Samsung Galaxy A32 : ಭಾರಿ ಬೆಲೆ ಕಡಿತದೊಂದಿಗೆ ಮಾರಾಟವಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32; ಅಮೆಜಾನ್‌ ನಲ್ಲಿ ಖರೀದಿಸಿ ಬರೀ 18,899 ರೂಪಾಯಿಗೆ

ಪ್ರತಿ ಸ್ಮಾರ್ಟ್‌ಫೋನ್‌ (Smartphone) ಗಳು ಅದರದೇ ಆದ ವೈಶಿಷ್ಟ್ಯತೆಗಳಿಂದಲೇ ಖರೀದಿದಾರರನ್ನು ಆಕರ್ಷಿಸುತ್ತದೆ. ಅದೇ ರೀತಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಸಹ ತನ್ನ ಬಳಕೆದಾರರನ್ನು ಹೊಂದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ಅನ್ನು ಪರಿಚಯಾತ್ಮಕ ಬೆಲೆ 24,990 ರೂ. ಗಳಿಗೆ ಬಿಡುಗಡೆ ಮಾಡಲಾಗಿತ್ತು. ಕಂಪನಿಯು ಇದನ್ನು 3500 ರೂ.ಗಳ ಭಾರಿ ಬೆಲೆ ಇಳಿಕೆಯೊಂದಿಗೆ ಸ್ಯಾಮ್‌ಸಂಗ್ ಆನ್‌ಲೈನ್, ರಿಟೇಲ್‌ ಅಂಗಡಿ, ಅಥವಾ ಅಮೆಜಾನ್‌ನಿಂದ ಖರೀದಿಸಬಹುದಾದ ಅವಕಾಶ ಒದಗಿಸಿದೆ.

ಎರಡು ರೂಪಾಂತರಗಳಲ್ಲಿ ಅಂದರೆ 6 GB RAM ಮತ್ತು 8GB RAM ಗಳಲ್ಲಿ ಲಭ್ಯವಿರುವ ಸ್ಯಾಮಸಂಗ್‌ ಗ್ಯಾಲಕ್ಸಿ A32 ಕ್ರಮವಾಗಿ 18,899 ರೂ. ಮತ್ತು 18,870 ರೂ. ಗಳಲ್ಲಿ ಲಭ್ಯವಿದೆ. ಈ ಕೊಡುಗೆಯು ಅಮೆಜಾನ್‌ ನಲ್ಲಿ ಲೈವ್‌ ಆಗಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32 ವೈಶಿಷ್ಟ್ಯತೆಗಳು:‌
6.4 ಇಂಚಿನ FHD+ ಡಿಸ್ಪ್ಲೇ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A32, 1080X2400 ಪಿಕ್ಸೆಲ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‌ ಹೊಂದಿದೆ. ಸ್ಮಾರ್ಟ್‌ಫೋನ್ ಎಲ್ಲಾ ಬದಿಗಳಲ್ಲಿ ಕನಿಷ್ಠ ಬೆಜೆಲ್‌ನೊಂದಿಗೆ ಇನ್ಫಿನಿಟಿ-ಯು ನಾಚ್ ಡಿಸ್ಪ್ಲೇ ಹೊಂದಿದೆ. ಇದರಿಂದ ಡಿಸ್ಪ್ಲೇಯು ಬೃಹತ್ ಪ್ರಮಾಣದಲ್ಲಿ ಕಾಣಿಸುತ್ತದೆ. 6GB/8GB RAM ನೊಂದಿಗೆ ಜೋಡಿಸಲ್ಪಟ್ಟ Mediatek Helio G80 ಚಿಪ್‌ಸೆಟ್‌ನಿಂದ ಗ್ಯಾಲಕ್ಸಿ A32 ಚಾಲಿತವಾಗುತ್ತದೆ. ಇದು ಕೇವಲ 128GB ಯ ಸಿಂಗಲ್‌ ಸ್ಟೋರೇಜ್ ನಲ್ಲಿ ಲಭ್ಯವಿದೆ. 1TB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಲು ಮೈಕ್ರೊ SD ಕಾರ್ಡ್ ಸ್ಲಾಟ್‌ ಅನ್ನು ಈ ಸ್ಮಾರ್ಟಫೋನ್‌ ಹೊಂದಿದೆ.

ಇದನ್ನೂ ಓದಿ : Vande Bharat2 : ‘ವಂದೇ ಭಾರತ್‌ 2’ ಹೊಸ ಆವೃತ್ತಿ ಪರಿಚಯಿಸಲಿರುವ ಭಾರತೀಯ ರೈಲ್ವೆ

ಛಾಯಾಗ್ರಹಣಕ್ಕಾಗಿ, 64MP ಮುಖ್ಯ ಸಂವೇದಕ, 8MP ಅಲ್ಟ್ರಾ-ವೈಡ್ ಸಂವೇದಕ, 5MP ಡೆಪ್ತ್ ಸೆನ್ಸಾರ್ ಮತ್ತು 5MP ಮ್ಯಾಕ್ರೋ ಲೆನ್ಸ್ ಸೇರಿದಂತೆ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾವನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ಹೊಂದಿಸಲಾಗಿದೆ. ಸೆಲ್ಫಿಗಾಗಿ 20MP ಮುಂಭಾಗದ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್‌ಫೋನ್ 15W ವೇಗದ ಚಾರ್ಜಿಂಗ್ ಬೆಂಬಲಿಸವು ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಕ್ಷಮತೆ ಪಡೆದುಕೊಂಡಿದೆ. ಇದು Android OS ಆಧಾರಿತ ಸ್ಯಾಮಸಂಗ್‌ ನ One UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಖರೀದಿದಾರಿಗೆ ಇದು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ನೇರಳೆ, ಕಪ್ಪು ಮತ್ತು ನೀಲಿ ಗಳ ಆಯ್ಕೆಯಿದೆ.

ಅಮೆಜಾನ್‌ನ ಕಿಕ್‌ಸ್ಟಾರ್ಟರ್ ಒಪ್ಪಂದದ ಅಡಿಯಲ್ಲಿ ಬೆಲೆ ಕಡಿತವನ್ನು ಪಡೆದಿರುವ ಸ್ಯಾಮ್‌ಸಂಗ್ ಫೋನ್‌ಗಳು ಇದೀಗ ಲೈವ್ ಆಗಿದೆ. 32,999 ರೂ. ಬೆಲೆಯ Samsung Galaxy M53 5G ಆಫರ್ ಅಡಿಯಲ್ಲಿ 26,499 ರೂ.ಗೆ ಮಾರಾಟವಾಗುತ್ತಿದೆ. Galaxy M33 ಅನ್ನು 24,999 ರೂ ಬದಲಿಗೆ 18,999 ರೂ. ಗಳಲ್ಲಿ ಖರೀದಿಸಬಹುದಾಗಿದೆ. ಬಜೆಟ್ ಫೋನ್ ಆದ Galaxy M13 ಡೀಲ್ ಆಫರ್ ಅಡಿಯಲ್ಲಿ ರೂ 14,999 ಬದಲಿಗೆ ರೂ 11,999 ಕ್ಕೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Redmi A1 and Redmi 11 Prime : ಶಿಯೋಮಿಯ ಬಹುನೀರಿಕ್ಷಿತ ರೆಡ್‌ಮಿ A1 ಮತ್ತು ರೆಡ್‌ಮಿ 11 ಪ್ರೈಮ್‌ ಸ್ಮಾರ್ಟ್‌ಫೋನ್‌ ಅನಾವರಣ

Samsung Galaxy A32 can get in just rs 18,899 on amazon

Comments are closed.