ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಇಂದು (ನವೆಂವರ್ 29) ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು (Actress Ramya Birthday) ಆಚರಿಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗವನ್ನು ಬಿಟ್ಟು 7ವರ್ಷ ಕಳೆದರೂ ಸಿನಿಪ್ರೇಕ್ಷಕರಿಗೆ ಅವರ ಮೇಲಿನ ಅಭಿಮಾನ ಇಂದಿಗೂ ಕಡಿಮೆ ಆಗಿಲ್ಲ. ಹೆಚ್ಚಿನ ಸ್ಟಾರ್ ಸೆಲೆಬ್ರಿಟಿಗಳು ಬ್ರೇಕ್‌ಗಾಗಿ ವಿದೇಶಿ ಪ್ರಯಾಣವನ್ನು ಮಾಡುತ್ತಾರೆ. ನಟಿ ರಮ್ಯಾ ಕೂಡ ವಿದೇಶಿ ಪ್ರಯಾಣವನ್ನು ಬೆಳೆಸಿದ್ದು, ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಜಪಾನಿಗೆ ತೆರಳಿದ್ದಾರೆ. ರಮ್ಯಾ ಜಪಾನ್ ಹೇಗಿದೆ ಎನ್ನುವ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನವೆಂಬರ್ 29, 1982ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆ- ತಾಯಿ ಮೂಲತಃ ಮಂಡ್ಯದವರು. ಇವರ ಹುಟ್ಟು ಹೆಸರು ದಿವ್ಯ ಸ್ಪಂದನಾ. ರಮ್ಯಾ 2003ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ “ಅಭಿ” ಸಿನಿಮಾದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳ ಮನಗೆದಿದ್ದಾರೆ. ನಂತರ ಎಕ್ಸ್‌ಕ್ಯೂಸ್ ಮಿ ಸಿನಿಮಾದಲ್ಲಿ ನಟಿಸಿದರು. ನಂತರದ ದಿನಗಳಲ್ಲಿ ತೆಲುಗು ತಮಿಳು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುದೀಪ್, ದರ್ಶನ, ಯಶ್, ಉಪೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಅವರು ನಟಿಸಿದ “ತನನಂ ತನನಂ” ಮತ್ತು “ಸಂಜು ವೆಡ್ಸ್ ಗೀತಾ” ಸಿನಿಮಾಗಳಿಗೆ ಬೆಸ್ಟ್ ನಾಯಕಿಯಾಗಿ ಫಿಲಂಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಂತರ ದಿನಗಳಲ್ಲಿ ರಮ್ಯಾ ರಾಜಕೀಯದಲ್ಲಿ ಬ್ಯುಸಿ ಆಗಿದ್ದರು. ಆಮೇಲೆ ರಾಜಕೀಯ ಜೀವನವನ್ನು ತೊರೆದಿದ್ದಾರೆ. ಹಲವು ವರ್ಷಗಳ ನಂತರ ಮತ್ತೆ ಅವರಿಗೆ ಸಿನಿಮಾರಂಗದಲ್ಲಿ ಆಸಕ್ತಿ ಬೆಳೆಯಿತು. ಇತ್ತೀಚೆಗಷ್ಟೇ “ಆಪಲ್ ಬಾಕ್ಸ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಮ್ಯಾ “ಉತ್ತರಕಾಂಡ” ಸಿನಿಮಾದ ಮೂಲಕ ನಟನೆಗೆ ಮರಳಿದ್ದಾರೆ.
ಇದನ್ನೂ ಓದಿ : Aditi Prabhudeva and Yashas: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ
ಇದನ್ನೂ ಓದಿ : Amrutha Prem: ನಾಯಕಿಯಾಗಿ ಪ್ರೇಮ್ ಪುತ್ರಿ ಅಮೃತಾ ಸ್ಯಾಂಡಲ್ ವುಡ್ ಗೆ ಎಂಟ್ರಿ
ಇದನ್ನೂ ಓದಿ : Sunny Leone in UI Movie : ಸದ್ದಿಲ್ಲದೇ ಉಪೇಂದ್ರ ಸಿನಿಮಾಕ್ಕೆ ಕಾಲಿಟ್ಟ ಹಾಟ್ ತಾರೆ ಸನ್ನಿ ಲಿಯೋನ್
ಈ ಸಿನಿಮಾವನ್ನು ವಿಜಯ ಕಿರಗಂದೂರು ಅರ್ಪಿಸುತ್ತಿದ್ದು, ಕೆ.ಆರ್.ಜಿ. ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ನವೆಂಬರ್ 6ರಂದು ಈ ಸಿನಿಮಾದ ಮುಹೂರ್ತ ನೆರವೇರಿದೆ. “ರತ್ನನ್ ಪ್ರಪಂಚ” ಯಶಸ್ಸಿನ ನಂತರ ನಿರ್ದೇಶಕ ರೋಹಿತ್ ಪದಕಿ, ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್, ನಟ ಧನಂಜಯ್ ಮತ್ತೆ ಜೊತೆಯಾಗಿದ್ದಾರೆ.
Actress Ramya Birthday: Actress Ramya celebrated her birthday in Japan