actress meghana raj : ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟಿ ಮೇಘನಾ ರಾಜ್ ಪ್ರತಿಷ್ಠಿತ FOG HERO ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸೋದ ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ ಆಯೋಜಿಸಿದ್ದ ಫೆಸ್ಟಿವಲ್ ಆಫ್ ಗ್ಲೋಬ್ ಸಮಾರಂಭದ ಪ್ರಯುಕ್ತ ನಟಿ ಮೇಘನಾ ರಾಜ್ಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಕಳೆದ 40 ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು ಹಿಂದೊಮ್ಮೆ ಬಿಗ್ ಬಿ ಅಮಿತಾಬ್ ಬಚ್ಛನ್ ಕೂಡ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ಬಾರಿ ಈ ಪ್ರಶಸ್ತಿಯು ಕನ್ನಡದ ತಾರೆ ಮೇಘನಾ ರಾಜ್ಗೆ ಸಂದಿದೆ.
ಭಾರತದ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮದ ಪ್ರಯುಕ್ತ ಈ ಹಬ್ಬವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಹೀಗಾಗಿ ಆಗಸ್ಟ್ ತಿಂಗಳಲ್ಲಿಯೇ ಈ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಬಾರಿ ಆಗಸ್ಟ್ 19,20 ಹಾಗೂ 21ರಂದು ಈ ಕಾರ್ಯಕ್ರಮ ನಡೆಯಲಿದೆ. ಕ್ಯಾಲಿಫೋರ್ನಿಯಾದ ಸ್ಥಳೀಯ ನಾಯಕರು ಸೇರಿದಂತೆ ಲಕ್ಷಕ್ಕೂ ಅಧಿಕ ಜನರು ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜನೆಯಾಗುತ್ತದೆ. ಈ ಸಮಾರಂಭದಲ್ಲಿ ಭಾರತದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದರಲ್ಲೂ ಹೆಚ್ಚಾಗಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರಿಗೆಯೇ ಈ ಪ್ರಶಸ್ತಿ ಸಂದುವುದು ಹೆಚ್ಚು. ಈಗಾಗಲೇ ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ , ಧರ್ಮೇಂದ್ರ ಹಾಗೂ ಆಶಾ ಪರೇಕ್ ಸೇರಿದಂತೆ ಅನೇಕರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೀಗ ಈ ಸಾಲಿಗೆ ನಟಿ ಮೇಘನಾ ರಾಜ್ ಕೂಡ ಸೇರಿದಂತಾಗಿದೆ.
FOG HERO ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾತನಾಡಿದ ನಟಿ ಮೇಘನಾ ರಾಜ್, ಅಮಿತಾಬ್ ಬಚ್ಚನ್ರಂತಹ ಗಣ್ಯರು ಸ್ವೀಕರಿಸಿದ ಪ್ರಶಸ್ತಿಗೆ ನಾನು ಆಯ್ಕೆಯಾಗಿದ್ದೇನೆ ಎಂಬುದೇ ನನಗೆ ಸಂತಸದ ವಿಚಾರವಾಗಿದೆ. ನನ್ನ ತಂದೆ ನನಗೆ ಈ ವಿಚಾರವನ್ನು ತಿಳಿಸಿದರು. ಕನ್ನಡ ಚಿತ್ರರಂಗ ಪ್ರಸ್ತುತ ವಿಶ್ವಾದ್ಯಂತ ಹೆಸರು ಗಳಿಸಿದೆ. ಓರ್ವ ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾನೇ ಖುಷಿಯಿದೆ ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡರು.
ಕನ್ನಡತಿ ಮೇಘನಾ ರಾಜ್ ಈ ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದ್ದಾರೆ. ನಟಿ ಮೇಘನಾ ರಾಜ್ ಆಗಸ್ಟ್ 21ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಇದನ್ನು ಓದಿ : Tasteless Kebabs : ಪತ್ನಿ ಮಾಡಿಕೊಟ್ಟ ಕಬಾಬ್ ರುಚಿಯಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ..!
ಇದನ್ನೂ ಓದಿ : Salman Khan : ಸಲ್ಮಾನ್ ಖಾನ್ಗೆ ಲೈಸೆನ್ಸ್ ಪರವಾನಗಿ ನೀಡಿದ ಮುಂಬೈ ಪೊಲೀಸ್ ಇಲಾಖೆ
actress meghana raj with fog hero award for excellence in the indian film industry for over a decade