಾಗುತ್ತಿದೆ. ಯಶ್ ಸಿನಿಮಾಕ್ಕೆ ನರ್ತನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಕೂಡ ಬಲವಾಗಿಯೇ ಕೇಳಿಬಂದಿತ್ತು. ಆದರೆ ಮುಂದೆ ಏನು ಎನ್ನುವುದನ್ನು ಸ್ವತಃ ಯಶ್ ರಿವೀಲ್ ಮಾಡಬೇಕಿದೆ ಅಷ್ಟೇ.
Actor Yash’s son Yatharv’s video shared on Instagram has gone viral.