ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದಲ್ಲಿ ಮಿಂಚಿದ ನಟಿ ನಿಧಿ ಸುಬ್ಬಯ್ಯ ದಾಂಪತ್ಯದ ಅಸಲಿ ಸತ್ಯ ಈಗ ಬಯಲಾಗಿದೆ.

ನಿಧಿ ಸುಬ್ಬಯ್ಯ ಬಿಗ್ ಬಾಸ್ ಕನ್ನಡದ 8 ನೇ ಸೀಸನ್ ಪ್ರವೇಶಿಸಿ ದಾಗಿನಿಂದಲೂ ಅವರ ವೈಯಕ್ತಿಕ ಬದುಕಿನ ಬಗ್ಗೆ ಗುಸುಗುಸು ಮಾತುಕತೆ ನಡೆದೇ ಇತ್ತು.

ಆದರೆ ಇದ್ಯಾವುದಕ್ಕೂ ನಟಿ ನಿಧಿ ಸುಬ್ಬಯ್ಯ್ ಸೊಪ್ಪು ಹಾಕಿರಲಿಲ್ಲ. ಆದರೆ ಈಗ ಕೊರೋನಾ ಕಾರಣಕ್ಕೆ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತಿದ್ದು ಎಲ್ಲರನ್ನೂ ವಿಜೇತರೆಂದು ಘೋಷಿಸಲಾಗಿದೆ.

ಈ ಮಧ್ಯೆ ಬಿಗ್ ಬಾಸ್ ಶೋ ಮುಗಿಸಿ ಮೈಸೂರಿನ ತವರು ಮನೆಗೆ ಮರಳಿದ ನಿಧಿ ಸುಬ್ಬಯ್ಯ ಪೇಸ್ ಬುಕ್ ಲೈವ್ ನಡೆಸಿದ್ದರು. ಈ ವೇಳೆ ಹಲವರು ವೈವಾಹಿಕ ಬದುಕಿನ ಬಗ್ಗೆ ಪ್ರಶ್ನೆ ಕೇಳಿದ್ದರು.

ಕೆಲಕಾಲ ಪ್ರಶ್ನೆಗಳನ್ನು ಅವಾಯ್ಡ್ ಮಾಡಿದ್ದರೂ ಕೊನೆಗೆ ಉತ್ತರಿಸಿದ ನಿಧಿ, ನನ್ನ ಮದುವೆ ಬಗ್ಗೆ ಏನು ಹೇಳಲಿ? ಕೆಲವರು ಖುಷಿಯ ವಿಚಾರದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಇನ್ನು ಕೆಲವರು ಬೇಸರದ ಮಾತನಾಡುತ್ತಾರೆ.

ಆದರೆ ನಾನು ಸ್ವಲ್ಪ ಭಿನ್ನ. ನನಗೆ ಬೇಸರದ ಸಂಗತಿ ಬಗ್ಗೆ ಮಾತನಾಡ ಲು ಮನಸ್ಸಿಲ್ಲ. ಹೌದು, ನಾನು ಮದುವೆಯಾಗಿದ್ದೆ. ಆದರೆ ಆ ಮದುವೆ 10 ತಿಂಗಳಿಗೆ ಕೊನೆಯಾಯಿತು. ನಾನು ಈ ಬಗ್ಗೆ ನನ್ನ ತಾಯಿಯ ಜೊತೆಗೂ ಚರ್ಚಿಸಿಲ್ಲ. ಇದರಲ್ಲಿ ಹೇಳಿಕೊಳ್ಳುವಂತ ಸಂಗತಿ ಏನಿಲ್ಲ ಎಂದಿದ್ದಾರೆ.

ನಿಧಿ ಸುಬ್ಬಯ್ಯ 2017 ರಲ್ಲಿ ಉದ್ಯಮಿ ಲವೇಶ್ ಜೊತೆ ಕೊಡಗಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಳಿಕ ಅಮೇರಿಕದಲ್ಲಿ ಕೆಲಕಾಲ ವಾಸ್ತವ್ಯ ಹೂಡಿದ್ದ ನಿಧಿಬಳಿಕ ಅಲ್ಲಿಂದ ಹಿಂತಿರುಗಿದ್ದರು. ಆದರೆ ಮದುವೆ ಬಗ್ಗೆ ಯಾವುದೇ ವಿಚಾರ ಬಹಿರಂಗ ಪಡಿಸಿರಲಿಲ್ಲ.

