ಮಂಗಳವಾರ, ಏಪ್ರಿಲ್ 29, 2025
HomeCinemaನಟಿ ಅಮೂಲ್ಯ ಅವಳಿ ಮಕ್ಕಳಿಗೆ‌ ಮೊದಲ ಗಿಫ್ಟ್ ಎಲ್ಲಿಂದ ಬಂತು ಗೊತ್ತಾ?! ಇಲ್ಲಿದೆ ಡಿಟೇಲ್ಸ್

ನಟಿ ಅಮೂಲ್ಯ ಅವಳಿ ಮಕ್ಕಳಿಗೆ‌ ಮೊದಲ ಗಿಫ್ಟ್ ಎಲ್ಲಿಂದ ಬಂತು ಗೊತ್ತಾ?! ಇಲ್ಲಿದೆ ಡಿಟೇಲ್ಸ್

- Advertisement -

ಶಾಪಿಂಗ್ ಅಂದ್ರೇ ಮಾಲ್, ದೊಡ್ಡ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಗಳು ಅನ್ನೋ ಕಲ್ಪನೆ ನಮಗಿದೆ. ಅದರಲ್ಲೂ ಸೆಲೆಬ್ರೆಟಿಗಳು ಅಂದ್ರೇ ಅವರೆಲ್ಲ ದೊಡ್ಡ ದೊಡ್ಡ ಹವಾನಿಯಂತ್ರಿತ ಸ್ಥಳಗಳಲ್ಲೇ ಶಾಪಿಂಗ್ ಮಾಡ್ತಾರೇ ಅನ್ನೋ ಭಾವನೆಯೂ ಇದೆ. ಆದರೆ ಈ‌ಮಾತುಗಳಿಗೆ ಅಪವಾದ ಎಂಬಂತೆ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮುದ್ದಾದ ಮಕ್ಕಳಿಗೆ (Amulya precious twins) ಮೊದಲ ಗಿಫ್ಟ್ ನ್ನು ರಸ್ತೆ ಬದಿಯ ವ್ಯಾಪಾರಿ ಯಿಂದ ಖರೀದಿಸಿದ ಅಮೂಲ್ಯ ಪತಿ ಆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ನಟಿ ಅಮೂಲ್ಯ (Amulya precious twins) ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಅಮೂಲ್ಯ ಪತಿ ಜಗದೀಶ್ ಅವರು ಹಂಚಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನರು ಅಮೂಲ್ಯನಿಗೆ ಶುಭಹಾರೈಸಿದ್ದರು. ಈ ಮಧ್ಯೆ ಜಗದೀಶ್ ತಮ್ಮ ಹಾಗೂ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಇಂಟ್ರಸ್ಟಿಂಗ್ ಸಂಗತಿಯೊಂದನ್ನು ಶೇರ್ ಮಾಡಿದ್ದಾರೆ. ಸುಸಜ್ಜಿತ್ ಶಾಪ್ ಗಳಿಗೂ ರಸ್ತೆ ಬದಿ ವ್ಯಾಪಾರಿಗಳಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂಬ ಮಾತಿನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರೋ ಅಮೂಲ್ಯ ಪತಿ ಜಗದೀಶ್ ಅವರು, ಇತ್ತೀಚಿಗೆ ನಡೆದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ ಎಂದಿದ್ದಾರೆ.

ಶಿವರಾತ್ರಿಯ ದಿನದಂದು ಜಯನಗರದ ಆಸ್ಪತ್ರೆಯ ಬಲಭಾಗದ ಫುಟ್‌ಫಾತ್‌ನಲ್ಲಿ ಬಲೂನ್‌ ಮತ್ತು ಆಟಿಕೆಗಳನ್ನು ಮಾರುತ್ತಿದ್ದ ಕಾಲುಗಳಿಲ್ಲದ ವ್ಯಕ್ತಿ ರವಿ ಎನ್ನುವವರು ʼಅಮೂಲ್ಯ ಮೇಡಂಗೆ ಅವಳಿ ಮಕ್ಕಳಾಗಿದ್ದು ಕೇಳಿ ತುಂಬಾ ಸಂತೋಷವಾಯ್ತು ಸರ್, ಎಲ್ಲರೂ ಚೆನ್ನಾಗಿದಾರಲ್ವಾ ? ನೀವು ಯಾವಾಗ ಹೊರಗೆ ಬರುತ್ತೀರಾ ಎಂದು ಕಾಯುತ್ತಿದ್ದೆʼ ಎಂದು ಆತ್ಮೀಯವಾಗಿ ಮಾತನಾಡಿಸಿದ್ದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು.

ಶ್ರೀಮಂತರಲ್ಲದಿದ್ದರೂ ಅವರ ಹೃದಯ ಶ್ರೀಮಂತಿಕೆ ಎಷ್ಟು ದೊಡ್ಡದಲ್ವಾ ? ಹೀಗಾಗಿ ಡಿಸ್ಚಾರ್ಜ್‌ ಆಗುವಾಗ ದಿನದಂದು ಕಾಲುಗಳಿಲ್ಲದಿದ್ದರೂ ಸ್ವಾಭಿಮಾನದಿಂದ ನಿತ್ಯ ತನ್ನ ಕೆಲಸ ಮಾಡಿಕೊಂಡು ಶ್ರಮವಹಿಸಿ ತನ್ನ ಜೀವನ ನಡೆಸುತ್ತಿರುವ ಆ ವ್ಯಕ್ತಿಯಿಂದ ಮಕ್ಕಳಿಗಾಗಿ ಮೊದಲ ಆಟಿಕೆಗಳ ರೂಪದಲ್ಲಿ ಎರಡು ಬಲೂನ್‌ ಅನ್ನು ಕೊಂಡೆವು. ಎಲ್ಲವೂ ಕಮರ್ಷಿಯಲ್ ಮತ್ತು ದುಬಾರಿ ಆಗಿರುವ ಈಗಿನ ಕಾಲದಲ್ಲಿ ಈ ರೀತಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೃದಯವಂತರ ಬಳಿ ನಾವು ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ವಾ ? ಈ ರೀತಿ ಮಾಡುವುದರಿಂದ ಅವರಿಗೂ ಸಹಾಯವಾಗುತ್ತದೆ. ಅವರು ಇನ್ನಷ್ಟು ಆತ್ಮನಿರ್ಭರವಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ.

ನಿಮಗೇನಾದರೂ ಈ ರೀತಿ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರು ಕಂಡರೆ ನೀವೂ ಅವರ ಬಳಿ ವಸ್ತುಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ. #AtmanirbharBharat
ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಗೆ ಲಕ್ಷಾಂತರ ಜನರು ಲೈಕ್ಸ್ ಒತ್ತಿದ್ದು ನಟಿ ಅಮೂಲ್ಯ (Amulya ) ಪತಿಯ ಸರಳತೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ :  ದಿವ್ಯ ಅಗರವಾಲ್‌ -ವರುಣ್‌ ಸೂದ್ 4 ವರ್ಷಗಳ ಪ್ರೀತಿಗೆ ಬ್ರೇಕ್‌ಅಪ್‌

ಇದನ್ನೂ ಓದಿ : Bhavana Menon : ಟಗರು ಬೆಡಗಿ ಭಾವನಾ ಕಣ್ಣೀರ ಕತೆ ಇದು : ಡಿಗ್ನಿಟಿಗಾಗಿ ಹೋರಾಡುತ್ತಿದ್ದೇನೆ ಎಂದ ನಟಿ

( Amulya precious twins special gift)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular