ಮಂಗಳವಾರ, ಏಪ್ರಿಲ್ 29, 2025
HomeCinemaAnushka Sharma : ಪತಿ ಜೊತೆ ಪತ್ನಿಯೂ ಕ್ರಿಕೆಟ್ ಪ್ಲೇಯರ್ : ಸೆಕೆಂಡ್ ಇನ್ನಿಂಗ್ಸ್ ನಲ್ಲಿ...

Anushka Sharma : ಪತಿ ಜೊತೆ ಪತ್ನಿಯೂ ಕ್ರಿಕೆಟ್ ಪ್ಲೇಯರ್ : ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅನುಷ್ಕಾ ಶರ್ಮಾ ಹೊಸ ಸಾಹಸ

- Advertisement -

Netflix : ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ್ ವಿರಾಟ್ ಕೊಹ್ಲಿ ಇನ್ನೂ ಕ್ರಿಕೆಟ್ ಆಡುತ್ತಿದ್ದಾರೆ. ಈಗ ಇವರ ಜೊತೆ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ( Anushka Sharma ) ಕೂಡ ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕೆ ಧುಮುಕಲಿದ್ದಾರಂತೆ. ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಫ್ರೀ ಟೈಂ ನಲ್ಲಿ ಕ್ರಿಕೆಟ್ ಅಡ್ತಾರೆ ಅಂತ ನೀವಂದುಕೊಂಡಿದ್ರೇ ಅದು ತಪ್ಪು. ಅನುಷ್ಕಾ ಬ್ಯಾಟ್ ಹಿಡಿತಿರೋದು ( Chakda Xpress film Jhulan Goswami ) ರೀಲ್ ಗಾಗಿ.

ಹೌದು ತಾಯ್ತನದ ಸಂಭ್ರಮದಲ್ಲಿ ಬ್ರೇಕ್ ಪಡೆದಿದ್ದ ನಟಿ ಅನುಷ್ಕಾ ಶರ್ಮಾ ಕ್ರಿಕೆಟ್ ಮೂವಿ ಜೊತೆ ಆಕ್ಟಿಂಗ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ. ಭಾರತ ಮಹಿಳಾ ತಂಡದ ಬೌಲರ್ ಜೂಲನ್ ಗೋಸ್ವಾಮಿ ಜೀವನ ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಜೂಲನ್ ಗೋಸ್ವಾಮಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಚಾಕ್ಕಡ್ ಎಕ್ಸಪ್ರೆಸ್ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದ್ದು ಕ್ರಿಕೆಟ್ ಪ್ರಿಯರ ಗಮನ ಸೆಳೆದಿದೆ.

ಭಾರತ ಕ್ರಿಕೆಟ್ ತಂಡದ ಟೀ ಶರ್ಟ್ ಗಳ ಮೇಲೆ ಮಹಿಳಾ ಕ್ರಿಕೆಟ್ ರಗಳು ತಮ್ಮ ಹೆಸರು ಬರೆದುಕೊಂಡು ಕ್ರೀಡಾಂಗಣಕ್ಕೆ ಇಳಿಯುವ ಸೀನ್ ಗಮನ ಸೆಳೆದಿದೆ. ಮಾತ್ರವಲ್ಲ ಅನುಷ್ಕಾ ಬೆಂಗಾಲಿ ಪ್ರಭಾವಕ್ಕೆ ಒಳಗಾದ ಹಿಂದಿ ಭಾಷೆಯಲ್ಲಿ ಡೈಲಾಗ್ ಹೊಡೆಯುವ ಮೂಲಕ ಮಿಂಚಿದ್ದಾರೆ. ಈ ಸಿನಿಮಾ ನೇರವಾಗಿ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದ್ದು, ಟ್ರೇಲರ್ ಸಖತ್ ವೈರಲ್ ಆಗಿದೆ. ಇನ್ನು ಜೂಲನ್ ಗೋಸ್ವಾಮಿ ಪಾತ್ರಕ್ಕೆ ಅನುಷ್ಕಾ ಶರ್ಮಾ ಆಯ್ಕೆಗೆ ಮಿಶ್ರ ಪ್ರಕ್ರಿಯೆ ವ್ಯಕ್ತವಾಗಿದೆ.

ಹಲವರು ಅನುಷ್ಕಾಗೂ ಜೂಲನ್ ಗೋಸ್ವಾಮಿಗೂ ಕೊಂಚವೂ ಸಾಮ್ಯತೆ ಇಲ್ಲ. ಜೂಲನ್ ಪಾತ್ರಕ್ಕೆ ಅನುಷ್ಕಾ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನಮಗಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅನುಷ್ಕಾ ಜೂಲನ್ ಗೋಸ್ವಾಮಿ ಪಾತ್ರಕ್ಕೆ ಸಂಬಂಧಿಸಿದಂತೆ ಟ್ರೋಲ್ ಗಳು ಹರಿದಾಡುತ್ತಿದೆ. ಶಭಾಷ್ ಮಿತು ಎಂಬ ಕ್ರಿಕೆಟ್ ಆಧಾರಿತ ಇನ್ನೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ಮಿಥಾಲಿ ರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಲ್ಲದೇ ತಾಪ್ಸಿ ಪನ್ನು ಅನುಷ್ಕಾ ಹೊಸ ಸಿನಿಮಾಗೆ ಶುಭಹಾರೈಸಿದ್ದು, ಮಿಥಾಲಿಯಿಂದ ಜೂಲನ್ ಗೆ ಶುಭಾಶಯ.‌ಹೀಗೆ ಮುಂದುವರೆಯಿರಿ ಸಹೋದರಿ ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಭಾಗ್ ಮಿಲ್ಕಾ ಭಾಗ್ ನಿಂದ ಆರಂಭವಾದ ಕ್ರೀಡಾಸಾಧಕರ ಜೀವಾನಾಧಾರಿತ ಸಿನಿಮಾ ಸರಣಿ ಇನ್ನು ಮುಂದುವರೆದಿದ್ದು ಇನ್ನಷ್ಟು ಮೂವಿ ಗಳು ತೆರೆಗೆ ಬರೋದು ಖಚಿತವಾಗಿದೆ.

ಇದನ್ನೂ ಓದಿ : ನಮ್ಮ ಫೋಟೋ, ಜೀವನಕ್ಕೆ ಯಾವುದೇ ಫಿಲ್ಟರ್ ಅಗತ್ಯವಿಲ್ಲ ಎಂದ ಅನುಷ್ಕಾ ಶರ್ಮಾ

ಇದನ್ನೂ ಓದಿ : ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರು ಯಾರು ಗೊತ್ತಾ ?

(Anushka Sharma as cricketer in Chakda Xpress film on Jhulan Goswami to premiere on Netflix)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular