ಮಂಗಳವಾರ, ಏಪ್ರಿಲ್ 29, 2025
HomeCinemaBangarraju : ಅಕ್ಕಿನೇನಿ ಸಪ್ರೈಸ್: ಬಂಗಾರ್ ರಾಜು ಟೀಸರ್ ಜೊತೆ ಬಂದ ನಾಗಚೈತನ್ಯ

Bangarraju : ಅಕ್ಕಿನೇನಿ ಸಪ್ರೈಸ್: ಬಂಗಾರ್ ರಾಜು ಟೀಸರ್ ಜೊತೆ ಬಂದ ನಾಗಚೈತನ್ಯ

- Advertisement -

ಟಾಲಿವುಡ್ ನ ಅಕ್ಕಿನೇನಿ ಅಭಿಮಾನಿಗಳಿಗೆ ಇವತ್ತು ಡಬ್ಬಲ್ ಧಮಾಕಾ. ಅಕ್ಕಿನೇನಿ ನಾಗಚೈತನ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನೆಚ್ಚಿನ ನಟ ಹೊಸ ಸಿನಿಮಾ (Bangarraju) ಟೀಸರ್ ಜೊತೆ ಸಪ್ರೈಸ್ ನೀಡಿದ್ದರೇ, ಟೀಸರ್ ನಲ್ಲಿ ತಂದೆ ಮಗನನ್ನು ಜೊತೆಯಾಗಿ ನೋಡಿದ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಟಾಲಿವುಡ್ ಹೀರೋ ಅಕ್ಕಿನೇನಿ ನಾಗಚೈತನ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಅಕ್ಕಿನೇನಿ ಈ ಹುಟ್ಟುಹಬ್ಬದಂದು ಹೊಸ ಸಿನಿಮಾದ ಟೀಸರ್ ಜೊತೆ ಫ್ಯಾನ್ಸ್ ಮುಂದೇ ಹಾಜರಾಗಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅಕ್ಕಿನೇನಿ ನಾಗಚೈತನ್ಯ ಮುಂದಿನ ಚಿತ್ರ ಬಂಗಾರ್ ರಾಜು ಟೀಸರ್ ರಿಲೀಸ್ ಆಗಿದೆ.

ಬಂಗಾರ್ ರಾಜು ಸಿನಿಮಾದಲ್ಲಿ ಅಕ್ಕಿನೇನಿ ನಾಗಚೈತನ್ಯ ಗೆ ತಂದೆ ನಾಗಾರ್ಜುನ್ ಸಾಥ್ ನೀಡಿದ್ದಾರೆ. ಬಹುತೇಕ 6 ವರ್ಷಗಳ ಬಳಿಕ ತಂದೆ ಮಗನ ಜೋಡಿ ನೋಡಿದ ಪ್ರೇಕ್ಷಕರು ಸಿನಿಮಾಗೆ ಕಾಯುತ್ತಿದ್ದಾರೆ. ಬಂಗಾರ್ ರಾಜು ಟೀಸರ್ ನಲ್ಲಿ ಅಕ್ಕಿನೇನಿ ನಾಗಚೈತನ್ಯ ಸಖತ್ ಜೋಶ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಟೀಸರ್ ನೋಡಿ ಹುಚ್ಚೆದ್ದು ಕುಣಿದಿದ್ದಾರೆ‌. 2014 ರಲ್ಲಿ ತೆರೆಕಂಡಿದ್ದ ಮನಂ‌ಸಿನಿಮಾದಲ್ಲಿ ಅಕ್ಕಿನೇನಿ ನಾಗಚೈತನ್ಯ ಹಾಗೂ ನಾಗಾರ್ಜುನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಈಗ ಮತ್ತೊಮ್ಮೆ ಅಪ್ಪ ಮಗ ಒಂದೇ ಸಿನಿಮಾದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದ್ದಾರೆ.ನಾಗಾರ್ಜುನ್ ಮಗನ ಬರ್ತಡೇಯಂದು ಈ ಟೀಸರ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ತೆಲುಗಿನಲ್ಲಿ 2016 ರಲ್ಲಿ ಬಿಡುಗಡೆಯಾಗಿದ್ದ ಸೊಗ್ಗಡೆ ಚಿನ್ನಿ ಸಿನಿಮಾದ ಮುಂದುವರಿದ ಭಾಗವಾಗಿರುವ ಬಂಗಾರ್ ರಾಜು ಸಿನಿಮಾದಲ್ಲಿ ಅಕ್ಕಿನೇನಿ ನಾಗಚೈತನ್ಯಗೇ ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಅನೂಪ ರೂಬೆನ್ಸ್ ಸಂಗೀತವಿದೆ. ಅನುಪಮಾ ಸ್ಟುಡಿಯೋಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಂಗಾರ್ ರಾಜು ಸಿನಿಮಾ ನಿರ್ಮಾಣವಾಗುತ್ತಿದೆ.

2022 ರ ಸಂಕ್ರಾಂತಿ ವೇಳೆ ಸಿನಿಮಾ‌ ತೆರೆಗೆ ಬರೋ ಸಾಧ್ಯತೆ ಇದೆ. ಸದ್ಯ ಅಕ್ಕಿನೇನಿ‌ನಾಗಚೈತನ್ಯ ಥ್ಯಾಂಕ್ ಯು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಥ್ಯಾಂಕ್ ಯು ಸಿನಿಮಾದಲ್ಲಿ ನಾಗ್ ಚೈತನ್ಯ ಅವರಿಗೆ ರಾಶಿ ಖನ್ನಾ ನಾಯಕಿಯಾಗಿದ್ದು ವಿಕ್ರಮ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಲುಕ್ ಕೂಡಾ ಹುಟ್ಟುಹಬ್ಬದಂದೇ ಬಿಡುಗಡೆಯಾಗಿದೆ. ಇನ್ನೊಂದೆಡೆ ಪತ್ನಿ ಸಮಂತಾ ಅವರೊಂದಿಗಿನ ವೈವಾಹಿಕ ಸಂಬಂಧವನ್ನು ಕಡಿದುಕೊಂಡ ಮೇಲೆ ಇದು ನಾಗಚೈತನ್ಯ ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬವಾಗಿತ್ತು.

( Akkineni Surprise: Nagachithanya who came with Bangarraju teaser )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular