A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

ಎಲ್ಲೆಲೂ ಹಸಿರು, ಪ್ರಶಾಂತ ವಾತಾವರಣ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸಿಗಲು ಸಾಧ್ಯ. ಹಳ್ಳಿಯ (village) ಜನಜೀವನ, ಸಂಸ್ಕೃತಿ ಇವು ಭಾರತದ ಹಿರಿಮೆ (the glory of India). ಭಾರತದ ಕೆಲವು ಹಳ್ಳಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ (A Trip to the Village). ಅಲ್ಲಿನ ಪ್ರಕೃತಿ ಸೌಂದರ್ಯವೇ ಅಷ್ಟು ಚೆಂದ. ಸುಂದರ ಸಮುದಾಯಗಳು, ಅತ್ಯುತ್ತಮ ಪರಿಸರ ಪ್ರವಾಸೋದ್ಯಮ ಮತ್ತು ಪರಂಪರೆ ಕಾಣಸಿಗುವುದು ಹಳ್ಳಿಗಳಲ್ಲಿ ಮಾತ್ರ. ನಗರದಿಂದ ದೂರ ಇರುವ ಕುಗ್ರಾಮಗಳ ನಿಸರ್ಗ ಸೌಂದರ್ಯ, ಒತ್ತಡದ ಜೀವನದಿಂದ ಹೊರಬರಲು ಸಹಾಯ ಮಾಡಬಲ್ಲದು. ಮನಸ್ಸಿಗೆ ನೆಮ್ಮದಿ, ಶಾಂತಿ ನೀಡಿ, ಹೊಸ ಚೈತನ್ಯ ನೀಡಬಲ್ಲದು.

ಅದಕ್ಕಾಗಿಯೇ ಮುಂಬರುವ ರಜಾ ದಿನಗಳಲ್ಲಿ ಟ್ರಿಪ್‌ ಹೋಗಬೇಕೆಂದುಕೊಂಡಿದ್ದರೆ ಖಂಡಿತಾ ಈ ಹಳ್ಳಿಗಳಿಗೆ ಭೇಟಿಕೊಡಿ. ನಿಸರ್ಗದ ಮಡಿಲಲ್ಲಿ ಸ್ವಲ್ಪ ಕಾಲ ಕಳೆಯುವ ಮಜವೇ ಬೇರೇ. ಇಲ್ಲಿ ಹೇಳಿರುವ ಹಳ್ಳಿಗಳು ನಿಮ್ಮ ಅಚ್ಚುಮೆಚ್ಚಿನ ತಾಣವಾಗಬಲ್ಲದು.

ಪೂವಾರ್ :
ಇದು ಕೇರಳದ ಸುಂದರ ಕುಗ್ರಾಮವಾಗಿದ್ದು ಪ್ರವಾಸಿಗರಿಗೆ ಚಿರಪರಿಚಿತವಾಗಿದೆ. ಕೇರಳ ರಾಜ್ಯದ ತಿರುವುನಂತಪುರದ ದಕ್ಷಿಣ ತುದಿಯಲ್ಲಿರುವ ಪೂವರ್‌ ಗ್ರಾಮ ಭಾರತದ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿದೆ. ಇಲ್ಲಿನ ಕಡಲತೀರಗಳು ಸುಂದರ ಮತ್ತು ಸ್ವಚ್ಛ ವಾತಾವರಣ ಮನಸ್ಸಿಗೆ ಆನಂದ ನೀಡುತ್ತದೆ. ನಿಮ್ಮ ಮುಂದಿನ ಪ್ರವಾಸ ಕೇರಳವಾಗಿದ್ದರೆ ಈ ಹಳ್ಳಿಗೆ ಖಂಡಿತ ಭೇಟಿ ಕೊಡಿ. ಇಲ್ಲಿನ ಕಡಲತೀರಗಳಲ್ಲಿ ವಿಶ್ರಾಂತಿ ಪಡೆದು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ.


ಮಲಾನಾ :
ನಿಮಗೆ ದಟ್ಟ ಅರಣ್ಯ ಪ್ರದೇಶ ಮತ್ತು ಪರ್ವತಗಳಿಗೆ ಹೋಗುವುದು ಇಷ್ಟವೇ? ಹಾಗಾದರೆ, ಭಾರತದ ಅತ್ಯಂತ ಸುಂದರವಾದ ವಸಾಹತುಗಳಲ್ಲಿ ಒಂದಾದ ಈಶಾನ್ಯ ಕುಲು ಕಣಿವೆಯಲ್ಲಿರುವ ಮಲಾನಾ ಎಂಬ ಐತಿಹಾಸಿಕ ಮತ್ತು ದೂರದ ಹಳ್ಳಿಗೆ ನಿಮ್ಮ ಪ್ರಯಾಣ ಬೆಳಸಿ. ಸುಂದರವಾದ ದೃಶ್ಯಾವಳಿ ಮತ್ತು ಶುದ್ಧ ಗಾಳಿಗಾಗಿ ಮಾತ್ರವಲ್ಲದೆ ಅನನ್ಯ ಪ್ರಾಣಿ ಸಂಕುಲದ ಬಗ್ಗೆ ತಿಳಿದುಕೊಳ್ಳಲು ಈ ಸ್ಥಳಕ್ಕೆ ಭೇಟಿ ನೀಡಿ. ಇದು ಹಿಮಾಚಲ ಪ್ರದೇಶದ ಒಂದು ಕಣಿವೆ ಪ್ರದೇಶವಾಗಿದೆ. ದಂತಕಥೆಯ ಪ್ರಕಾರ, ಅಲೆಕ್ಸಾಂಡರ್‌ನ ಸೈನ್ಯದ ಒಂದು ಗುಂಪು ಬೇರ್ಪಟ್ಟಿತು ಮತ್ತು ಈ ಭವ್ಯವಾದ ಕಣಿವೆಯಲ್ಲಿ ನೆಲೆಸಲು ನಿರ್ಧರಿಸಿತು. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲಿ ಒಂದಾಗಿ, ಜನರು ತಮ್ಮ ಸಂಪ್ರದಾಯಗಳನ್ನು ಕಾಯ್ದುಕೊಂಡು, ರಕ್ಷಿಸುತ್ತಾ ಬಂದಿದ್ದಾರೆ. ಈ ಸ್ಥಳ, ನಿಮ್ಮ ಪ್ರವಾಸ ಜೀವನದ ಒಂದು ಸುಂದರ ನೆನಪಾಗಬಲ್ಲದು.

ಕಸೋಲ್ :
ಇದು ಮೊದಲು ಹಿಮಾಚಲ ಪ್ರದೇಶದ ಒಂದು ಚಿಕ್ಕ ಕುಗ್ರಾಮವಾಗಿತ್ತು. ಆದರೆ, ಈಗ ಉತ್ತರ ಭಾರತದಲ್ಲಿ ಜನಪ್ರಿಯ ವಾರಾಂತ್ಯದ ತಾಣವಾಗಿದೆ. ಅದಲ್ಲದೇ ಭಾರತದ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿದೆ. ವಾರಾಂತ್ಯದಲ್ಲಿ ಅನೇಕ ಜನರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಏಕೆಂದರೆ ಇದು ದೆಹಲಿಯಿಂದ ಒಂದು ರಾತ್ರಿಯ ಪ್ರಯಾಣವಾಗಿದೆ. ಕಸೋಲ್‌ ಅನ್ನು ‘ಲಿಟಲ್‌ ಇಸ್ರೇಲ್‌’ ಎಂದೂ ಕರೆಯುತ್ತಾರೆ. ಕಸೋಲ್ ಯುವಜನರಿಗೆ ಜನಪ್ರಿಯ ತಾಣ, ಏಕೆಂದರೆ ಟ್ರಕಿಂಗ್‌ಗೆ ಇದು ಸೂಕ್ತ ತಾಣ.

ಇದನ್ನೂ ಓದಿ : Visa Free Destinations:ಈ ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು ಎಂದರೆ ನಂಬುತ್ತೀರಾ?

ಇದನ್ನೂ ಓದಿ : Shimla Tourist Places: ಶ್ಯಾಮಲಾ ದೇವಿಯಿಂದ ಹುಟ್ಟಿಕೊಂಡ ‘ಶಿಮ್ಲಾ’; ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳವಿದು

(A Trip to the Village Don’t miss these beautiful nature)

Comments are closed.