Rajya Sabha : ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ: ನಿರ್ಮಲಾ ಮತ್ತು ಜಗ್ಗೇಶ್ ಗೆ ಅವಕಾಶ

ಬೆಂಗಳೂರು : ರಾಜ್ಯಸಭಾ ಚುನಾವಣೆಗೆ (Rajya Sabha) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗೋ ಹೊತ್ತಿನಲ್ಲೇ, ಬಿಜೆಪಿ ರಾಜ್ಯಸಭಾ ಚುನಾವಣೆಗೆ ತನ್ನ ಎರಡು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman ) ಮತ್ತೊಮ್ಮೆ ರಾಜ್ಯಸಭೆ ಪುನರಾಯ್ಕೆಗೊಳ್ಳಲಿದ್ದಾರೆ.‌ ಇದರೊಂದಿಗೆ ಅಚ್ಚರಿಯ ಎಂಟ್ರಿ ಎಂಬಂತೆ ಹಿರಿಯ ಬಿಜೆಪಿ ನಾಯಕ ಹಾಗೂ ಸ್ಯಾಂಡಲ್ ವುಡ್ ನಟ ಜಗ್ಗೇಶ್ (Actor Jaggesh)ಕೂಡ ರಾಜ್ಯಸಭೆ‌ಮೆಟ್ಟಿಲೇರಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿ ಇರುವಂತೆಯೇ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಈಗಾಗಲೇ ಒಮ್ಮೆ ವಿಧಾನಪರಿಷತ್ ಗೆ ಆಯ್ಕೆ ಬಯಸಿ ಚುನಾವಣಾ ಕಣಕ್ಕಿಳಿದು ಕೈ ಸುಟ್ಟುಕೊಂಡಿದ್ದ ಹಿರಿಯ ನಟ ಜಗ್ಗೇಶ್ ಗೆ ಈ ಭಾರಿ ಅದೃಷ್ಟ ಒಲಿದು ಬಂದಿದ್ದು, ಮೊದಲ ಬಾರಿಗೆ ಸಂಸದರಾಗಿ ರಾಜ್ಯ ಸಭೆ ಪ್ರವೇಶ ಮಾಡಲಿದ್ದಾರೆ. ಇನ್ನೂ ರಾಜ್ಯಸಭೆಯ ಎರಡು ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಜೆಡಿಎಸ್ ಜೊತೆ ಮಾತುಕತೆ ನಡೆಸಿದ ಬಳಿಕ ಮೂರನೇ ಸ್ಥಾನಕ್ಕೆ ಅಭ್ಯರ್ಥಿ ಪ್ರಕಟಿಸಬೇಕೋ ಅಥವಾ ಜೆಡಿಎಸ್ ಘೋಷಿಸಿರುವ ಕುಪೇಂದ್ರ ರೆಡ್ಡಿ ಯನ್ನು ಬೆಂಬಲಿಸಬೇಕೇ ಎಂಬುದು ನಿರ್ಧಾರವಾಗಲಿದೆ.

ಅಲ್ಲದೇ ಒಂದೊಮ್ಮೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಪ್ರಕಟಿಸುವುದಾದರೇ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕೆ.ಸಿ.ರಾಮಮೂರ್ತಿಯವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇನ್ನೂ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯಲ್ಲೂ ರಾಜ್ಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದೆ. ಬಿಎಸ್ವೈ ತಂಡದಲ್ಲಿ ಗುರುತಿಸಿಕೊಂಡಿದ್ದ ಲೆಹರ್ ಸಿಂಗ್ ಹೆಸರು ರಾಜ್ಯಸಭೆ ಗೆ ಪ್ರಸ್ತಾಪಿತರ ಪಟ್ಟಿಯಲ್ಲಿತ್ತು. ಆದರೆ ಅವರಿಗೆ ಅವಕಾಶ ಸಿಕ್ಕಿಲ್ಲ.

ಮಾತ್ರವಲ್ಲ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶಿಫಾರಸ್ಸಿನ ನಿರ್ಮಲ್ ಕುಮಾರ್ ಸುರಾನಾಗೂ ಬಿಜೆಪಿ ನಾಯಕರು ಅವಕಾಶ ನೀಡಿಲ್ಲ. ಇನ್ನೂ ಹಲವು ಹೆಸರುಗಳು ಪಟ್ಟಿಯಲ್ಲಿದ್ದರೂ ಬಿಜೆಪಿ ಮಾತ್ರ ಜಗ್ಗೇಶ್ ಹೆಸರನ್ನು ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ನಿರ್ಮಲಾ ಸೀತಾರಾಮನ್ ಹೆಸರು ನೀರಿಕ್ಷಿತವಾಗಿದ್ದು, ಅದನ್ನು ಹೊರತುಪಡಿಸಿ ಈಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜಗ್ಗೇಶ್ ಗೆ ಅವಕಾಶ ನೀಡಲಾಗಿದೆ.

ಇನ್ನೂ ಈಗಾಗಲೇ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆಯ ಕಾವು ಜೋರಾಗಿದ್ದು, ಜೆಡಿಎಸ್ ಅಭ್ಯರ್ಥಿ ಎಂದೇ ಘೋಷಿತರಾಗಿರುವ ಕುಪೇಂದ್ರ ರೆಡ್ಡಿ ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕ ಭೇಟಿ ಮಾಡಿದ್ದು, ಗೆಲ್ಲಲು ಅಗತ್ಯವಿರುವ ಹೆಚ್ಚುವರಿ ಮತಗಳಿಗಾಗಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ : MLC Election Controversy : ಪರಿಷತ್ ಅಭ್ಯರ್ಥಿಗಳ ಆಯ್ಕೆ ಅಸಮಧಾನ : ಡಿಕೆ ಶಿವಕುಮಾರ್‌ಗೆ ಬಂತು ಆಕ್ರೋಶದ ಪತ್ರ

ಇದನ್ನೂ ಓದಿ : B Y Vijayendra : ಬಿಜೆಪಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ : ಯಡಿಯೂರಪ್ಪ ಹಾದಿ ಹಿಡಿಯುತ್ತಾರಾ ಪುತ್ರ

Nirmala Sitharaman and Actor Jaggesh BJP candidates for Rajya Sabha from Karnataka

Comments are closed.