Aparna Vastarey: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಬದುಕಿನ ನಿರೂಪಣೆ ಮುಗಿಸಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ಬಾರದ ಲೋಕಕ್ಕೆ ಪಯಣಿಸಿದ ಅಪರ್ಣಾ ಅವರ ಅಂತ್ಯಕ್ರೀಯೆ ಬೆಂಗಳೂರಿನ ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆದಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿದೆ.

ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಕನ್ನಡದ ನಿರೂಪಣೆಯನ್ನು ಮಾಡುತ್ತಿದ್ದ ಅಪರ್ಣಾ ಕಳೆದ ಎರಡು ವರ್ಷಗಳಿಂದಲೂ ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ರು. ಕ್ಯಾನ್ಸರ್ ವಿರುದ್ದದ ಹೋರಾಟದ ನಡುವಲ್ಲೇ ಅಪರ್ಣಾ ಬನಶಂಕರಿಯ ಸ್ವಗೃಹದಲ್ಲಿ ಇಹಲೋಕವನ್ನು ತ್ಯೆಜಿಸಿದ್ದರು. ಇಂದು ಅವರ ಅಂತ್ಯಕ್ರೀಯೆ ಪೊಲೀಸ್ ಗೌರವದೊಂದಿಗೆ ನೆರವೇರಿದೆ.
ಮೂರು ದಶಕಗಳ ಕಾಲ ಕನ್ನಡಮ್ಮನ ಸೇವೆಯನ್ನು ಮಾಡಿದ್ದ ಅಪರ್ಣಾ ಅವರಿಗೆ ರಾಜ್ಯ ಸರಕಾರ ಸರಕಾರಿ ಗೌರವದೊಂದಿಗೆ ವಿದಾಯ ಹೇಳಿದೆ. ಪೊಲೀಸರು ಮೂರು ಸುತ್ತುಗಳ ಕಾಲ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ : Aparna Vastarey : ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ವಿಧಿವಶ
ಇಂದು ಬೆಳಗಿನಿಂದಲೇ ಬನಶಂಕರಿಯಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಿನಿಮಾ ರಂಗದ ಗಣ್ಯರು, ಖ್ಯಾತ ಗಾಯಕ, ಗಾಯಕಿಯರು, ಸಂಗೀತ ಲೋಕದ ದಿಗ್ಗಜರು ಆಗಮಿಸಿ ಅಗಲಿದ ನಟಿ, ನಿರೂಪಕಿಗೆ ಅಂತಿಮ ವಿದಾಯ ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯೇ ಅಪರ್ಣಾ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ವೈದ್ಯರು ಆರು ತಿಂಗಳ ಕಾಲವಷ್ಟೇ ಬದುಕಿರೋದಕ್ಕೆ ಸಾಧ್ಯ ಎಂದಿದ್ದರು. ಆದರೆ ಅಪರ್ಣಾ ಕ್ಯಾನ್ಸರ್ ವಿರುದ್ದ ಹೋರಾಟವನ್ನು ನಡೆಸಿದ್ದರು. ಅಂತಿಮವಾಗಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : ಮಾಲಿವುಡ್ ಗೆ ಮರಳಿದ ಮೇಘನಾ ರಾಜ್ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ
ಮಸಣದ ಹೂವು ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಅಪರ್ಣಾ ಹಲವು ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕನ್ನಡ ಕಿರುತೆರೆಯ ಮೂಡಲಮನೆ, ಮುಕ್ತ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ದೂರದರ್ಶನ, ಆಕಾಶವಾಣಿಯಲ್ಲಿಯೂ ನಿರೂಪಕಿಯಾಗಿ ಅಪರ್ಣಾ ಸೇವೆ ಸಲ್ಲಿಸಿದ್ದಾರೆ.

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್ ಮೊದಲ ಆವೃತ್ತಿಯಲ್ಲಿಯೂ ಸ್ಪರ್ಧಿಯಾಗಿದ್ದು, ಸುಮಾರು ನಲವತ್ತಕ್ಕೂ ಅಧಿಕ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಅಷ್ಟೇ ಅಲ್ಲದೇ ಲೋಕೇಶ್ ಪ್ರೊಡಕ್ಷನ್ಸ್ ಅವರ ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮೀ ಪಾತ್ರಕ್ಕೆ ಅಪರ್ಣಾ ಜೀವ ತುಂಬಿದ್ದರು.
ಇದನ್ನೂ ಓದಿ : ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ
Anchor Aparna Death Last rites in Bangalore