ನಟ ಗಣೇಶ್‌, ಪ್ರೀತಂ ಗುಬ್ಬಿ ಕಾಂಬಿನೇಷನ್‌ ‘ಬಾನ ದಾರಿಯಲ್ಲಿ’ ನಾಳೆ ಸಾಂಗ್‌ ರಿಲೀಸ್

ಸ್ಯಾಂಡಲ್‌ವುಡ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆದ್ದಿದೆ. ಇದೀಗ ಮತ್ತೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ‘ಬಾನ ದಾರಿಯಲ್ಲಿ’ ಸಿನಿಮಾ ಮೂಡಿ ಬರುತ್ತಿದ್ದು, ಈ ಸಿನಿಮಾದ ಟೀಸರ್‌ನ್ನು ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಸಿನಿತಂಡ ಬಿಡುಗಡೆ ಆಗಿದೆ. ಈ ಸಿನಿಮಾದ ಟೀಸರ್‌ ನೋಡಿದ ಸಿನಿಪ್ರೇಕ್ಷಕರು ಮತ್ತೆ ಮಳೆ ಹುಡುಗನನ್ನು ನೆನಪಿಸಿಕೊಂಡಿದ್ದಾರೆ. ಇನ್ನು ನಾಳೆ (ಮಾರ್ಚ್‌ 13) ಸೋಮವಾರರಂದು ಸಂಜೆ 5 ಗಂಟೆಗೆ ಈ ಸಿನಿಮಾದ (Baanadariyalli Hode Yelli song) ಹಾಡನ್ನು ಬಿಡುಗಡೆ ಮಾಡುವ ಬಗ್ಗೆ ಸಿನಿತಂಡ ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಗಣೇಶ್‌ ಅಭಿನಯದ ಬಾನ ದಾರಿಯಲ್ಲಿ ಸಿನಿಮಾದ ಹಾಡು “ಬಾನದಾರಿಯಲ್ಲಿ ಹೋದೆ ಎಲ್ಲಿ” ಹಾಡನ್ನು ರಾಜೇಶ್‌ ಕೃಷ್ಣ ಹಾಡಿದ್ದು, ಇದಕ್ಕೆ ಅರ್ಜುನ್‌ ಜನ್ಯ ಕಾಂಪೋಸ್‌ ಮಾಡಿದ್ದಾರೆ. ಹೀಗಾಗಿ ರಾಜೇಶ್‌ ಕೃಷ್ಣ ಹಾಗೂ ಅರ್ಜುನ್‌ ಜನ್ಯ ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಹಾಡು ಕೇಳುಗರನ್ನು ಗಮನ ಸೆಳೆಯುವುದು ಖಂಡಿತ ಎಂದಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ರೊಮ್ಯಾಂಟಿಕ್ ಲವ್‌ಸ್ಟೋರಿಯಲ್ಲಿ ನಟ ಗಣೇಶ್‌ ಜೊತೆಯಾಗಿ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ನಟಿಸ್ತಿದ್ದಾರೆ.

ನಟ ಗಣೇಶ್‌ ಹಾಗೂ ಪ್ರೀತಂ ಕಾಂಬಿನೇಷನ್‌ನಲ್ಲಿ ಈಗಾಗಲೇ 3 ಸಿನಿಮಾಗಳು ಬಂದಿವೆ. ಇದೀಗ 4ನೇ ಸಿನಿಮಾವಾದ ‘ಬಾನ ದಾರಿಯಲ್ಲಿ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀವಾರೆ ಟಾಕೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾಕ್ಕೆ ಪ್ರೀತಂ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ತಿ ಡೈಲಾಗ್ಸ್ ಸಿನಿಮಾಕ್ಕಿದೆ. ಮೊದಲ ನೋಟದಲ್ಲೇ ಸಿನಿಮಾ ಟೀಸರ್ ಸಖತ್ ಕಿಕ್ ಕೊಡುತ್ತಿದೆ. ಭಾವನಾತ್ಮಕ ಸನ್ನಿವೇಶಗಳನ್ನು ಗಣೇಶ್ ನಟನೆ ಸಿನಿಪ್ರೇಕ್ಷಕರನ್ನು ಮೋಡಿ ಮಾಡಲಿದೆ.

‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಗಣೇಶ್ ಕ್ರಿಕೆಟರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ನಾಯಕಿ ರುಕ್ಮಿಣಿ ಸ್ವಿಮ್ಮಿಂಗ್ ಕೋಚ್ ಲೀಲಾ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಪ್ರೀತಿ, ಪಜೀತಿಯ ಕಥೆ ಸಿನಿಮಾದಲ್ಲಿದೆ. ಲವ್ ಸ್ಟೋರಿ ಸಿನಿಮಾಗಳನ್ನು ಮಾಡುವುದರಲ್ಲಿ ಪ್ರೀತಂ ಎತ್ತಿದ್ದ ಕೈ ಎನ್ನಲಾಗಿದೆ. ಈ ಬಾರಿ ಕೂಡ ಒಂದೊಳ್ಳೆ ಪ್ರೇಮಕಥೆಯನ್ನು ಕಟ್ಟಿಕೊಟ್ಟಿರೋದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮಕಥೆಯಂತೆ ಕಂಡರೂ ಬಹುತೇಕ ಕಥೆ ನಟ ಗಣೇಶ್ ಹಾಗೂ ರುಕ್ಮಿಣಿ ಪಾತ್ರಗಳ ಸುತ್ತಾ ಸುತ್ತುವಂತೆ ಕಾಣುತ್ತಿದೆ.

ಇದನ್ನೂ ಓದಿ : ನಟಿ ಮಾಧುರಿ ದೀಕ್ಷಿತ್‌ ತಾಯಿ ಸ್ನೇಹಲತಾ ವಿಧಿವಶ

ಇದನ್ನೂ ಓದಿ : Oscars 2023 : RRR ನಾಟು ನಾಟು ಆಸ್ಕರ್ ಪ್ರಶಸ್ತಿ ಗೆಲ್ಲಬೇಕು : ಎಆರ್ ರೆಹಮಾನ್

ಇದನ್ನೂ ಓದಿ : Oscars 2023 : ಆಸ್ಕರ್‌ ಅವಾರ್ಡ್‌ನಲ್ಲಿ RRR ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ನಟಿ ಲಾರೆನ್ ಗಾಟ್ಲೀಬ್

ಇನ್ನು ಅದ್ಭುತ ಲೊಕೇಶನ್‌ಗಳಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಸಿಜಿ ವರ್ಕ್ ಕೂಡ ಸೊಗಸಾಗಿದೆ. ಗಣಿ ಕ್ರಿಕೆಟರ್ ಆಗಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸ್ತಿದ್ದು, ರುಕ್ಮಿಣಿ, ರೀಷ್ಮಾ ಗ್ಲಾಮರ್ ಟಚ್ ಸಿನಿಮಾಕ್ಕಿದೆ. ಬೆಂಗಳೂರು, ಚೆನ್ನೈ, ಮಂಗಳೂರು ಹಾಗೂ ಕೀನ್ಯಾದಲ್ಲಿ ಸಿನಿಮಾ ಶೂಟಿಂಗ್ ನಡೆಸಿದ್ದಾರೆ. ಟೀಸರ್ ಭರವಸೆ ಮೂಡಿಸಿದ್ದು, ಅಭಿಮಾನಿಗಳು ಗಣಿ ಈಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ. ‘ಗಾಳಿಪಟ- 2’ ನಂತರ ಬಂದ ‘ತ್ರಿಬಲ್ ರೈಡಿಂಗ್’ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ‘ಬಾನ ದಾರಿಯಲ್ಲಿ’ ಸಿನಿಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಹುಟ್ಟು ಹಾಕಿದೆ.

Baanadariyalli Hode Yelli song : Actor Ganesh, Pritam Gubbi combination ‘Baana Dariyalli’ song release tomorrow

Comments are closed.