Chakda Xpress : ಸಿನಿಮಾಕ್ಕೆ ಮತ್ತೆ ಮರಳಿದ ಅನುಷ್ಕ ಶರ್ಮ

ಮೂರು ವರ್ಷಗಳ ನಂತರ ಅನುಷ್ಕಶರ್ಮ (Anushka Sharma) ಮತ್ತೆ ಸಿನಿಮಾ ಆರಂಭಿಸಿದ್ದಾರೆ. ಅದೇ ‘ಚಕ್ಡಾ ಎಕ್ಸ್‌ಪ್ರೆಸ್'( Chakda Xpress) ಟೀಂ ಇಂಡಿಯಾದ ಖ್ಯಾತ ಬೌಲರ್ ಜೂಲನ್ ಗೋಸ್ವಾಮಿ ( Fast bowler Jhulan Goswami) ಅವರ ಜೀವನ ಆಧಾರಿತ ಸಿನಿಮಾವಾಗುದೆ. ಜೂಲನ್‌ ಗೋಸ್ವಾಮಿ ಅವರ ಪಾತ್ರಕ್ಕೆ ಅನುಷ್ಕಾ ಜೀವ ತುಂಬುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭ ಗೊಂಡಿದ್ದು ಭಾರತ ಮತ್ತು ಯುಕೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

“ನನಗೆ ಈ ಸಿನಿಮಾ ಮೊದಲ ಸಿನಿಮಾದಂತೆ ಭಾಸವಾಗುತ್ತಿದೆ ಹಾಗೂ ‘ಚಕ್ದಾ ಎಕ್ಸ್‌ಪ್ರೆಸ್’ ಚಿತ್ರದೊಂದಿಗೆ ಕೆಲಸ ಮಾಡಲು ನನಗೆ ನಿಜವಾಗಲೂ ಉತ್ಸುಕನಾಗಿದ್ದೇನೆ. ಕೋವಿಡ್ 19 ನಿಂದ ಚಲನಚಿತ್ರಗೆ ಮರಳದಂತೆ ನನ್ನನ್ನು ದೂರವಿಟ್ಟಿತು. ಇನ್ನು ಮೊದಲಿನಂತೆ ಅಭಿಮಾನಿಗಳಿಗೆ ಅವರ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ ಎಂದು ಅನುಷ್ಕ ಶರ್ಮ ತನ್ನ ಇನ್ಸ್ಟಾಗ್ರಾಮ್ ಅಕೌಂಟಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮ ಅವರ ಶೆಡ್ಯೂಲ್ ನಲ್ಲಿ 30 ದಿನಗಳ ಕಾಲ ಚಕ್ದಾ ಎಕ್ಸ್‌ಪ್ರೆಸ್ ಚಿತ್ರೀಕರಣಕ್ಕೆ ಸೀಮಿತಗೊಳಿಸಿದ್ದಾರೆ ಹಾಗೂ ಯು.ಕೆ ನಲ್ಲಿ ಚಿತ್ರೀಕರಣ ನಡೆಯಲಿದೆ. ಚಕ್ಡಾ ಎಕ್ಸ್‌ಪ್ರೆಸ್’ ಸಿನಿಮಾ ಆರಂಭಗೊಂಡಿದ್ದು ನಮಗೆಲ್ಲರಿಗೂ ಸಂತೋಷ ತಂದಿದೆ ಹಾಗೂ ಈ ಚಿತ್ರಕ್ಕೆ ಎಲ್ಲಾ ವಿಭಾಗಗಳಲ್ಲಿ ಪೂರ್ವಸಿದ್ಧತೆಯ ಅಗತ್ಯವಿತ್ತು ‘ ‘ಚಕ್ದಾ ಎಕ್ಸ್‌ಪ್ರೆಸ್’ ಇನ್ನು ಸ್ಕ್ರಿಪ್ಟಿಂಗ್ ಅದ್ಭುತವಾಗಿದೆ . ಈ ಸಿನಿಮಾದಲ್ಲಿ ನನ್ನ ಸಹೋದರ ಕರ್ಣೇಶ್ ಶರ್ಮಾ ನಿರ್ಮಾಪಕರಾಗಿ ಮತ್ತು ನಿರ್ದೇಶಕ ಪ್ರೊಸಿತ್ ರಾಯ್ ಅವರೊಂದಿಗೆ ಸೃಜನಾತ್ಮಕವಾಗಿ ಕೆಲಸಮಾಡಲು ಹೆಮ್ಮೆ ಪಡೆಯುತ್ತಿದ್ದೇನೆ” ಎಂದು ಅನುಷ್ಕಾ ಶರ್ಮಾ ತಿಳಿಸಿದ್ದಾರೆ.

https://www.instagram.com/reel/Ca873Z4p1x1/?utm_source=ig_embed&utm_campaign=loading

ಜೂಲನ್ ಗೋಸ್ವಾಮಿ ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದಾರೆ . 2018 ರಲ್ಲಿ, ಗೋಸ್ವಾಮಿ ಅವರ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.ಇನ್ನು ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ,ಮಹಿಳೆಯೊಬ್ಬರು ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ಹೊಂದಿದ್ದಾರೆ.

https://www.instagram.com/p/CaY30hKJCAk/?utm_source=ig_embed&utm_campaign=loading
https://www.instagram.com/tv/CYX7vaDFcDZ/?utm_source=ig_embed&utm_campaign=loading

ಪುರುಷ ಪ್ರಧಾನ ಜಗತ್ತಿನಲ್ಲಿ ಮಹಿಳೆಯರು ತಮ್ಮ ಸ್ಥಾನವನ್ನುಗಳಿಸಲು ಪರದಾಡಬೇಕಾಗಿದೆ. ಆದರೆ ಜೂಲನ್ ಗುರುಸ್ವಾಮಿ ತಮ್ಮ ಜೀವನವನ್ನು ತಾವೇ ನಿರ್ಮಿಸಿದ್ದಾರೆ ಮತ್ತು ಪ್ರತಿಹಂತದಲ್ಲೂ ಹೋರಾಡಿದ್ದಾರೆ ಮತ್ತು ಯುವ ಜನರಿಗೆ ಪ್ರೇರಣೆ ಆಗಿದ್ದಾರೆ . ಜುಲಾನ್ ಅವರ ಜೀವನ ಮತ್ತು ಸಮಯದಿಂದ ಸ್ಫೂರ್ತಿ ಪಡೆದ ಈ ಅದ್ಭುತ ಚಿತ್ರಕಥೆಗೆ ನಾನು ನ್ಯಾಯ ಸಲ್ಲಿಸಬಹುದೆಂದು ನಾನು ಭಾವಿಸುತ್ತೇನೆ .ಈ ಚಿತ್ರದಲ್ಲಿ ಅಭಿನಯಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಮತ್ತು ‘ಚಕ್ದಾ ಎಕ್ಸ್‌ಪ್ರೆಸ್’ ಸಿನಿಮಾಕ್ಕಾಗಿ ಪ್ರತಿದಿನ ನಾನು ಕೆಲಸ ಮಾಡುತ್ತಲೇ ಇದ್ದೇನೆ, ಈ ಚಿತ್ರದ ಮೂಲಕ ನಾನು ಅತ್ಯುತ್ತಮ ಕೊಡುಗೆ ಕೊಡಬಲ್ಲೆ”ಎಂದು ಭಾವಿಸುತ್ತೇನೆ ಎಂದಿದ್ದಾರೆ ಅನುಷ್ಕಾ ಶರ್ಮಾ.

ಇದನ್ನೂ ಓದಿ : Shabaash Mithu Trailer: ಮಿಥಾಲಿ ರಾಜ್ ಕುರಿತಾದ ಸಿನೆಮಾ “ಶಭಾಷ್ ಮಿಥು” ಟ್ರೈಲರ್ ರಿಲೀಸ್ ; ವೀಕ್ಷಕರಿಂದ ಭೇಷ್ ಎನಿಸಿಕೊಂಡ ತಾಪ್ಸಿ

ಇದನ್ನೂ ಓದಿ : ದಿಗಂತ್ ಗೆ ಸ್ಪೋರ್ಟ್ಸ್ ಇಂಜುರಿ : 2 ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ ದಿಗಂತ್ ತಂದೆ ಹೇಳಿಕೆ

Anushka Sharma said that chakda xpress feels like first film again

Comments are closed.