ಮತ್ತೆ ನಟನೆಗೆ ಮರಳಿದ್ರಾ ನಟಿ ಅಮೂಲ್ಯ ? ಶೇರ್ ಮಾಡಿದ್ರು ಸ್ಪೆಷಲ್‌ ವಿಡಿಯೋ

ಚೆಲುವಿನ ಚಿತ್ತಾರದ( Chaluvina Chittara)  ಮೂಲಕವೇ ಸ್ಯಾಂಡಲ್ ವುಡ್ ( Sandalwood) ಚಿತ್ರರಸಿಕರ ಮನಗೆದ್ದ ನಟಿ ಅಮೂಲ್ಯ ಸದ್ಯ ಬ್ರೇಕ್ ಪಡೆದಿದ್ದಾರೆ. ತಾಯ್ತನದ ಸಂಭ್ರಮದಲ್ಲಿರೋ ನಟಿ ಅಮೂಲ್ಯ (Actres Amulya) ನಟನೆ ಬಿಟ್ಟರೂ ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿ‌ ಕಡಿಮೆಯಾಗಿಲ್ಲ.

ಚೆಲುವಿನ ಚಿತ್ತಾರದ( Chaluvina Chittara)  ಮೂಲಕವೇ ಸ್ಯಾಂಡಲ್ ವುಡ್ ( Sandalwood) ಚಿತ್ರರಸಿಕರ ಮನಗೆದ್ದ ನಟಿ ಅಮೂಲ್ಯ ಸದ್ಯ ಬ್ರೇಕ್ ಪಡೆದಿದ್ದಾರೆ. ತಾಯ್ತನದ ಸಂಭ್ರಮದಲ್ಲಿರೋ ನಟಿ ಅಮೂಲ್ಯ (Actres Amulya) ನಟನೆ ಬಿಟ್ಟರೂ ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿ‌ ಕಡಿಮೆಯಾಗಿಲ್ಲ. ನಟಿ ಅಮೂಲ್ಯಾ ಕೂಡ ಅಭಿಮಾನಿಗಳಿಗಾಗಿ ಹೊಸತೊಂದು ವಿಡಿಯೋ ಶೇರ್ ಮಾಡಿದ್ದಾರೆ.

Actress Amulya returned to acting Amuly Sharing Special Vedio Goes Viral
Image Credit : Amulya Instagram

ನಟಿ ಅಮೂಲ್ಯ ಒಂದಿಷ್ಟು ವರ್ಷಗಳಿಂದ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.‌ಮದುವೆ ಬಳಿಕ ಸಿನಿಮಾದಿಂದ ದೂರವಿರೋ ನಟಿ ಅಮೂಲ್ಯ ಈಗ ಅವಳಿ‌ಮಕ್ಕಳ ತಾಯಿ. ಇಬ್ಬರೂ ಮುದ್ದು ಮಕ್ಕಳ ತಾಯಿಯಾಗಿರೋ ಅಮೂಲ್ಯ ತಾಯ್ತನದ ಸಂಭ್ರಮಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

Actress Amulya returned to acting Amuly Sharing Special Vedio Goes Viral
image Credit : Amulya Instagram

ಕೃಷ್ಣಜನ್ಮಾಷ್ಟಮಿ ಸೇರಿದಂತೆ ಹಬ್ಬದ ಹೊತ್ತಿನಲ್ಲಿ ಅವಳಿ ಮಕ್ಕಳನ್ನು ಶೃಂಗರಿಸೋ ಅಮೂಲ್ಯ ತಾವೂ ಬ್ಯೂಟಿಫುಲ್ ಔಟ್ ಫಿಟ್ ಗಳಲ್ಲಿ ರೆಡಿಯಾಗಿ ಪೋಟೋಗಳಿಗೆ ಪೋಸ್ ಕೊಡೋಕೆ ಮರೆಯೋದಿಲ್ಲ. ಕೇವಲ ಫ್ಯಾಮಿಲಿ ಮಾತ್ರವಲ್ಲ ಚಿತ್ರರಂಗವನ್ನೂ ಬಾಲ್ಯದಿಂದ ಬಲ್ಲ ನಟಿ ಅಮೂಲ್ಯ ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಬಂದವರು.

ಇದನ್ನೂ ಓದಿ : ಚಿರು ಸರ್ಜಾ ಜೊತೆ ಧ್ರುವ ಸರ್ಜಾ: ಅಳಿಯಂದಿರ ಬಗ್ಗೆ ಮಾವ ಅರ್ಜುನ್ ಸರ್ಜಾ ಕನಸೇನಿತ್ತು ಗೊತ್ತಾ ?

Actress Amulya returned to acting Amuly Sharing Special Vedio Goes Viral
Image Credit : Amulya Instagram

ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರ ಜೊತೆ ಬಾಲ್ಯದಲ್ಲೇ ನಟಿಸಿ ಅಮೂಲ್ಯ ಯಶ್ ಸೇರಿದಂತೆ ದಿಗ್ಗಜ ನಾಯಕರ ಜೊತೆಗೂ ನಟಿಯಾಗಿ‌‌ ಮಿಂಚಿದವರು. ಸದ್ಯ ಸಿನಿಮಾದಿಂದ ದೂರವಿರೋ ಅಮೂಲ್ಯ ಚಿತ್ರರಂಗದ ನಂಟು ಇನ್ನೂ ಉಳಿಸಿಕೊಂಡಿದ್ದಾರೆ. ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ನಟಿ ಅಮೂಲ್ಯ ಪಾಲ್ಗೊಳ್ಳುತ್ತಲೇ ಇರುತ್ತಾರೆ.

Actress Amulya returned to acting Amuly Sharing Special Vedio Goes Viral
Image Credit : Amulya Instagram

ನಟಿ ಅಮೂಲ್ಯ ಅವರ ಸ್ನೇಹಿತೆಯರ ತಂಡವೊಂದಿದೆ. ಸದ್ಯ ಪ್ರಸಾರವಾಗುತ್ತಿರುವ ಸೀತಾರಾಮಕಲ್ಯಾಣದ ನಾಯಕಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಹಾಗೂ ನಟಿ ಅಮೂಲ್ಯ ಬಾಲ್ಯದ ಸ್ನೇಹಿತರು. ಸ್ಕೂಲ್,ಕಾಲೇಜ್ ಎಲ್ಲವನ್ನೂ ಒಟ್ಟಿಗೆ ಮುಗಿಸಿರೋ ವೈಷ್ಣವಿ ಹಾಗೂ ಅಮೂಲ್ಯ ಇಂದಿನವರೆಗೂ ಈ ಸ್ನೇಹವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಜೂನಿಯರ್‌ ಚಿರು ರಾಯನ್ ರಾಜ್ ಸರ್ಜಾ‌ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್‌  

Actress Amulya returned to acting Amuly Sharing Special Vedio Goes Viral
Instagram : Amuly Instagram

ಈಗ ವೈಷ್ಣವಿ ಹಾಗೂ ನಟಿ ಅಮೂಲ್ಯ ಪೇಂಟಿಂಗ್ ತರಬೇತಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ನಟಿ ಅಮೂಲ್ಯ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಣ್ಣಿನ ಪುಟ್ಟ ಪುಟ್ಟ ಆಟಿಕೆಗಳಿಗೆ ಬಣ್ಣ ಬಳಿಯುವ ವರ್ಕ್ ಶಾಪ್ ನಲ್ಲಿ ನಟಿ ಅಮೂಲ್ಯ,ವೈಷ್ಣವಿ ಅವರ ಇತರ ಸ್ನೇಹಿತೆಯರು ಕಾಣಿಸಿಕೊಂಡಿದ್ದಾರೆ.

Actress Amulya returned to acting Amuly Sharing Special Vedio Goes Viral
Image Credit : Amulya Instagram

ವೈಷ್ಣವಿ ಶೇರ್ ಮಾಡಿರೋ ಈ ವಿಡಿಯೋಕ್ಕೆ ಇರು ನೀ ಜೊತೆ ಬದುಕಿನ ತರಗತಿಯೊಳಗೆ ಸಹಪಾಠಿ ನಾನಾಗಿ ಹಾಜರಿಯ ನೀಡುವೆ ಎಂದು ಕವಿತೆಯನ್ನು ಶೇರ್ ಮಾಡಿದ್ದಾರೆ. ಸುಂದರಿಯರ ಈ ವಿಡಿಯೋ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಲೈಕ್ಸ್ ಒತ್ತಿದ್ದಾರೆ.

ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

Actress Amulya returned to acting Amuly Sharing Special Vedio Goes Viral
Image Credit : Amulya Instagram

ನಟಿ ಅಮೂಲ್ಯ 2001 ರಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದರು. ಲಾಲಿಹಾಡು, ಮಂಡ್ಯ, ಸಜಿನಿ, ಸುಂಟರಗಾಳಿ, ಮಹರಾಜ, ನಮ್ಮ ಬಸವ, ಚಂದು ಮೊದಲಾದ ಸಿನಿಮಾದಲ್ಲಿ ನಟಿಸಿದ್ದಾರೆ. 2007 ರಲ್ಲಿ ತೆರೆಕಂಡ ಚೆಲುವಿನ‌ಚಿತ್ತಾರ ಸಿನಿಮಾ ಗಣೇಶ್ ಜೊತೆ ಅಮೂಲ್ಯ ಗೆ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು.

Actress Amulya returned to acting Amuly Sharing Special Vedio Goes Viral
Image Credit : Amulya Instagram

ಇದಾದ ಬಳಿಕ ಅಮೂಲ್ಯ ಚೈತ್ರದ ಚಂದ್ರಮ,ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ನಾನು ನನ್ನ ಕನಸು, ಕೃಷ್ಣ ರುಕ್ಕು, ಮಾಸ್ತಿಗುಡಿ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. 2017 ರಲ್ಲಿ ಸಿನಿಮಾದಿಂದ ಬ್ರೇಕ್ ಪಡೆದ ನಟಿ ಅಮೂಲ್ಯ ಉದ್ಯಮಿ ಜಗದೀಶ್ ಚಂದ್ರ ಅವರನ್ನು ವಿವಾಹವಾಗಿದ್ದು ಸದ್ಯ ಇಬ್ಬರೂ ಮಕ್ಕಳೊಂದಿಗೆ ಮನೆಯಲ್ಲಿ ತಾಯ್ತನದ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ. ಹಲವಾರು ಭಾರಿ ನಟಿ ಅಮೂಲ್ಯ ಸಿನಿಮಾಕ್ಕೆ ಮರಳೋದು ಯಾವಾಗ ಎಂಬ ಪ್ರಶ್ನೆ ಬಂದಿದ್ದರೂ ಅಮೂಲ್ಯ ಮಾತ್ರ ಸಿನಿಮಾಕ್ಕೆ ಮರಳೋ ಯಾವುದೇ ಸೂಚನೆ ನೀಡಿಲ್ಲ.

Actress Amulya Comeback to acting Sandalwood Amuly Sharing Special Vedio Goes Viral

Comments are closed.