ಬಹುಭಾಷಾ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮತ್ತಷ್ಟು ಸೌಂದರ್ಯವೃದ್ಧಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಂಚಲನಮೂಡಿಸಿದ್ದಾರೆ. ಖುಷ್ಬೂ ಪೋಟೋ ಎಷ್ಟು ಹವಾ ಸೃಷ್ಟಿಸಿದೆ ಎಂದರೇ ಅಭಿಮಾನಿಯೊಬ್ಬ ಖುಷ್ಬೂಗೆ ಪ್ರಪೋಸ್ ಮಾಡಿದ್ದಾರೆ.

ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರೋ ಖುಷ್ಬೂ ಇತ್ತೀಚಿಗಷ್ಟೇ ೧೪ ಕೆಜಿ ವೇಟ್ ಇಳಿಸಿಕೊಂಡು ಬದುಕುವ ಬಳ್ಳಿಯಂತಾಗಿದ್ದಾರೆ. ಅಷ್ಟೇ ಅಲ್ಲ ಟಿನೇಜ್ ಹುಡುಗಿಯರಂತೆ ಪೋಟೋಶೂಟ್ ಮಾಡಿಸಿಕೊಂಡು ಪೋಟೋ ಶೇರ್ ಮಾಡಿದ್ದಾರೆ.

ಖುಷ್ಬೂ ಪೋಟೋ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡೋಕೆ ಮುಗಿ ಬಿದ್ದಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬ ನಿಮ್ಮನ್ನು ನಾನು ಮದ್ವೆ ಅಗಬೇಕು ಎಂದಿದ್ದಾನೆ.
ಅಭಿಮಾನಿಯ ಈ ಆಸೆಗೆ ಲವಲವಿಕೆಯಿಂದಲೇ ಫನ್ನಿಯಾಗಿ ಆನ್ಸರ್ ಮಾಡಿರೋ ಖುಷ್ಬೂ,ಅಯ್ಯೋ ತುಂಬಾ ಲೇಟಾಯ್ತುನೀವು ಕೇಳಿದ್ದು, ಆದ್ರೂ ಒಮ್ಮೆ ಗಂಡನಿಗೆ ಕೇಳಿನೋಡ್ತಿನಿ ಎಂದು ಪ್ರತಿಕ್ರಿಯಿಸಿದ್ದಾರೆ.
ಖುಷ್ಬೂ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ನಗುವ ಇಮೋಜಿ ಜೊತೆ ಪ್ರತಿಕ್ರಿಯೆ ನೀಡ್ತಿದ್ದಾರೆ.ಸದ್ಯ ಸಿನಿಮಾಗಳಿಂದ ದೂರ ಉಳಿದಿರೋ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಗೆ ಸೇರಿದ್ದು, ಕಳೆದ ಚುನಾವಣೆಯಲ್ಲಿ ಸೋಲುಕಂಡಿದ್ದಾರೆ.