ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಕೊಟ್ಟ ಬಿಬಿಎಂಪಿ : ಇನ್ಮುಂದೇ ಉಪಹಾರದ ಬದಲು ನಗದು ನೀಡಲು ನಿರ್ಧಾರ

ಬೆಂಗಳೂರು : ಸದ್ಯ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ. ಈ ಮಧ್ಯೆ ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸರಕಾರ ಹಾಗೂ ಪಕ್ಷಗಳು ಕೂಡ ಸರ್ಕಸ್ ನಡೆಸಿವೆ. ಈ ಮಧ್ಯೆ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ (BBMP Civil workers) ಸಿಹಿಸುದ್ದಿ ನೀಡಿರೋ ಬಿಬಿಎಂಪಿ ಪೌರ ಕಾರ್ಮಿಕರಿಗೆ ಮಧ್ಯಾಹ್ನ ಊಟದ ಬದಲು ಊಟದ ವೆಚ್ಚಕ್ಕೆ ನಗದು ನೀಡಲು ನಿರ್ಧರಿಸಿದೆ.

ಬೆಂಗಳೂರಿನಾದ್ಯಂತ 18700 ಅಧಿಕ ಪೌರ ಕಾರ್ಮಿಕರು ಸ್ವಚ್ಚತಾ ಕೆಲಸದಲ್ಲಿ ತೊಡಗಿದ್ದಾರೆ. ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವ ಈ ಪೌರ ಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಅದಮ್ಯ ಚೇತನ ಹಾಗೂ ಇಸ್ಕಾನ್ ನಿಂದ ಊಟ ಪೊರೈಸಲಾಗುತ್ತಿತ್ತು. ಅದರೆ ಈ ಊಟ ಉಪ್ಪು ಖಾರ ಇಲ್ಲದೇ ಸಪ್ಪೇ ಇರುತ್ತೆ ಎಂದು ಪೌರ ಕಾರ್ಮಿಕರು ಆರೋಪಿಸುತ್ತ ಬಂದಿದ್ದರು. ಬೆಳಗಿನ ಉಪಹಾರವೂ ಪೌರ ಕಾರ್ಮಿಕರಿಗೆ ಸಮಾಧಾನ ತಂದಿರಲಿಲ್ಲ.

ಹೀಗಾಗಿ ಈಗ ಬೆಳಗಿನ ಉಪಹಾರದ ಬದಲಾಗಿ ಪೌರ ಕಾರ್ಮಿಕರಿಗೆ ಉಪಹಾರದ ಮೊತ್ತವನ್ನೇ ಕೊಡುಗೆಯಾಗಿ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಪ್ರತಿದಿನದ ಉಪಹಾರಕ್ಕೆ 30 ರೂಪಾಯಿ ನೀಡಲು ಬಿಬಿಎಂಪಿ ನಿರ್ಧರಿಸಿದೆ. ದಿನಕ್ಕೆ 30 ರೂಪಾಯಿಯಂತೆ ಒಟ್ಟು ತಿಂಗಳಿಗೆ 900 ರೂಪಾಯಿಯನ್ನು ಪೌರ ಕಾರ್ಮಿಕರಿಗೆ ನೀಡಲಾಗುತ್ತದೆ.‌ಇದರಿಂದ ಪೌರ ಕಾರ್ಮಿಕರಿಗೆ ತಮಗೆ ಇಷ್ಟವಾದ ಲ್ಲಿ ತಿಂಡಿ ಊಟ ಸೇವಿಸಲು ಅವಕಾಶ ಸಿಕ್ಕಂತಾಗಲಿದೆ.

ಪ್ರಸ್ತುತ ನಗರದಾದ್ಯಂತ 18700 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಿಗೆ ತಲಾ ‌30 ರೂಪಾಯಿಗಳಂತೆ ಉಪಹಾರದ ವೆಚ್ಚ ನೀಡೋದರಿಂದ ಬಿಬಿಎಂಪಿ ಬೊಕ್ಕಸಕ್ಕೆ ಅಂದಾಜು 16,700,000 ವೆಚ್ಚವಾಗುತ್ತದೆ. ಆದರೆ ನೇರವಾಗಿ ಉಪಹಾರ ನೀಡೋದರಿಂದ ಈ ಮೊತ್ತದಲ್ಲಿ ಕೊಂಚ ಕಡಿಮೆಯಾಗ್ತಿತ್ತು. ಆದರೆ ಇಸ್ಕಾನ್ ಹಾಗೂ ಅದಮ್ಯ ಚೇತನ ನೀಡೋ ಉಪಹಾರದ ಬಗ್ಗೆ ಪೌರ ಕಾರ್ಮಿಕರು ಅತೃಪ್ತಿ ವ್ಯಕ್ತಪಡಿಸಿದ್ದರಿಂದ ಈಗ ಬಿಬಿಎಂಪಿ ನೇರವಾಗಿ ಹಣ ನೀಡೋ ತೀರ್ಮಾನಕ್ಕೆ ಬಂದಿದೆ.

ಇದನ್ನೂ ಓದಿ : Aero India 2023 :ಫೆಬ್ರವರಿ 13 ರಿಂದ ಏರೋ ಇಂಡಿಯಾ 2023: ಮಾಂಸಾಹಾರ ನಿಷೇಧಿಸಿದ ಬಿಬಿಎಂಪಿ

ಇದನ್ನೂ ಓದಿ : Bengaluru Hit and run: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಎಮ್‌ಬಿಎ ವಿದ್ಯಾರ್ಥಿನಿ ಗಂಭೀರ ಗಾಯ

ಇದನ್ನೂ ಓದಿ : Traffic Fine Discount : ಟ್ರಾಫಿಕ್ ಫೈನ್ ನಲ್ಲಿ ಡಿಸ್ಕೌಂಟ್: ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ? ಇಲ್ಲಿದೆ ಡಿಟೇಲ್ಸ್

ಈ ಹಿಂದೆ ಪೌರಕಾರ್ಮಿಕರನ್ನು ಖಾಯಂಗೊಳಿಸಿದ್ದ ಸರ್ಕಾರದ ನೀತಿಯಿಂದಾಗಿ ಸಾವಿರಾರು ಕಾರ್ಮಿಕರು ಸೇವಾಭದ್ರತೆ ಪಡೆದುಕೊಂಡಿದ್ದರು. ಇದಲ್ಲದೇ ಬಿಬಿಎಂಪಿ ಕೂಡ ಪೌರ ಕಾರ್ಮಿಕರ ಹಿತಕ್ಕೆ ಆದ್ಯತೆ ನೀಡಿದ್ದು ನಗರದ ಸ್ವಚ್ಛತೆಕೈಗೊಳ್ಳುವ ಪೌರ ಕಾರ್ಮಿಕರ ಕೈಗಳ ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಸ ಗುಡಿಸುವ ಹೈಟೈಕ್ ಯಂತ್ರಗಳ ಖರೀದಿಗೆ ಮುಂದಾಗಿತ್ತು.

BBMP Civil workers : BBMP gave good news to civic workers: Decision to give cash instead of breakfast from now on

Comments are closed.