Yogaraj Bhat: ಯೋಗರಾಜ್ ಭಟ್ಟರು ಆಗ್ತಿದ್ದಾರೆ ಪಾನ್ ಇಂಡಿಯಾ ಡೈರೆಕ್ಟ್ರು! ಅದಕ್ಕೆ ಶಿವಣ್ಣ-ಪ್ರಭುದೇವ್ ಜೋಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಇದರ ನಿರ್ದೇಶಕರು ಯೋಗರಾಜ್ ಭಟ್ (Yogaraj Bhat) ಅನ್ನೋ ಸುದ್ದಿ ಹಲವು ತಿಂಗಳುಗಳಿಂದ ಗಾಂಧೀನಗರದಲ್ಲಿ ಓಡಾಡುತ್ತಿತ್ತು. ಇದು ನಿಜವೇ ಎಂದು ಯೋಗರಾಜ್ ಭಟ್ಟರನ್ನು ಕೇಳಿದಾಗಲೂ ಸಮಯ ಬಂದಾಗ ಹೇಳ್ತೀನಿ ಅಂತಲೇ ಹೇಳುತ್ತಿದ್ದವರು. ಈಗ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಇಬ್ಬರು ಸ್ಟಾರ್ ನಟರನ್ನು ಇಟ್ಟುಕೊಂಡು ಅದ್ಬುತ ಕತೆಯನ್ನು ಹೆಣೆದಿದ್ದಾರಂತೆ ಭಟ್ಟರು. ಇದು ಪಾನ್ ಇಂಡಿಯಾ ಸಿನಿಮಾ. ಭಟ್ಟರ ಮೊದಲ ಪಾನ್ ಇಂಡಿಯಾ ಪ್ರವೇಶ. ಎಷ್ಟು ಭಾಷೆಯಲ್ಲಿ ಬಿಡುಗಡೆಯಾಗುತ್ತದೆ, ಎಲ್ಲವೂ ಒಂದೇ ಸಲ ಆಗುತ್ತದೆಯೇ ಅನ್ನೋ ಮಾಹಿತಿ ಇಲ್ಲ. ಪಾನ್ ಇಂಡಿಯಾ ಸಿನಿಮಾ ಅಂದರೆ ನಿರ್ಮಾಪಕರ ಅಷ್ಟೇ ದೊಡ್ಡವರಾಗಿರಬೇಕು. ಹೌದು, ಅದುವೇ, ರಾಕ್ ಲೈನ್ ವೆಂಕಟೇಶ್ ಈ ಸಿನಿಮಾ ನಿರ್ಮಾಪಕರು ಅನ್ನೋದು ಖಚಿತವಾಗಿದೆ.

ಪ್ರಸ್ತುತ ಯೋಗರಾಜ್ ಭಟ್ ಅವರು ಗಾಳಿಪಟ-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಗರಡಿ ಸಿನಿಮಾದ ಬಹುತೇಕ ಶೂಟಿಂಗ್ ಪೂರೈಸಿದ್ದಾರಂತೆ. ಈ ಎರಡೂ ಸಿನಿಮಾದ ನಂತರ ಶಿವಣ್ಣ-ಪ್ರಭುದೇವ್ ಅವರ ಕಾಂಬಿನೇಷನ್ ಹೊಸ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆಯಂತೆ. ಕುಲದಲ್ಲಿ ಕೀಳ್ಯಾವುದೋ ಅನ್ನೋ ಟೈಟಲ್ ಸಿನಿಮಾಕ್ಕೆ ಇಟ್ಟಿದ್ದಾರೆ. ಇದು ಪಾನ್ ಇಂಡಿಯಾ ಲೆವೆಲ್ ಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಯೋಗರಾಜ್ ಭಟ್ಟರು ಹೇಳುವುದು ಇಷ್ಟು- ಇದು ತಾತ್ಕಾಲಿಕ ಶೀರ್ಷಿಕೆ. ಅಂತಿಮವಾಗಿ ಬೇರೆ ಇಡಬೇಕಾಗಬಹುದು. ದೊಡ್ಡಮಟ್ಟದ ಪ್ರಾಜೆಕ್ಟ್ ಇದು. ನನ್ನ ವೃತ್ತಿಜೀವನದ ಬಹುದೊಡ್ಡ ಬಜೆಟ್ ನ ಚಿತ್ರ. 1960-70 ದಶಕದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಿದ್ದೇವೆ ಎಂದು ಭಟ್ಟರು ವಿವರಣೆ ನೀಡುತ್ತಾರೆ.

ಶಿವರಾಜ್ ಕುಮಾರ್ ಕೂಡ ಪ್ರಭುದೇವ್ ಹಾಗೂ ಯೋಗರಾಜ್ ಭಟ್ಟ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರಂತೆ. ನಾನು ಈಗಾಗಲೇ ಸ್ಕ್ರಿಪ್ಟ್ ಓದಿದ್ದೇನೆ. ಯೋಗ್ ರಾಜ್ ಭಟ್ಟ್ ಒಳ್ಳೆ ಕಥೆ ಮಾಡಿಕೊಂಡು ಬಂದಿದ್ದಾರೆ. ನನಗೂ ಮತ್ತು ಪ್ರಭು ಇಬ್ಬರಿಗೂ ಸರಿಸಮಾನವಾದ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಶಿವಣ್ಣ ಹೇಳಿದ್ದಾರೆ.

ರಾಕ್ ಲೈನ್ ಪ್ರೊಡಕ್ಷನ್ ಈಗಾಗಲೇ ಲಿಂಗಾ, ಬಜರಂಗಿ ಭಾಯಿಜಾನ್ ನಂಥ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆಯಾದರೂ, ಕನ್ನಡದಲ್ಲಿ ಇದು ಚೊಚ್ಚಲ ಬಿಗ್ ಬಜೆಟ್ ಸಿನಿಮಾ. ಭಟ್ಟರ ಈ ಚಿತ್ರದ ಜೊತೆ ಜೊತೆಗೆ ವಿಜಯ್ ದೇವರಕೊಂಡ ಅವರ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಇದನ್ನೂ ಓದಿ : KGF Chapter 2 : ಅಮುಲ್​​ ಕಾರ್ಟೂನ್​​ ರೂಪದಲ್ಲಿ ಮೂಡಿಬಂತು ರಾಕಿ ಭಾಯ್​ ಚಿತ್ರ

ಇದನ್ನೂ ಓದಿ :Athiya Shetty KL Rahul : ಹಸೆಮಣೆ ಏರಲು ಸಜ್ಜಾದ ಕೆ.ಎಲ್.ರಾಹುಲ್‌, ಆಥಿಯಾ ಶೆಟ್ಟಿ

(Yogaraj Bhat will debut as pan Indian director)

Comments are closed.