ಟೀಂ ಇಂಡಿಯಾ ಖ್ಯಾತ ಆಟಗಾರ ಕೆ.ಎಲ್.ರಾಹುಲ್ (KL Rahul) ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ (Athiya Shetty) ಪ್ರೀತಿಯ ಸಮಾಚಾರ ಈಗಾಗಲೇ ಬಹಿರಂಗ ವಾಗಿದೆ. ಬಾಲಿವುಡ್‌ನಲ್ಲೀಗ ಮದುವೆಯ ಪರ್ವ ಶುರುವಾಗಿದ್ದು, ಫರ್ಹಾನ್ ಅಖ್ತರ್-ಶಿಬಾನಿ ದಾಂಡೇಕರ್, ರಣಬೀರ್ ಕಪೂರ್-ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ನಡುವಲ್ಲೇ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಈಗಾಗಲೇ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಶೆಟ್ಟಿ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಗೂ ಅಧಿಕ ಕಾಲದಿಂದಲೂ ಪ್ರೀತಿಯಲ್ಲಿ ಬಂಧಿಯಾಗಿರುವ ಈ ಜೋಡಿ ವರ್ಷಾಂತ್ಯಕ್ಕೆ ಸತಿ ಪತಿಗಳಾಗೋದು ಗ್ಯಾರಂಟಿ ಅನ್ನುತ್ತಿವೆ ಮಾಧ್ಯಮವಗಳ ವರದಿ.
ಪಿಂಕ್ವಿಲ್ಲಾ ವರದಿಯ ಪ್ರಕಾರ ರಾಹುಲ್ ಆಥಿಯಾ ಜೋಟಿ ಚಳಿಗಾಲದಲ್ಲಿ ಮದುವೆಗೆ ಸಿದ್ದರಾಗಿದ್ದಾರೆ. ಮಂಗಳೂರಿನ ಮೂಲ್ಕಿಯಲ್ಲಿ ತುಳು ಭಾಷಿಕ ಕುಟುಂಬದಲ್ಲಿ ಜನಿಸಿದ ಸುನೀಲ್ ಶೆಟ್ಟಿ ಭಾರತೀಯ ಚಿತ್ರರಂಗ ಖ್ಯಾತ ನಟರಾಗಿ ಮೆರೆದಿದ್ದಾರೆ. ಈಗಾಗಲೇ ಮಗಳ ಮದುವೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸುನೀಲ್ ಶೆಟ್ಟಿ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಯೋಜನೆ ಪ್ರಾರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, 2022 ರ ಅಂತ್ಯದ ವೇಳೆಗೆ ದಂಪತಿಗಳು ಮದುವೆಯಾಗುತ್ತಾರೆ.
ಕೆ.ಎಲ್.ರಾಹುಲ್ ಭಾರತ ತಂಡದ ಖ್ಯಾತ ಆಟಗಾರರಾಗಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಉಪ ನಾಯಕರಾಗಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಕೆ.ಎಲ್. ರಾಹುಲ್ ಆಥಿಯಾ ಜೊತೆ ಆಗಾಗಾ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇದೀಗ ಆಥಿಯಾ ಶೆಟ್ಟಿ ರಾಹುಲ್ ಜೊತೆಗೆ ಇರುವ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Kajal Aggarwal : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್ ಅರ್ಗವಾಲ್
ಇದನ್ನೂ ಓದಿ : ಅಮುಲ್ ಕಾರ್ಟೂನ್ ರೂಪದಲ್ಲಿ ಮೂಡಿಬಂತು ರಾಕಿ ಭಾಯ್ ಚಿತ್ರ