Actress Prema : ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ

ಕಳೆದ ವಾರ ನಟಿ ಪ್ರೇಮಾ (Actress Prema)ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಉಡುಪಿಯ ಕಾಪುವಿನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ನಟಿ ಪ್ರೇಮ ಭೇಟಿ ನೀಡಿದ್ದರು. ಎರಡನೇ ಮದುವೆಯ ಕುರಿತಾಗಿ ದೇವರ ಬಳಿ ಕೇಳಲು ಪ್ರೇಮ ಅಲ್ಲಿಗೆ ತೆರಳಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇನ್ನು ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯಿಸದೇ ಇದ್ದ ನಟಿ ಪ್ರೇಮ ಈಗ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಅಂದು ತಾನು ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಗೆಳತಿಯ ಮದುವೆ ಇದ್ದ ಕಾರಣದಿಂದ ಎಂದು ತಿಳಿಸಿದ ಪ್ರೇಮ ತನ್ನ ಮದುವೆ ಎಂದು ಸುದ್ದಿ ಹಬ್ಬಿದ್ದರ ವಿರುದ್ಧ ಕಿಡಿಕಾರಿದರು. ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುವುದು ಬೇಡ, ನಾನು ಎಲ್ಲಿಯೂ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಎರಡನೇ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ ಪ್ರೇಮ ನಾನು ಈಗಲೇ ಮದುವೆಯಾಗುವುದಿಲ್ಲ, ಜೀವನದಲ್ಲಿ ದೊಡ್ಡ ಸಾಧನೆ ಮಾಡುವುದು ಸಾಕಷ್ಟಿದೆ, ಮದುವೆಯಾಗಲು ಕಂಕಣ ಭಾಗ್ಯ ಕೂಡಿ ಬರಬೇಕು. ಆ ಸಮಯ ಬಂದಾಗ ನಾನೇ ತಿಳಿಸುತ್ತೇನೆ, ನಾನು ಓಡಿಹೋಗಿ ಮದುವೆಯಾಗಲ್ಲ ಎಂದು ಹೇಳಿಕೆ ನೀಡಿದರು.

ಇದನ್ನೂ ಓದಿ : ಮಾಲಾಶ್ರೀ, ಭೂಮಿ ಶೆಟ್ಟಿ ನಟನೆಯ ಕೆಂಡದ ಸೆರಗು ಟೀಸರ್ ರಿಲೀಸ್

ಇದನ್ನೂ ಓದಿ : “ಕ್ರಾಂತಿ” ಸಿನಿಮಾ ಪ್ರತಿಯೊಬ್ಬರೂ ನೋಡಲೇ ಬೇಕು : ಯಾಕೆ ಅನ್ನೋದಕ್ಕೆ ಇಲ್ಲಿವೆ 5 ಕಾರಣಗಳು

ಇದನ್ನೂ ಓದಿ : ಪಾನ್ ಮಸಾಲ ಜಾಹೀರಾತು ನಿರಾಕರಿಸಿದ್ದ ಕೆಜಿಎಫ್‌ ನಟ ಯಶ್ ‘ಪೆಪ್ಸಿಗೆ ಐ ಲವ್‌ಯು’ ಎಂದಿದ್ಯಾಕೆ ? ಸಂಭಾವನೆ ಎಷ್ಟು ಗೊತ್ತಾ ?

ಅಷ್ಟೇ ಅಲ್ಲದೇ ಇಲ್ಲಿಯವರೆಗೂ ತನ್ನನ್ನು ಬೆಂಬಲಿಸುತ್ತಾ, ಬೆಳೆಸುತ್ತಾ ಬಂದಿರುವ ಪ್ರೇಕ್ಷಕರಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಯೋಜನೆ ಇದೆ. ಹಾಗೇ ನಟಿ ಪ್ರೇಮ ನಾನು ಮದುವೆ ಕುರಿತಾಗಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ, ಅದು ಮಹಿಳೆಯ ವೈಯಕ್ತಿಕ ವಿಚಾರ, ಇಂಡಸ್ಟ್ರಿಯಲ್ಲಿ ನಾನು ಗಟ್ಟಿಯಾಗಿ ನಿಲ್ಲಬೇಕೆಂದರೆ ಹಲವಾರು ಅಡೆತಡೆಗಳು ಬಂದವು. ಆದರೆ ಅದ್ಯಾವುದಕ್ಕೂ ನಾನು ಜಗ್ಗಲಿಲ್ಲ ಎಂದೂ ಸಹ ಹೇಳಿಕೆ ನೀಡಿದರು. ಈ ಹಿಂದೆ ಕೂಡ ನಟಿ ಪ್ರೇಮಾ ರೆಡಿಯೋ ಜಾಕಿಯನ್ನು ಎರಡನೇ ಮದುವೆ ಆಗಲಿದ್ದಾರೆ ಎನ್ನುವ ವಂದತಿಗಳು ಹರಿದಾಡಿದ್ದು, ಆ ಹೇಳಿಕೆಗೂ ಕೂಡ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ.

Actress Prema clarified about the second marriage

Comments are closed.