ಸ್ಯಾಂಡಲ್‌ವುಡ್‌ ಸ್ವರ ಮಾಂತ್ರಿಕ ಅರ್ಜುನ್‌ ಜನ್ಯಗೆ ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್‌ವುಡ್‌ ಸ್ವರ ಮಾಂತ್ರಿಕ, ಕೀಬೋರ್ಡ್ ಸ್ಪೇಷಲಿಸ್ಟ್‌ ಅರ್ಜುನ್‌ ಜನ್ಯ (Arjun Janya’s birthday) ಅವರಿಗೆ ಇಂದು (ಮೇ 13) ಹುಟ್ಟುಹಬ್ಬ ಸಂಭ್ರಮ. ಅರ್ಜುನ್‌ ಜನ್ಯ ಅವರು ಕನ್ನಡ ಸಿನಿರಂಗದಲ್ಲಿ ಅದ್ಭುತ ಸಂಗೀತ ಸಂಯೋಜನೆ ಮಾಡುವುದರಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಇಂದು ಅರ್ಜುನ್‌ ಜನ್ಯ ಅವರ ಹುಟ್ಟುಹಬ್ಬಕ್ಕೆ ಸಿನಿರಂಗದ ನಟ ನಟಿಯರು ಶುಭ ಹಾರೈಸಿದ್ದಾರೆ. ಅದರಲ್ಲೂ ನಿರ್ದೇಶಕ ತರುಣ್‌ ಸುಧೀರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ನಿರ್ದೇಶಕ ತರುಣ್‌ ಸುಧೀರ್‌ ಟ್ವೀಟ್‌ನಲ್ಲಿ, “ಆತ್ಮೀಯ ಸ್ನೇಹಿತನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸಂಗೀತ ಮಾಂತ್ರಿಕ ಸಂಯೋಜಕರಿಗೆ ಶುಭಾಶಯಗಳು ಅರ್ಜುನ್ ಜನ್ಯಗೆ ಟನ್‌ಗಳಷ್ಟು ಯಶಸ್ಸು ಮತ್ತು ಏಳಿಗೆ! ಜನ್ಮದಿನದ ಶುಭಾಶಯಗಳು, ಮತ್ತು ಯಾವಾಗಲೂ ಇರುವುದಕ್ಕೆ ಧನ್ಯವಾದಗಳು” ಎಂದು ಬಹಳ ವಿಶೇಷವಾಗಿ ಶುಭ ಹಾರೈಸಿದ್ದಾರೆ.

ಅರ್ಜುನ್ ಜನ್ಯ ಅವರು ಮೇ 13ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರ ಜೊತೆಯಲ್ಲಿ ಕೀಬೋರ್ಡ್ ಕಲಿಯುತ್ತಿದ್ದರು. ಅರ್ಜುನ್ ಜನ್ಯ ಅವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರು ತನ್ನ ಯೋಜನೆಯನ್ನು ರೂಪಿಸಿಕೊಂಡು ಒಂದು ಒಳ್ಳೆಯ ಸಂಗೀತ ಸಂಯೋಜನೆ ಮಾಡಬೇಕೆಂದು ಇವರಿಗೆ ಅಂದುಕೊಂಡಿದ್ದರು.

ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾದಲ್ಲಿ ಅರ್ಜುನ್ ಅವರು ಸಂಗೀತ ಸಂಯೋಜನೆ ಮಾಡಿ, ಕನ್ನಡ ಸಿನಿರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ. ಈ ಸಿನಿಮಾ ನಂತರ ಇವರು ಅರ್ಜುನ್ ಎಂಬ ಹೆಸರಿನ ಜೊತೆಯಲ್ಲಿ ಜನ್ಯ ಎಂಬುದನ್ನು ಸೇರಿಸಿಕೊಳ್ಳುತ್ತಾರೆ. ಇದನ್ನು ಸುದೀಪ್ ಅವರು ಸೂಚಿಸಿದ್ದು ಎಂದು ಸ್ವತಃ ಅವರೇ ಹೇಳಿದ್ದಾರೆ. ನಂತರ ವಿಕ್ಟರಿ ಸಿನಿಮಾದಲ್ಲಿ ಒಳ್ಳೆಯ ಸಂಗೀತ ಸಂಯೋಜನೆಯನ್ನು ಮಾಡಿ ಜನರನ್ನು ಮತ್ತೆ ಮೋಡಿ ಗೊಳಿಸಿದರು.

ಅಷ್ಟೇ ಅಲ್ಲದೇ ಕನ್ನಡ ಸಿನಿರಂಗದ ಎ ಆರ್ ರೆಹಮಾನ್ ಎನ್ನುವ ಅಗ್ಗಳಿಕೆ ಪಡೆದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ತಮ್ಮ ಸಂಗೀತ ನಿರ್ದೇಶನದಿಂದ ಮನೆ ಮಾತಾಗಿರುವ ಪ್ರತಿಭಾವಂತ. ಇವರು ಸಂಗೀತ ನಿರ್ದೇಶಕರಾಗಿ ಬಿಡುಗಡೆಯಾದ ಮೊದಲ ಸಿನಿಮಾ,ಆಟೋಗ್ರಾಫ್ ಪ್ಲೀಸ್(2006). ಇದರಲ್ಲಿ ದಿಲೀಪ್ರಾಜ್ ಮತ್ತು ಸಂಜನಾ ನಟಿಸಿದ್ದಾರೆ. ಅಲ್ಲಿಂದ ಮುಂದೆ ಹಲವಾರು ಸಿನಿಮಾಗಳಲ್ಲಿ ಮ್ಯೂಸಿಕ್ಕಂ ಪೋಸ್ ಮಾಡಿದ್ದರು ಯಶಸ್ಸು ಸಿಗಲಿಲ್ಲ.

ಇದನ್ನೂ ಓದಿ : ಮತ್ತೋರ್ವ ಬಾಲಿವುಡ್‌ ಸ್ಟಾರ್‌ಗೆ ನಾಯಕಿಯಾದ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

2009 ರಲ್ಲಿ ಬಿರುಗಾಳಿ ಸಿನಿಮಾದ ಮೂಲಕ ಅವರ ಹೆಸರು ಕರ್ನಾಟಕದೆಲ್ಲೆಡೆ ಪಸರಿಸಿತು .ಇದರ ಎಲ್ಲಾ ಹಾಡುಗಳು ಮೆಚ್ಚುಗೆಗೆ ಪಾತ್ರವಾಯಿತು. ಇದರ ನಂತರ 2010ರಲ್ಲಿ ಬಂದ ಸಂಚಾರಿ ಸಿನಿಮಾದ ಹಾಡುಗಳು ಕನಾಟಕದ ಜನರ ಮನಸ್ಸಲ್ಲಿ ಅಚ್ಹೊತ್ತ್ತುವಂತೆ ಮಾಡಿತು. ಇತ್ತೀಚೆಗೆ ಅರ್ಜುನ್‌ ಜನ್ಯ ಕಿರುತೆರೆಯ ಸಂಗೀತ ಕಾರ್ಯಕ್ರಮಗಳಲ್ಲಿ ಜಡ್ಜ್‌ ಆಗಿ ಭಾಗಿಯಾಗಿದ್ದರು.

Arjun Janya’s birthday: Happy birthday to Sandalwood swara maestro Arjun Janya.

Comments are closed.