Used EV Purchase : ನಿಮಗಿದು ಗೊತ್ತಾ; ಸೆಕೆಂಡ್‌ ಹ್ಯಾಂಡ್‌ ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವ ಮೊದಲು ಏನೇನು ಚೆಕ್‌ ಮಾಡಬೇಕು ಎಂದು…

ಭಾರತದಲ್ಲಿ ಇಲೆಕ್ಟ್ರಿಕ್‌ ವೆಹಿಕಲ್‌ (EV) ಮಾರುಕಟ್ಟೆ ಹಿಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಇಲೆಕ್ಟ್ರಿಕ್‌ ವಾಹನಗಳ ಕಡೆಗೆ ಆಸಕ್ತಿಯೂ ಹೆಚ್ಚಾಗಿದೆ. ಆದರೆ ಇಲೆಕ್ಟ್ರಿಕ್‌ ವಾಹನಗಳ ಬೆಲೆ ಹೆಚ್ಚಿದೆ. ಇದರಿಂದ ಖರೀದಿಸುವ ಮೊದಲು ಚಿಂತಿಸುವಂತಾಗಿದೆ. ಅಥರ್‌ 450X ಎಲೆಕ್ಟ್ರಿಕ್‌ ಸ್ಕೂಟರ್‌ ಸದ್ಯ ಭಾರತದಲ್ಲಿ ಮಾರಾಟದಲ್ಲಿರುವ ಅತ್ಯುತ್ತಮ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಇದರ ಬೆಲೆ ಸುಮಾರು 1.40 ಲಕ್ಷ ರೂ. ಆದರೆ ಇದರ ಸಮೀಪದ ಪೆಟ್ರೋಲ್‌ ಚಾಲಿತ ಪ್ರತಿರೂಪವಾದ ಟಿವಿಎಸ್‌ Ntorq 125ನ ಬೆಲೆ ಸುಮಾರು 88,000. ಅಂದರೆ ಸುಮಾರು 50,000 ರೂ. ಅಂತರ. ಕಾರುಗಳ ವಿಷಯದಲ್ಲೂ ಅದೇ ಕಥೆ. ಟಾಟಾ ನೆಕ್ಸಾನ್ ಡೀಸೆಲ್ AMT ರೂಪಾಂತರದ ಬೆಲೆ 12.95 ಲಕ್ಷ ರೂ. ಆದರೆ ಟಾಟಾ ನೆಕ್ಸಾನ್ EV ಯ ಟಾಪ್‌ ಎಂಡ್‌ ರೂಪಾಂತರದ ಬೆಲೆ 16.56 ಲಕ್ಷ ರೂ. ಇವರಡೆರ ಮಧ್ಯೆ ಬೆಲೆಗಳಲ್ಲಿ ವ್ಯತ್ಯಾಸ ಕಾಣಬಹುದು. ಇತ್ತೀಚೆಗೆ ಜನರು ಸೆಕೆಂಡ್‌ ಹ್ಯಾಂಡ್‌ ಎಲೆಕ್ಟ್ರಿಕ್‌ ವಾಹನಗಳ (Used EV Purchase) ಖರೀದಿಸುವ ಕಡೆಗೆ ಗಮನ ಹರಿಸುತ್ತಿದ್ದಾರೆ.

ಇಲೆಕ್ಟ್ರಿಕ್‌ ವಾಹನಗಳು ನಿಸ್ಸಂದೇಹವಾಗಿ ಅನೇಕ ಪ್ರಯೋಜನಗಳನ್ನು ಹೊಂದಿವೆ. ಈ ಅನುಕೂಲಗಳ ಬಗ್ಗೆ ತಿಳಿದಿರುವವರು ಇಲೆಕ್ಟ್ರಿಕ್‌ ವಾಹನಗಳ ಖರೀದಿಯ ಕಡೆ ಒಲವು ತೋರಿಸುತ್ತಾರೆ. ಈಗ ಇಲೆಕ್ಟ್ರಿಕ್‌ ವಾಹನಗಳು ಕೂಡಾ ನಿಧಾನವಾಗಿ ಸೆಕಂಡ್‌ ಹ್ಯಾಂಡ್‌ ಸೇಲ್‌ಗಾಗಿ ಬರುತ್ತಿವೆ. ಆದರೆ ಇವುಗಳನ್ನು ಖರೀದಿಸುವು ಮೊದಲು ಕೆಲವು ಅಂಶಗಳನ್ನು ತಿಳಿದರೆ ಉತ್ತಮ.

  • ಇಲೆಕ್ಟ್ರಿಕ್‌ ಮೋಟಾರ್‌ನ ಸ್ಥಿತಿ ಹೇಗಿದೆ ಎಂದು ಮೊದಲು ಚೆಕ್‌ ಮಾಡಿಕೊಳ್ಳಬೇಕು.
  • ಇಲೆಕ್ಟ್ರಿಕ್‌ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿ ಪ್ಯಾಕ್‌ನ ಪವರ್ ರಿಟೈನೇಬಿಲಿಟಿ ಹೇಗಿದೆ ಎಂದು ತಿಳಿಯುವುದು ಅವಶ್ಯಕ. ಏಕೆಂದರೆ ಬ್ಯಾಟರಿ ಪ್ಯಾಕ್‌ಗೆ ಆಂತರಿಕವಾಗಿ ಹಾನಿಯಾಗುವುದು ಓವರ್‌ ಚಾರ್ಜಿಂಗ್‌ ಅಥವಾ ಅತಿಯಾದ ವೋಲ್ಟೇಜ್‌ ಏರಿಳಿತದಿಂದ. ಇದಲ್ಲದೇ ಸಮರ್ಪಕ ರೀತಿಯಲ್ಲಿ ಚಾಜಿಂಗ್‌ ಮಾಡದಿದ್ದಾಗಲೂ ಕ್ರಮೇಣ ಬ್ಯಾಟರಿಗಳು ಹಾಳಾಗಿರುತ್ತವೆ.
  • ಇಂಜಿನ್‌ನ ಶಬ್ದವನ್ನು ಚೆನ್ನಾಗಿ ಅಲಿಸಿ. ಇದರಿಂದ ಆಂತರಿಕ ತೊಂದರೆಗಳನ್ನು ಗುರುತಿಸಬಹುದು. ಆದರೆ ಅದಕ್ಕೂ ಮೊದಲು ಬ್ಯಾಟರಿಯನ್ನು ಝಿರೋದಿಂದ ಫುಲ್‌ ಚಾರ್ಜ್‌ ಮಾಡಿ ನೋಡಿದರೆ ಉತ್ತಮ.
  • ಚಾರ್ಜಿಂಗ್‌ ನ ಸಮಯವು ತಯಾರಕರು ಸೂಚಿಸಿದಂತೆಯೇ ಇರಬೇಕು. ಇದು ಹೆಚ್ಚು ಸಮಯ ತೆಗೆದುಕೊಂಡರೆ ಬ್ಯಾಟರಿ ತ್ವರಿತವಾಗಿ ಶಕ್ತಿಯನ್ನು ಸೆಳೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದು ಅರ್ಥ.
  • ಚಾರ್ಜಿಂಗ್‌ ಮೂಲ ಸೌಕರ್ಯವು ಇಲೆಕ್ಟ್ರಿಕ್‌ ವಾಹನಗಳ ಮೂಲಭೂತ ಅವಶ್ಯಕತೆಯಾಗಿದೆ. ಅದಕ್ಕಾಗಿ ವಾಹನ ಖರೀದಿಸುವ ಮೊದಲು ಆ ಚಾರ್ಜರ್‌ಗಳನ್ನು ಮನೆಯಲ್ಲಿಯೇ ಸ್ಥಾಪಿಸಿಕೊಳ್ಳುವುದು ಒಳ್ಳೆಯದು.
  • ಇಲೆಕ್ಟ್ರಿಕ್‌ ವಾಹನಗಳ ಬೆಲೆಯು ತ್ವರಿತವಾಗಿ ಡಿಪ್ರಿಸಿಯೇಷನ್‌ ಆಗುತ್ತದೆ.

ಇದನ್ನೂ ಓದಿ : Toyota Innova Hycross : ಹೊಸ ತಲೆಮಾರಿನ ಕಾರು : ಟೊಯೊಟಾ ಇನ್ನೋವಾ ಹೈಕ್ರಾಸ್‌ ಅನಾವರಣ

ಇದನ್ನೂ ಓದಿ : Royal Enfield : ಹೊಸ ಅವತಾರದಲ್ಲಿ ಬಿಡುಗಡೆಯಾದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌

(Used EV Purchase things you need to know before buying electric vehicle)

Comments are closed.