teacher called the student a terrorist: ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಶಿಕ್ಷಕ: ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್‌

ಮಂಗಳೂರು: (teacher called the student a terrorist) ಕರಾವಳಿ ಭಾಗದ ಕಾಲೇಜು ಒಂದರಲ್ಲಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದು ನಂತರ ಪೇಚೆಗೆ ಸಿಲುಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಭಯೋತ್ಪಾದಕ ಎಂದು ಶಿಕ್ಷಕರು ಕರೆದಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಶಿಕ್ಷಕನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಲೇಜು ಆಡಳಿತ ಮಂಡಳಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಘಟನೆ (teacher called the student a terrorist) ಮಣಿಪಾಲ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾಗಿದ್ದು, ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕ ಭಯೋತ್ಪಾದಕ ಎಂದು ಕರೆದಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ, “ನೀವು ಈ ರೀತಿಯ ಹೇಳಿಕೆಯನ್ನು ನೀಡಲು ಹೇಗೆ ಸಾಧ್ಯ” ಎಂದು ಕೇಳಿದ್ದಾರೆ. ತರಗತಿಯಲ್ಲಿ ಈ ರೀತಿಯ ಹೇಳಿಕೆಗೆ ಸಂಬಂಧಿಸಿದಂತೆ ವಾದ ವಿವಾದಗಳು ಮುಂದುವರೆದಿದ್ದು, ಉಪನ್ಯಾಸಕರು ನಾನು ಈ ಪದವನ್ನು ತಮಾಷೆಯಾಗಿ ಬಳಸಿದೆ ಎಂದು ಹೇಳಿದ್ದಾರೆ. ಆದರೆ ವಾದ ಮುಂದುವರಿಸಿದ ವಿದ್ಯಾರ್ಥಿಯು, ” ಈ ಪದವನ್ನು ತಮಾಷೆಯಾಗಿ ಬಳಸುವುದಾದರು ಹೇಗೆ ಸಾಧ್ಯ? 26/11ರ ಮುಂಬೈ ದಾಳಿ ತಮಾಷೆಯ ವಿಚಾರವಲ್ಲ. ಓರ್ವ ಮುಸ್ಲಿಂ ವಿದ್ಯಾರ್ಥಿಯಾಗಿ ದೇಶದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ತಮಾಷೆಯೂ ಅಲ್ಲ ಸುಲಭವೂ ಅಲ್ಲ” ಎಂದು ವಿದ್ಯಾರ್ಥಿ ಹೇಳಿದ್ದಾನೆ.

ನಂತರ ಉಪನ್ಯಾಸಕರೇ ವಿದ್ಯಾರ್ಥಿ ಮುಂದೆ ಕ್ಷಮೆ ಕೇಳಿದ್ದು, ನೀನು ನನ್ನ ಪುತ್ರನಿಗೆ ಸಮ ಎಂದು ಹೇಳಿ ಸಮಾಧಾನಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ, “ನಿಮ್ಮ ಪುತ್ರನಿಗೆ ಇದೇ ರೀತಿಯ ಕಾಮೆಂಟ್ ಮಾಡುತ್ತೀರಾ? ಪುತ್ರನೊಂದಿಗೂ ಇದೇ ರೀತಿ ವರ್ತಿಸುತ್ತೀರಾ? ತರಗತಿಯ ಮುಂದೆ ಅದೂ ಎಲ್ಲರ ಎದುರು ಆತನನ್ನು ಭಯೋತ್ಪಾದಕ ಎಂದು ಲೇಬಲ್ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಕೇವಲ ಕ್ಷಮಿಸು ಎಂದು ಹೇಳುವುದರಿಂದ ಇಲ್ಲಿ ಏನು ಬದಲಾಗುವುದಿಲ್ಲ ಸರ್, ನೀವು ನಿಮ್ಮನಿಲ್ಲಿ ಹೇಗೆ ಚಿತ್ರಿಸಿಕೊಂಡಿದ್ದೀರಿ ಎಂಬುದು ಬದಲಾಗುವುದಿಲ್ಲ” ಎಂದು ವಿದ್ಯಾರ್ಥಿ ಸಿಟ್ಟಿನಿಂದ ಹೇಳಿದ್ದಾನೆ.

https://twitter.com/ashoswai/status/1597000265672314880?ref_src=twsrc%5Etfw%7Ctwcamp%5Etweetembed%7Ctwterm%5E1597000265672314880%7Ctwgr%5E6b2dd011fd74e5c1fdeb1ae1510114983aafb673%7Ctwcon%5Es1_&ref_url=https%3A%2F%2Fkannada.hindustantimes.com%2Fkarnataka%2Fkarnataka-student-calls-out-professor-for-allegedly-calling-him-a-terrorist-181669630283428.html

ನಂತರ ಈ ಉಪನ್ಯಾಸಕರು ಈ ವಿದ್ಯಾರ್ಥಿಯ ಜೊತೆ ಮಾತುಕತೆ ನಡೆಸಿದ್ದು, ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಈ ವಿವಾದವನ್ನು ಶಿಕ್ಷಕ ಹಾಗೂ ವಿದ್ಯಾರ್ಥಿ ಮಾತುಕತೆ ನಡೆಸಿ ಬಗೆಹರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಡಿಯೋದಲ್ಲೇ ಶಿಕ್ಷಕನು ವಿದ್ಯಾರ್ಥಿಯ ಬಳಿ ಕ್ಷಮೆಯಾಚಿಸಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ವಿದ್ಯಾರ್ಥಿಯ ವಾದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆತನ ವಾದವನ್ನು ಒಪ್ಪಿಕೊಂಡಿದ್ದಾಗಿ ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Bike Accident 2died: ಬಿಬಿಎಂಬಿ ಕಸದ ಲಾರಿಗೆ ಇಬ್ಬರು ಬಲಿ: ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ

ಇದನ್ನೂ ಓದಿ : Bike Accident 2died: ಬಿಬಿಎಂಬಿ ಕಸದ ಲಾರಿಗೆ ಇಬ್ಬರು ಬಲಿ: ಪರಾರಿಯಾಗಲು ಯತ್ನಿಸಿದ ಲಾರಿ ಚಾಲಕ

(teacher called the student a terrorist) An incident took place in Mangalore where a lecturer called the student a terrorist in a coastal college. A student angry at being called a terrorist by a teacher has rightly rebuked the teacher. The video of this has now gone viral on social media and the college administration has not given any response.

Comments are closed.