‘ಹೊಯ್ಸಳ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ : ಪೊಲೀಸ್‌ ಲುಕ್‌ನಲ್ಲಿ ಅಬ್ಬರಿಸಿದ ಡಾಲಿ

ಡಾಲಿ ಧನಂಜಯ ನಟನೆಯ ‘ಹೊಯ್ಸಳ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ (Hoysala Glimpses Release) ಆಗಿ ಧೂಳೆಬ್ಬಿಸಿದೆ. ನಟ ಡಾಲಿ ಧನಂಜಯ್‌ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಖಾಕಿ ಖದರ್ ತೋರಿಸಿದ್ದಾರೆ. ಒಳ್ಳೆವ್ನಾ ಕೆಟ್ಟವ್ನಾ ಎನ್ನುವ ಅನುಮಾನ ಮೂಡುವಷ್ಟು ರಫ್‌ ಅಂಡ್ ಟಫ್ ಆಫೀಸರ್ ಆಗಿ ಅಬ್ಬರಿಸಿದ್ದು, ಈ ಲುಕ್‌ಗೆ ಡಾಲಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಗುರುದೇವ್ ‘ಹೊಯ್ಸಳ’ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರಕ್ಕೆ ಡಾಲಿ ಧನಂಜಯ ಜೀವ ತುಂಬಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಗೀತಾ’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಎನ್‌ ಈ ಸಿನಿಮಾಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದರೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀಶ್ ಶಂಕರ್, ರಾಘು ಶಿವಮೊಗ್ಗ ಪ್ರಧಾನ ಪಾತ್ರ ನಟಿಸಿದ್ದಾರೆ.

ಮಾರ್ಚ್ 30ಕ್ಕೆ ‘ಹೊಯ್ಸಳ’ ಸಿನಿಮಾ ಬಿಡುಗಡೆ ಮಾಡುವುದಾಗಿ ಸಿನಿತಂಡ ಘೋಷಿಸಿದೆ. ಕಾರ್ತಿಕ್ ಸಿನಿಮಾಟೋಗ್ರಫಿ ಹಾಗೂ ಅಜನೀಶ್ ಲೋಕನಾಥ್ ಮ್ಯೂಸಿಕ್ ಈ ಪೊಲೀಸ್ ಡ್ರಾಮಾ ಸಿನಿಮಾದ ಮತ್ತೊಂದು ಹೈಲೆಟ್ ಆಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಅಸಿಸ್ಟೆಂಟ್ ಕಮೀಷನರ್ ಗುರುದೇವ್ ‘ಹೊಯ್ಸಳ’ ಆಗಿ ಡಾಲಿ ಕಾಣಿಸಿಕೊಂಡಿದ್ದಾರೆ. ಗಡಿ ನಾಡಿನಲ್ಲಿ ಬಹುತೇಕ ಸಿನಿಮಾ ಕಥೆ ನಡೆಯುತ್ತದೆ. ಅಲ್ಲಿ ನಡೆಯುವ ಪ್ರತಿಭಟನೆ ಗಲಾಟೆಯನ್ನು ತಡೆಯುವ ನಿಟ್ಟಿನಲ್ಲಿ ಗುರುದೇವ್ ಮತ್ತವರ ಪೊಲೀಸ್ ಪಡೆ ಕೆಲಸ ಮಾಡುತ್ತದೆ ಎನ್ನುವ ಸನ್ನಿವೇಶದ ಝಲಕ್ ಅನ್ನು ಟೀಸರ್‌ನಲ್ಲಿ ನೋಡಬಹುದು. ಇನ್ನು ಸಾಕಷ್ಟು ಆಕ್ಷನ್ ಸನ್ನಿವೇಶಗಳನ್ನು ಸೇರಿಸಿ ಜಬರ್ದಸ್ತ್‌ ಟೀಸರ್ ಕಟ್ ಮಾಡಿದ್ದಾರೆ.

ಬೆಳಗಾವಿ ಹಾಗೂ ಅಥಣಿ ಭಾಗದಲ್ಲಿ ನಡೆಯುವ ಕಥೆ ಇದು. ಸಮಾಜದ ಒಂದು ಪ್ರಮುಖ ಸಮಸ್ಯೆಯೊಂದರ ಬಗ್ಗೆ ಸಿನಿಮಾದಲ್ಲಿ ಚರ್ಚಿಸಲಾಗಿದೆ. ಅದೇನು ಎನ್ನುವುದನ್ನು ತೆರೆಮೇಲೆ ನೋಡಬೇಕು. ಹೆಸರಿಗೆ ತಕ್ಕಂತೆ ರುತ್‌ಲೆಸ್ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳ ಆಗಿ ಡಾಲಿ ಅಬ್ಬರಿಸಿದ್ದಾರೆ. ಇನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ಬಹುತೇಕ ಸಿನಿಮಾ ದೃಶ್ಯಾವಳಿಗಳು ಮೂಡಿ ಬಂದಿರುವಂತೆ ಕಾಣುತ್ತಿದೆ. ಹೊಯ್ಸಳನ ಪಾತ್ರ ಎಂಥದ್ದು ಎಂದು ಹೇಳುವ ಅಚ್ಯುತ್‌ ಕುಮಾರ್ ಡೈಲಾಗ್‌ವೊಂದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಟೈಟಲ್‌ನಿಂದಲೇ ‘ಹೊಯ್ಸಳ’ ಸಿನಿಮಾ ಕುತೂಹಲ ಕೆರಳಿಸಿದೆ. ‘ಸಲಗ’ ಸಿನಿಮಾದಲ್ಲಿ ಬೆಂಗಳೂರಿನ ಸಮಸ್ಯೆ ವಿರುದ್ಧ ಹೋರಾಡುವ ಪೊಲೀಸ್ ಆಫೀಸರ್ ಸಾಮ್ರಾಟ್ ಪಾತ್ರದಲ್ಲಿ ಧನಂಜಯ ಮಿಂಚಿದ್ದರು. ಆದರೆ ಈ ಸಿನಿಮಾದಲ್ಲಿ ಅದಕ್ಕಿಂತ ಭಿನ್ನವಾದ ದೊಡ್ಡದಾದ ಸಮಸ್ಯೆ ವಿರುದ್ಧ ಹೋರಾಟ ನಡೀತಿದೆ. ಅಂದಹಾಗೆ ಇದು ನಟ ಡಾಲಿ ಧನಂಜಯ್‌ ನಟನೆಯ 25ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಮೈಲಿಗಲ್ಲು ಸಿನಿಮಾದಲ್ಲಿ ಒಂದು ಪವರ್‌ಫುಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : 100 ದಿನ ಪೂರೈಸಿದ ನಟ ಪುನೀತ್ ರಾಜ್‌ ಕುಮಾರ್ ಅಭಿನಯದ ಗಂಧದ ಗುಡಿ

ಇದನ್ನೂ ಓದಿ : ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

ಇದನ್ನೂ ಓದಿ : Hoysala movie : ಧನಂಜಯ್ ಹೊಯ್ಸಳ ಸಿನಿಮಾಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

ಹೊಸ ರೀತಿಯ ನಿರೂಪಣೆ ಹಾಗೂ ಧನಂಜಯ್ ಪಾತ್ರ ಪೋಷಣೆ ‘ಹೊಯ್ಸಳ’ ಸಿನಿಮಾದಲ್ಲಿದೆ ಎನ್ನುವುದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಮಾರ್ಚ್ 30ಕ್ಕೆ ಸಿನಿಮಾವನ್ನು ದೊಡ್ಡದಾಗಿ ರಿಲೀಸ್ ಮಾಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಈ ಸಿನಿಮಾಕ್ಕೆ ಮಾಸ್ತಿ ಸಂಭಾಷಣ್ ಬರೆದಿದ್ದಾರೆ. ಪಾತ್ರಕ್ಕಾಗಿ 8 ಕೆಜಿ ತೂಕ ಇಳಿಸಿಕೊಂಡು ಧನಂಜಯ ನಟಿಸಿದ್ದಾರೆ. ಕಿಚ್ಚ ಸುದೀಪ್ ‘ಹೊಯ್ಸಳ’ ಟೀಸರ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ.

Hoysala Glimpses Release: First Glimpses Release of ‘Hoysala’ Movie: Dolly in Police Look

Comments are closed.