ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟ ಪ್ರಭಾಸ್(Prabhas) ಇತ್ತೀಚೆಗೆ ತೆರೆಕಂಡ ಯಾವ ಸಿನಿಮಾ ಕೂಡ ಹೆಚ್ಚು ಯಶಸ್ಸು ಕಂಡಿಲ್ಲ. ಬಾಹುಬಲಿ ವಿಶ್ವದಾದ್ಯಂತ ಬಾರೀ ಜನಮನ್ನಣೆಯನ್ನು ಗಳಿಸಿತ್ತು. ಆದರೆ ನಂತರದ ಸಾಹೋ, ರಾಧೆಶ್ಯಾಮ್ ಸಿನಿಮಾಗಳು ನಷ್ಟದ ಹಾದಿ ಹಿಡಿದಿದ್ದವು. ಆದ್ರೀಗ ಸಲಾರ್ ಹಾಗೂ ಆದಿಪುರುಷ್ (Adipurush)ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎರಡೂ ಸಿನಿಮಾಗಳ ಪೈಕಿ ಆದಿಪುರುಷ್ ಮೊದಲು ತೆರೆಗೆ ಬರಲಿದೆ. ಪ್ರಭಾಸ್ ಹೊಸ ಗೆಲುವಿಗಾಗಿ ಆದಿಪುರುಷ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
(Adipurush)ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆ ಸಿದ್ದತೆ ಮಾಡಿಕೊಂಡಿದೆ. ಸಿನಿಮಾದ ಟೀಸರ್ ನನ್ನು ಅಯೋಧ್ಯೆಯಲ್ಲಿ ಬಿಡುಗಡೆ ಮಾಡಲಿದ್ದು, ಈ ಹೊತ್ತಲ್ಲೇ ರಾವಣನ ನಕಲು ಪ್ರತಿಯನ್ನು ಸುಟ್ಟು ಹಾಕುವ ಮೂಲಕ ಬಿಡುಗಡೆ ಮಾಡಲು ಫ್ಲ್ಯಾನ್ ಮಾಡಿಕೊಂಡಿದೆ ಎಂಬ ಅಂತೆ ಕಂತೆಗಳು ಕೇಳಿಬರುತ್ತಿವೆ. ಆದ್ರೆ ಸಿನಿಮಾ ತಂಡ ಇದುವರೆಗೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಇನ್ನು ಆದಿಪುರುಷ್ ಸಿನಿಮಾದ ಕುರಿತು (Prabhas) ಪ್ರಭಾಸ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಮಾಯಣದ ಕಥಾ ಹಂದರವನ್ನು ಹೊಂದಿರುವ ಆದಿಪುರುಷ್ ಸಿನಿಮಾಕ್ಕೆ ತಾನಾಜಿ ಖ್ಯಾತಿಯ ಓಂ ರಾವುತ್ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ , ಕೃತಿ ಸನನ್ ಮುಂತಾದವರು ಅಭಿನಯಿಸಿದ್ದಾರೆ.
Prabhas In And As Adipurush“
— Prabhas V V V (@Vattimallavish3) September 14, 2022
Use Earphones For Better Experience 🎧
Watch Till End Last 30Sec💥🌪 Goosebumps 🤙💯#Prabhas𓃵 💥💥💥
Watch Till End…. Goosebumps Last 30 Sec……
🔥🔥🔥💥💥#Prabhas #Adipurush pic.twitter.com/EtgsNHIrmY
ಆದಿಪುರುಷ್ ಚಿತ್ರದಲ್ಲಿ(Prabhas) ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಲಿದ್ದು, ಅವರ ಪಾಲಿಗೆ ಈ ಸಿನಿಮಾವು ಬಹಳ ವಿಶೇಷವಾಗಿದೆ. ಬಾಲಿವುಡ್ ಸ್ಟಾರ್ ಸೈಫ್ ಅಲಿಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಅಭಿನಯದ ಹೆಚ್ಚಿನ ಸಿನಿಮಾವು ಅದ್ದೂರಿ ಬಜೆಟ್ ನ ಸಿನಿಮಾವಾಗಿದೆ. ಹಾಗೆ ಈ ಚಿತ್ರವು ಕೂಡ ದೊಡ್ಡ ಮಟ್ಟದ ಸಿನಿಮಾವಾಗಿ ಮೂಡಿಬರಲಿದೆ. ಈ ಸಿನಿಮಾವು 2023 ಜನವರಿ 12ರಂದು ತೆರೆ ಕಾಣಲಿವೆ.
September 26 – 1st look
— Sagar (@SagarPrabhas141) September 13, 2022
October 3 – Teaser launch in Ayodhya
October 5 – Luv Kush Ramlila Event in Delhi#Adipurush #Prabhas
Hope everything will come truepic.twitter.com/ceIaECsudK
ಅಕ್ಟೋಬರ್ ಮೊದಲ ವಾರದಲ್ಲಿ ಎಲ್ಲೆಡೆ ದಸರಾ ಸಂಭ್ರಮಾಚರಣೆ ಮನೆ ಮಾಡಿದೆ. ದಸರಾ ಹಬ್ಬದ ಕೊನೆಯಲ್ಲಿ ಹಲವೆಡೆ “ರಾವಣ ದಹನ” ಕೂಡ ನೆಡೆಯುತ್ತದೆ. ಹಾಗಾಗಿ (Prabhas)ಪ್ರಭಾಸ್ ರವರು ಅಯೋಧ್ಯೆಯಲ್ಲಿ ಮಾತ್ರವಲ್ಲದೇ ದೆಹಲಿಯಲ್ಲೂ ರಾವಣ ದಹನ ಕಾರ್ಯಕ್ರಮದಲ್ಲಿ ತೊಡಗುವ ಸಾಧ್ಯತೆ ಇದೆ. ಕೆಲವು ವರ್ಷದ ಹಿಂದೆ ದೆಹಲಿಯ “ಲವ ಕುಶ ರಾಮ್ ಲೀಲಾ”ದಲ್ಲಿ ರಾವಣದಹನ ಕಾರ್ಯಕ್ರಮಕ್ಕೆ ಅಕ್ಷಯ್ ಕುಮಾರ್, ಜಾನ್ ಅಬ್ರಾಹಂ, ಅಜಯ್ ದೇವಗನ್ ಹಾಗೂ ಮುಂತಾದ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದರು . ಈ ಸಲ ಆಯೋಜಕರು ಪ್ರಭಾಸ್ ಗೆ ಆಹ್ವಾನ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಸ್ಯಾಂಡಲ್ ವುಡ್‌ನ “ಚೆಲುವಿನ ಚಿತ್ತಾರ” ಬೆಡಗಿ ಅಮೂಲ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಇದನ್ನೂ ಓದಿ : ”ಕೆಜಿಎಫ್” ನಟ ಯಶ್ ಗೆಟಪ್ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್
ಸಿನಿ ಪ್ರೇಕ್ಷಕರು ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಲಾರ್ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ರವರು ನಿರ್ದೇಶನ ಮಾಡುತ್ತಿದ್ದಾರೆ.
Ravana Dahana by actor Prabhas in Rama’s Ayodhya