assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ

assault on kannada actor chandan kumar : ಕನ್ನಡಿಗರ ಮನೆಮಗನಂತಿರೋ ಕಿರುತೆರೆ ಹಾಗೂ ಹಿರಿ ತೆರೆ ನಟ ಚಂದನ್ ಗೆ ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಅವಮಾನ ಮಾಡಲಾಗಿದ್ದು, ವೈರಲ್ ಆಗಿರೋ ವಿಡಿಯೋ ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮನೆಯ ಮಗನಾಗಿದ್ದ ನಟ ಚಂದನ್ ಗೆ ಟಾಲಿವುಡ್ ಮಂದಿ ಅಪಮಾನ ಮಾಡಿದ್ದಾರೆ.

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಎರಡಲ್ಲೂ ಮಿಂಚಿದ ಪ್ರತಿಭಾನ್ವಿತ ನಟ ಚಂದನ್ , ಸದ್ಯ ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಶೂಟಿಂಗ್ ಸೆಟ್ ನಲ್ಲಿ ಚಂದನ್ ಮೇಲೆ ಹಲ್ಲೆ ನಡೆದಿದೆ.

ಕೆಲ ದಿನಗಳ ಹಿಂದೆ ನಡೆದಿದೆ ಎನ್ನಲಾದ ಈ ಹಲ್ಲೆ ದೃಶ್ಯದ ವಿಡಿಯೋ ಈಗ ವೈರಲ್ ಆಗಿದ್ದು, ಕನ್ನಡಿಗರು ಈ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೆಲುಗು ಸೀರಿಯಲ್ ಸಾವಿತ್ರಮ್ಮಗಾರು ಅಬ್ಬಾಯಿ
ಸೆಟ್ ನಲ್ಲಿ ಚಂದನ್ ಗೆ ತಂತ್ರಜ್ಞನೊಬ್ಬ ಹಲ್ಲೆ ಮಾಡಿದ್ದಾನೆ. ಶೂಟಿಂಗ ವೇಳೆ ಚಂದನ್ ಕ್ಯಾಮರಾ ಅಸಿಸ್ಟೆಂಟ್ ಮೇಲೆ ಕ್ಷುಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಇದೇ ಕಾರಣಕ್ಕೆ ಧಾರಾವಾಹಿ ತಂತ್ರಜ್ಞರು ಹಾಗೂ ತಾಂತ್ರಿಕ ಸಿಬ್ಬಂದಿ ಚಂದನ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ತಂತ್ರಜ್ಞರು ಮಾತುಕತೆ ನಡೆಸುತ್ತಿರುವ ವೇಳೆಯೇ ನುಗ್ಗಿ ಬಂದ ಕ್ಯಾಮರಾ ಅಸಿಸ್ಟೆಂಟ್ ಒಬ್ಬ ಚಂದನ್ ಗೆ ಹೊಡೆದಿದ್ದಾರೆ.
ಸದ್ಯ ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಈಗಾಗಲೇ ಜನಮನ ಸೀರಿಯಲ್ ಸೆಳೆದಿದ್ದು ಚಂದನ್ ಲೀಡ್ ರೋಲ್ ನಲ್ಲಿ ಕಾಣಿಸಿದ್ದಾರೆ. ಇದೇ ಸೀರಿಯಲ್ ಮೂಲಕ ಚಂದನ್ ತೆಲುಗು ಇಂಡಸ್ಟ್ರಿ ಗೆ ಎಂಟ್ರಿ‌ ನೀಡಿದ್ದರು.

ಚಂದನ್ ಕನ್ನಡದಲ್ಲಿ ಈ ಹಿಂದೆ ಲಕ್ಷ್ಮೀ ಬಾರಮ್ಮ,’ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’, ‘ಸರ್ವ ಮಂಗಳ ಮಾಂಗಲ್ಯೇ’  ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಚಿನ್ನು ಖ್ಯಾತಿಯ‌ಕವಿತಾ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಧಾರವಾಹಿ ಅಲ್ಲದೆ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿರುವ ಚಂದನ್ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ನಟಿಸುತ್ತಿದ್ದಾರೆ.

ಈಗ ಚಂದನ ಮೇಲಿನ ಹಲ್ಲೆ ದೃಶ್ಯ ಸೋಷಿಯಲ್ ಮೀಡಿಯಾ ಹಾಗೂ ಚಂದನ ವನದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಕನ್ನಡಿಗರು ತೆಲುಗು ಇಂಡಸ್ಟ್ರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Visa Free Destinations:ಈ ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು ಎಂದರೆ ನಂಬುತ್ತೀರಾ?

ಇದನ್ನೂ ಓದಿ : Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?

assault on kannada actor chandan kumar during savitramma gari abbayi telugu serial shooting video viral

Comments are closed.