Fresh COVID-19 Case : ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 1.17 ಲಕ್ಷ ಪ್ರಕರಣ ವರದಿ

Fresh COVID-19 Case :ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1,17,100 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಕಳೆದ 7 ತಿಂಗಳಲ್ಲಿ ಇದೇ ಮೊದಲನೇ ಬಾರಿ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯ ಮಿತಿಯು 1 ಲಕ್ಷದ ಗಡಿಯನ್ನು ದಾಟಿದೆ. 2021ರ ಜೂನ್​ 6ರಂದು ದೇಶದಲ್ಲಿ 1,14,460 ಕೇಸುಗಳು ವರದಿಯಾಗಿದ್ದವು. ದೈನಂದಿನ ಸೋಂಕುಗಳ ಪ್ರಮಾಣ 28 ಪ್ರತಿಶತ ಏರಿಕೆಯಾದ್ದರಿಂದ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 3.52 ಕೋಟಿ ಆಗಿದೆ. ಅಂದಹಾಗೆ ದೇಶದ 27 ರಾಜ್ಯಗಳಲ್ಲೂ ಇದೇ ಓಮಿಕ್ರಾನ್​ ವೈರಸ್​ ಪತ್ತೆಯಾದಂತಾಗಿದೆ.


ಕಳೆದೊಂದು ದಿನದಲ್ಲಿ ದೇಶದಲ್ಲಿ 377 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 3007 ಆಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಓಮಿಕ್ರಾನ್​ ವರದಿಯಾದಂತಾಗಿದ್ದು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 876 ಪ್ರಕರಣ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 465 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ.


ಮಹಾರಾಷ್ಟ್ರದಲ್ಲಂತೂ ಕೋವಿಡ್​ 19 ಆಕ್ರಮಣ ಮಿತಿಮೀರಿ ಹೋಗಿದೆ. ಒಂದು ದಿನದಲ್ಲಿ ಮಹಾರಾಷ್ಟ್ರವು 36,265 ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದರಲ್ಲಿ 20,181 ಪ್ರಕರಣಗಳು ಮುಂಬೈ ನಗರದಲ್ಲೊಂದೇ ಪತ್ತೆಯಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಲಾಕ್​ಡೌನ್​ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್​ ಟೋಪೆ ಹೇಳಿದ್ದಾರೆ.


ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 15 ಸಾವಿರ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಇದು ಮೇ 8ರ ಬಳಿಕ ವರದಿಯಾದ ಅತೀ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದರಿಂದ ಪಾಸಿಟಿವಿಟಿ ದರವು 15 ಪ್ರತಿಶತವಾಗಿದೆ.


ದೆಹಲಿ ಹಾಗೂ ಮುಂಬೈಯನ್ನು ಹೊರತುಪಡಿಸಿ ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್​ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್​ನಿಂದಾಗಿ 302 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

1.17 Lakh Fresh COVID-19 Cases In India, 28% Higher Than Yesterday

ಇದನ್ನು ಓದಿ : Goa Restriction : ಗೋವಾ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ: ರಾಜ್ಯ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ

ಇದನ್ನೂ ಓದಿ : Weekend curfew rules : ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ

Comments are closed.