ತೆರೆಗೆ ಬರಲ್ವಾ ಪುಷ್ಪ-2 ? ಸಿನಿಮಾ ವಿಳಂಬವಾಗ್ತಿರೋದ್ಯಾಕೆ ? ಇಲ್ಲಿದೆ ಅಸಲಿ ಸತ್ಯ

Pushpa -2 : ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದ ಯಶಸ್ಸಿನ ಬಳಿಕ ಸಿನಿರಸಿಕರು ಅಲ್ಲು ಅರ್ಜುನ್‌ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ-2 ಸಿನಿಮಾದ ನೀರಿಕ್ಷೆಯಲ್ಲಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೇ ಪುಷ್ಪ-2 ಸಿನಿಮಾ ಈ ವರ್ಷಾಂತ್ಯಕ್ಕೆ ಅಂದ್ರೇ ಡಿಸೆಂಬರ್ ನಲ್ಲಿ ತೆರೆ ಕಾಣಬೇಕಿತ್ತು.

Pushpa -2 : ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದ ಯಶಸ್ಸಿನ ಬಳಿಕ ಸಿನಿರಸಿಕರು ಅಲ್ಲು ಅರ್ಜುನ್‌ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ-2 ಸಿನಿಮಾದ ನೀರಿಕ್ಷೆಯಲ್ಲಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೇ ಪುಷ್ಪ-2 ಸಿನಿಮಾ ಈ ವರ್ಷಾಂತ್ಯಕ್ಕೆ ಅಂದ್ರೇ ಡಿಸೆಂಬರ್ ನಲ್ಲಿ ತೆರೆ ಕಾಣಬೇಕಿತ್ತು. ಆದರೇ, ಸದ್ಯ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ನ್ನು ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಮಾಡಿದ್ದು ಸಿನಿಪ್ರಿಯರಲ್ಲಿ ಹಲವು ಅನುಮಾನ ಮೂಡಿಸಿದೆ.

Allu Arjun and Rashmika Mandanna Pushpa-2 will come to the screen Why is the movie delayed Here is the real truth
Image Credit to Original Source

ಇನ್ನೇನು ಪೋಸ್ಟ್ ಪ್ರೊಡಕ್ಷನ್ ಮುಗಿದು ರಿಲೀಸ್ ಗೆ ಸಿದ್ಧವಾಗಬೇಕಿದ್ದ ಪುಷ್ಪ- 2 ಸಿನಿಮಾ ಧಿಡೀರ್ ತನ್ನ ರಿಲೀಸ್ ಡೇಟ್ ನ್ನು ವರ್ಷಗಟ್ಟಲೇ ಮುಂದೂಡಿದೆ. ಹೀಗಾಗಿ ಈ ಸಿನಿಮಾ ನೋಡೋಕೆ‌ ಕಾಯ್ತಿದ್ದ ಅಲ್ಲೂ ಅರ್ಜುನ್ (Allu Arjun) ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹಾಗಿದ್ದರೇ ಸಿನಿಮಾ ತೆರೆಗೆ ಬರೋದೇ ಇಲ್ವಾ ಎಂಬಷ್ಟು ಗಾಸಿಪ್ ಗಳು ಸದ್ದು ಮಾಡ್ತಿವೆ. ಆದರೆ ಪುಷ್ಪಾ -2 ಸಿನಿಮಾದ ವಿಳಂಬಕ್ಕೆ ಅಸಲಿ ಕಾರಣ ಏನು ಅನ್ನೋ ಡಿಟೇಲ್ಸ್ ಇಲ್ಲಿದೆ.

Allu Arjun and Rashmika Mandanna Pushpa-2 will come to the screen Why is the movie delayed Here is the real truth
Image Credit To Original Source

ಪುಷ್ಪ2 ಸಿನಿಮಾದ ಶೂಟಿಂಗ್ ಬಹುತೇಕ‌ ಮುಗಿದಿದೆ. ಹಾಗಿದ್ರೇ ಸಿನಿಮಾ ಶೂಟಿಂಗ್ ಮುಗಿಯೋ ಹಂತಕ್ಕೆ ಬಂದಿದ್ರೂ ಸಿನಿಮಾ ರಿಲೀಸ್ ಇಷ್ಟು ಲೇಟಾಗ್ತಿರೋದು ಯಾಕೆ ಅನ್ನೋ ಅನುಮಾನಗಳಿಗೆ ಒಂದಿಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಕಾರಣವಾಗಿವೆ. ಸದ್ಯ ಭಾರತದಲ್ಲಿ ಎಲ್ಲಾ ಸಿನಿರಂಗದಲ್ಲೂ ಬಿಗ್ ಬಜೆಟ್ ಸಿನಿಮಾಗಳದ್ದೇ ಸದ್ದು.

ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ

ಜೈಲರ್ (Jailor) , ಕೆಜಿಎಫ್ (KGF) ಸಿನಿಮಾಗಳ ಬಳಿಕ ಸಿನಿಮಾ ಬಜೆಟ್ ನಿಂದಲೇ ಸದ್ದು ಮಾಡೋ‌ ಪ್ರವೃತ್ತಿ ಆರಂಭವಾಗಿದೆ. ಹೀಗಾಗಿ ಪುಷ್ಪ- 2 (Pushpa -2)  ಸಿನಿಮಾದ ಬಜೆಟ್ ನ್ನು ಕೂಡ ನೂರು ಕೋಟಿಗೆ ಹೆಚ್ಚಿಸಲಾಗಿದೆಯಂತೆ. ಡ್ಯಾನ್ಸ್ ನಿಂದ ಆರಂಭಿಸಿ ಎಲ್ಲದಕ್ಕೂ ಸಖತ್ ಗ್ರ್ಯಾಂಡ್ ಸೆಟ್ ಗಳನ್ನು ಹಾಕಲಾಗಿದ್ದು, ನೂರು ಕೋಟಿಗೆ ಬಜೆಟ್ ಏರಿಸಿ ಶೂಟಿಂಗ್ ಮಾಡಲಾಗ್ತಿದೆ. ಇದರ ಜೊತೆಗೆ ಜೈಲರ್ ಹಾಗೂ ಕೆಜಿಎಫ್ ಸಿನಿಮಾದ ಯಶಸ್ಸನ್ನು ಗಮನಿಸಿದ ಸಿನಿಮಾದ ನಿರ್ದೇಶಕ ಸುಕುಮಾರ್ (Pushpa Director Sukumar) ಸಿನಿಮಾದ ಸ್ಕ್ರಿಪ್ಟ್ ಕೂಡ ಕೊಂಚ ಬದಲಾಯಿಸಿದ್ದಾರಂತೆ.

Allu Arjun and Rashmika Mandanna Pushpa-2 will come to the screen Why is the movie delayed Here is the real truth
Image Credit To Original Source

ರಾಷ್ಟ್ರ ಪ್ರಶಸ್ತಿ  (Pushpa Nationa Award) ಪಡೆದು ಟಾಲಿವುಡ್ ನಲ್ಲಿ ಪುಷ್ಪ ಸಿನಿಮಾ ಹೊಸ ದಾಖಲೆ ಬರೆದಿದೆ. ಹೀಗಾಗಿ ಸಹಜವಾಗಿಯೇ ಪುಷ್ಪ 2 ಸಿನಿಮಾದ ಮೇಲೆ ಚಿತ್ರರಂಗದ ನೀರಿಕ್ಷೆ ದುಪ್ಪಟ್ಟಾಗಿದೆ. ಹೀಗಾಗಿ ಸಿನಿಮಾ ಪ್ರಿಯರ ನೀರಿಕ್ಷೆಗೆ ಮತ್ತಷ್ಟು ಬಲ‌ತುಂಬವ ನಿಟ್ಟಿನಲ್ಲಿ ಸುಕುಮಾರ್  ತಮ್ಮ ಸ್ಕ್ರಿಪ್ಟ್ ನಲ್ಲಿ‌ ಮತ್ತಷ್ಟು ರೋಚಕತೆ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರಂತೆ. ಹೀಗಾಗಿ ಸಿನಿಮಾದ ಕ್ಲೈಮ್ಯಾಕ್ಸ್ ಬದಲಾಗೋ ಸಾಧ್ಯತೆ ಇದ್ದು, ಇದರಿಂದಾಗಿ ಸಿನಿಮಾ ತೆರೆ ಕಾಣೋದು ವಿಳಂಬವಾಗ್ತಿದೆ.

ಇದನ್ನೂ ಓದಿ : ನೆರೆಮನೆಯ ಅಂದಕ್ಕೆ ಮನಸೋತು ತವರು ಮರೆತ ಶ್ರೀವಲ್ಲಿ: ಹೊಸ ವಿವಾದಕ್ಕೆ ಕಾರಣವಾಯ್ತಾ ರಶ್ಮಿಕಾ ಪೋಸ್ಟ್

ರೆಡ್ ಸ್ಯಾಂಡಲ್ ವುಡ್ ಸ್ಲಗ್ಮಿಂಗ್ ಕತೆಯನ್ನು ಒಳಗೊಂಡ ಈ ಸಿನಿಮಾದಲ್ಲಿ ನಟ ಫಾಹದ್ ಫಾಸಿಲ್ (Fahad Fazil) ಭನ್ವರ್ ಸಿಂಗ್ ಶೇಖಾವತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪುಷ್ಪ 2 ಸಿನಿಮಾದಲ್ಲಿ ಫಾಹದ್ ಮತ್ತು ಅಲ್ಲೂ ಅರ್ಜುನ್ ಮುಖಾಮುಖಿ ಇರಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

Allu Arjun and Rashmika Mandanna Pushpa-2 will come to the screen Why is the movie delayed Here is the real truth
Image Credit to Original Source

ಇನ್ನೂ ಪುಷ್ಪ ಸಿನಿಮಾ ಐಟಂ ಡ್ಯಾನ್ಸರ್ ಗಳಂತೆ ಕುಣಿದಿದ್ದ ಶ್ರೀವಲ್ಲಿ ರಶ್ಮಿಕಾ (Rashmika Mandanna) ಈ ಭಾರಿಯೂ ಸಖತ್ ಹಾಟ್ ಆಗಿ ಕಾಣಿಸಿ ಕೊಳ್ಳಲಿದ್ದಾರಂತೆ. ಕನ್ನಡಿಗ ಡಾಲಿ ಧನಂಜಯ್ (Daali Dhananjaya) ನೆಗೆಟಿವ್ ರೋಲ್ ನಲ್ಲಿ ಮಿಂಚಲಿದ್ದು, ಮೈತ್ರಿ ಮೂವಿ ಮೇಕರ್ಸ್ (Mythri Movie Makers) ಈ ಸಿನಿಮಾದ ಮೂಲಕ ಹೊಸ ದಾಖಲೆ‌ ಬರೆಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ : ಪೋಟೋಶೂಟ್ ನಲ್ಲೆ ಮತ್ತೇರಿಸೋ ವರ್ಮಾ ಮಾದಕ ಲೋಕದ ಅಪ್ಸರೆ ಅಪ್ಸರಾ ರಾಣಿ !

ಪ್ರೇಕ್ಷಕರ ನೀರಿಕ್ಷೆಗೆ ರಂಗು ತುಂಬಲು ಚಿತ್ರತಂಡ ರಕ್ತಸಿಕ್ತ ಕೈಗಳನ್ನೊಳಗೊಂಡ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದ್ದು 2024 ರ ಅಗಸ್ಟ್ 15 ರಂದು ನಮ್ಮನ್ನು ಸ್ವಾಗತಿಸಲು ಸಿದ್ಧವಾಗಿರಿ ಎಂಬ ಸಂದೇಶ ನೀಡಿದೆ.

Allu Arjun and Rashmika Mandanna Acting Movie Pushpa Big Success in Indian Cinema Industry. but Pushpa-2 will come to the screen ? Why is the movie delayed ? Here is the real truth

Comments are closed.