ಭಾನುವಾರ, ಏಪ್ರಿಲ್ 27, 2025
HomeCinemaAryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

- Advertisement -

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ಹೊರಬಂದಿದ್ದ ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸದ್ಯ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ. ಆದರೆ ಕಿಂಗ್ ಖಾನ್ ಪುತ್ರನಿಗೆ ಹಲವು ವರ್ಷಗಳಿಂದ ಗಾಂಜಾ ಸೇವನೆಯ ಹವ್ಯಾಸವಿದೆ ಎಂಬ ಸಂಗತಿ ಚಾರ್ಜಶೀಟ್ ನಲ್ಲಿ ಬಯಲಾಗಿದೆ. ಹೌದು ಬಾಲಿವುಡ್ ಸೇರಿದಂತೆ ದೇಶದಾದ್ಯಂತ ಚರ್ಚೆಗೀಡಾದ ಸಂಗತಿ ಕಿಂಗ್ ಖಾನ್ ಶಾರೂಕ್ ಪುತ್ರ ಆರ್ಯನ್ ಖಾನ್ ಬಂಧನ. ಮುಂಬೈ ಹೊರವಲಯದಲ್ಲಿ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ವಿಚಾರಕ್ಕೆ ಶಾರೂಕ್ ಪುತ್ರನನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದರು.

ಈ ವೇಳೆ ಆರ್ಯನ್ ಖಾನ್ (Aryan Khan) ತಿಂಗಳುಗಳ ಕಾಲ ಜೈಲುಪಾಲಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಮೊನ್ನೆಯಷ್ಟೇ ಆರ್ಯನ್ ಖಾನ್ ಆರೋಪಮುಕ್ತರಾಗಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರ್ಯನ್ ಖಾನ್ ದೋಷಮುಕ್ತರಾಗಿದ್ದಾರೆ. ಆದರೆ ಅಮೇರಿಕಾದಲ್ಲಿ ಪದವಿ ಓದುವಾಗ ಕಾಡುತ್ತಿದ್ದ ನಿದ್ರಾಹೀನತೆ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಲು ನಾನು ಗಾಂಜಾ ಸೇವಿಸುತ್ತಿದ್ದೇ ಎಂದು ಆರ್ಯನ್ ಖಾನ್ ಎನ್ ಸಿಬಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರಂತೆ.

ಆರ್ಯನ್ ಖಾನ್ (Aryan Khan) ಸೇರಿದಂತೆ ಇತರ ಆರೋಪಿಗಳ ವಿರುದ್ಧ ಎನ್ ಸಿಬಿ ಅಧಿಕಾರಿಗಳು ಇತ್ತೀಚಿಗೆ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಗಾಂಜಾ ಸೇವನೆ ಕುರಿತು ಆರ್ಯನ್ ಖಾನ್ ನೀಡಿದ ಶಾಕಿಂಗ್ ಹೇಳಿಕೆ ದಾಖಲಾಗಿದೆ. ಅಮೇರಿಕಾದಲ್ಲಿ ಪದವಿ ಓದುತ್ತಿರುವಾಗ ನಾನು ಗಂಭೀರವಾದ ನಿದ್ರಾಹೀನತೆಯಿಂದ ಬಳಲುತ್ತಿದ್ದೆ. ನಿದ್ರಾಹೀನತೆಗೆ ಗಾಂಜಾ ಪರಿಹಾರ ಎಂಬ ಸಂಗತಿಯನ್ನು ನಾನು ಇಂಟರನೆಟ್ ನಲ್ಲಿ ಓದಿದ್ದೆ. ಹೀಗಾಗಿ ನಾನು ಗಾಂಜಾ ಮೊರೆ ಹೋದೆ ಎಂದು ಆರ್ಯನ್ ಖಾನ್ ಹೇಳಿಕೆ ನೀಡಿದ್ದಾರಂತೆ.

ಅಲ್ಲದೇ ತಮ್ಮ ಮೊಬೈಲ್ ನಲ್ಲಿ ಕಂಡು ಬಂದ ಡ್ರಗ್ಸ್ ಚಾಟ್ ಕೂಡ ನಾನೇ ಮಾಡಿದ್ದು ಎಂದು ಆರ್ಯನ್ ಖಾನ್ (Aryan Khan) ತಪ್ಪೊಪ್ಪಿಕೊಂಡಿದ್ದಾರಂತೆ. ಐಷಾರಾಮಿ ಹಡಗಿ ನಲ್ಲಿ ಗಾಂಜಾ ಸೇವನೆಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಒಟ್ಟು 20 ಜನರ ಪೈಕಿ 14 ಜನರ ವಿರುದ್ಧ ಎನ್ ಸಿಬಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಸದ್ಯ ತಮ್ಮ ಮೇಲಿನ ಆರೋಪದಿಂದ ದೋಷಮುಕ್ತರಾಗಿರೋ ಆರ್ಯನ್ ಖಾನ್ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಇದನ್ನೂ ಓದಿ : Kangana Ranaut Dhaakad : ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್‌ಗೆ ಹಿನ್ನಡೆ : ಗಳಿಕೆಯಲ್ಲಿ ಸೋತ ಧಾಕಡ್ ಸಿನಿಮಾ

ಇದನ್ನೂ ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

Aryan Khan confesses to drugs consumption

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular