Hansika Motwani’s mehendi celebration : ಜೈಪುರ ಕೋಟೆ ಅರಮನೆಯಲ್ಲಿ ನಟಿ ಹನ್ಸಿಕಾ ಮೋಟ್ವಾನಿ ಮೆಹಂದಿ ಸಂಭ್ರಮ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. (Hansika Motwani’s mehendi celebration) ನಟಿ ಹನ್ಸಿಕಾ ಮೋಟ್ವಾನಿ ಆತ್ಮೀಯ ಸ್ನೇಹಿತ ಸೊಹೈಲ್‌ ಕಥುರಿಯಾ ಅವರೊಂಗೆ ಹಸಮಣೆ ಏರಲಿದ್ದಾರೆ. ಗುರುವಾರ ಸಂಜೆ ಜೈಪುರದ ಭವ್ಯವಾದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ನವದಂಪತಿಗಳು ತಮ್ಮ ಮೆಹೆಂದಿ ಸಮಾರಂಭವನ್ನು ಆಚರಿಸಿಕೊಂಡಿದ್ದಾರೆ.

ಇವರ ಮೆಹೆಂದಿ ಸಮಾರಂಭದ ಕೆಲವು ಪೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಹನ್ಸಿಕಾ ಕೆಂಪು ಬಣ್ಣದ ಸೂಟ್‌ನಲ್ಲಿ ವಧುವಿನಂತೆ ಸರಳ ಮತ್ತು ಸುಂದರವಾಗಿ ಕಾಣಿಸಿಕೊಂಡರೆ, ಸೊಹೈಲ್‌ ಪೀಚ್ ಚಿಕಂಕರಿ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಹನ್ಸಿಕಾ ಮತ್ತು ಸೊಹೈಲ್‌ ಇಬ್ಬರೂ ತಮ್ಮ ಸುಂದರವಾದ ಮೆಹೆಂದಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಪೂರ್ವದ ಸಂಭ್ರಮವನ್ನು ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚಿಗೆಷ್ಟೇ ಉದ್ಯಮಿ ಸೊಹೈಲ್‌ ಪ್ಯಾರಿಸ್‌ನ ಐಫೆಲ್ ಟವರ್‌ನ ಎದರು ಹನ್ಸಿಕಾಗೆ ಪ್ರಪೋಸ್‌ ಮಾಡಿದ್ದರು. ಈ ಕುರಿತು ಹನ್ಸಿಕಾ ಅಧಿಕೃತವಾಗಿ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದ ಹಂಚಿಕೊಂಡಿದ್ದಾರೆ. ನಟಿ ಹನ್ಸಿಕಾ ಉದ್ಯಮಿ ಸೊಹೈಲ್‌ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮಹೆಂದಿ ಸಂಭ್ರಮಕ್ಕಾಗಿ, ಹನ್ಸಿಕಾ ಪ್ರಕಾಶಮಾನವಾದ ಕೆಂಪು ಮತ್ತು ಕಿತ್ತಳೆ ಮುದ್ರಿತ ಮತ್ತು ಕಸೂತಿ ಉಡುಪಿನಲ್ಲಿ ಧರಿಸಿರುತ್ತಾರೆ.

ಇದನ್ನೂ ಓದಿ : Aishwarya Upendra : ಉಪ್ಪಿ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ : ದೊಡ್ಮನೆ ಯುವರಾಜ್‌ಗೆ ಐಶ್ವರ್ಯಾ ನಾಯಕಿ

ಇದನ್ನೂ ಓದಿ : Aira Production house: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ.. ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್..?

ಇದನ್ನೂ ಓದಿ : Divinestar Rishabh Shetty‌ : ತುಳುವಿನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಮಹತ್ವದ ಸಂದೇಶ ಕೊಟ್ಟ ರಿಷಬ್ ಶೆಟ್ಟಿ

ನಟಿ ಹನ್ಸಿಕಾ ಕೂದಲನ್ನು ಸಡಿಲವಾಗಿ ಕಡಿಮೆ ಪೋನಿಟೇಲ್‌ನಲ್ಲಿ ಕಟ್ಟಿಕೊಂಡಿದ್ದಾರೆ. ಅವರು ಸಾಂಪ್ರದಾಯಿಕ ಉಡುಗೆ ಜೊತೆಗೆ ಬೆಳ್ಳಿಯ ಆಭರಣಗಳನ್ನು ಧರಿಸಿ, ಸಣ್ಣ ಬಿಂದಿಯನ್ನು ಹಣೆಗೆ ಇಟ್ಟಿದ್ದಾರೆ. ಇವರ ಮದುವೆ ಸಮಾರಂಭವು ಡಿಸೆಂಬರ್ 4 ರಂದು ಜೈಪುರದ 450 ವರ್ಷಗಳಷ್ಟು ಹಳೆಯದಾದ ಮುಂಡೋಟಾ ಕೋಟೆ ಅರಮನೆಯಲ್ಲಿ ಹನ್ಸಿಕಾ ಸೋಹೇಲ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಜೈಪುರದಲ್ಲಿ ನವದಂಪತಿಗಳ ವಿವಾಹ ಪೂರ್ವ ಆಚರಣೆಗಳು ಈಗಾಗಲೇ ಆರಂಭವಾಗಿದೆ. ಕುಟುಂಬಗಳು ಸೂಫಿ ನೈಟ್ ಅನ್ನು ಹೊಂದಿದ್ದು, ನಂತರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Actress Hansika Motwani’s mehendi celebration at Jaipur Fort Palace

Comments are closed.