ರಕ್ಷಿತ್ ಶೆಟ್ಟಿ ತುಳುನಾಡಿದ ಹೆಮ್ಮೆ, ಅವರನ್ನು ಟಾರ್ಗೆಟ್ ಮಾಡಬೇಡಿ : ಮಿಥುನ್ ರೈ

ಉಡುಪಿ: (Mithun Rai controversial statement) ಜಿಲ್ಲೆಯಲ್ಲಿ ನಡೆದ ಸಭೆಯೊಂದರಲ್ಲಿ ಮಿಥುನ್‌ ರೈ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಆ ಹೇಳಿಕೆಗೆ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗಿದ್ದವು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸಲ್ಮಾರ ರಾಜರು ಎಂಬ ಹೇಳಿಕೆ ನಮ್ಮ ಚಿತ್ರನಟ ರಕ್ಷಿತ್ ಶೆಟ್ಟಿ ಕೂಡ ಟ್ವಿಟರ್‌ ಖಾತೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮಿಥುನ್‌ ರೈ ಅವರು ರಕ್ಷಿತ್‌ ಶೆಟ್ಟಿ ಅವರ ಮಾತಿನಲ್ಲಿ ಸರಿ ಇರಬಹುದು. ಅವರನ್ನು ಟಾರ್ಗೆಟ್‌ ಮಾಡಬೇಡಿ, ಅವರು ನಮ್ಮ ತುಳುನಾಡಿನ ಹೆಮ್ಮೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಿಥುನ್‌ ರೈ ಪೇಜಾವರ ಶ್ರೀ ಗಳ ನಿಷ್ಠಾವಂತ ಅನುಯಾಯಿಯಾಗಿದ್ದು ಅವರ ಬೋಧನೆಗಳು ಹಾಗೂ ಕೋಮು ಸೌಹಾರ್ದ ಸಿದ್ದಾಂತಗಳನ್ನು ಪಾಲಿಸಿಕೊಂಡು ಬಂದಿರುವುದಾಗಿ ಮುಂದೆಯೂ ಪಾಲಿಸುವುದಾಗಿ ಮಿಥುನ್‌ ರೈ ಹೇಳಿದ್ದಾರೆ. ತಾನು ಏನೇ ಮಾತನಾಡಿದರು ಅದು ಪೇಜಾವರ ಶ್ರೀ ಗಳ ಭಾಷಣದಿಂದ ಉಲ್ಲೇಖಿಸಲ್ಪಟ್ಟಿದೆಯೇ ಹೊರತು, ಯಾವುದು ನನ್ನ ವೈಯಕ್ತಿಕ ಹೇಳಿಕೆಯಲ್ಲ, ನಾನು ಇತಿಹಾಸಕಾರನಲ್ಲ ಎಂದಿದ್ದಾರೆ .

ಇದು ಬಿಜೆಪಿಯವರು ಸೃಷ್ಟಿಸಿದ ವಿವಾದ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದರಿಂದಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ನಡೆಸಿದಂತಹ ಒಂದು ರಾಜಕೀಯ ಗಿಮಿಕ್‌ ಅಗಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದಿದ್ದಾರೆ. ಇನ್ನೂ ಮಿಥುನ್‌ ರೈ ಅವರ ಹೇಳಿಕೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಕ್ಷಿತ್‌ ಶೆಟ್ಟಿ ಬಗ್ಗೆ ಕೂಡ ಮಿಥುನ್‌ ರೈ ಮಾತನಾಡಿದ್ದು, ಅವರ ಮಾತು ಸರಿ ಇರಬಹುದು. ತನ್ನ ದೃಷ್ಠಿಕೋನದಿಂದ ತಾನು ಕೂಡ ಸರಿ. ಹಾಗೆ ನಮ್ಮ ಉದಯೋನ್ಮುಖ ನಟ ರಕ್ಷಿತ್‌ ಶೆಟ್ಟಿ ಅವರನ್ನು ಟಾರ್ಗೆಟ್‌ ಮಾಡಬೇಡಿ ಅವರು ನಮ್ಮ ತುಳುನಾಡಿನ ಹೆಮ್ಮೆ ಎಂದಿದ್ದಾರೆ.

ಇದನ್ನೂ ಓದಿ : ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನರ ರಾಜರು: ವಿವಾದದ ಕಿಡಿ ಹೊತ್ತಿಸಿದ ಮಿಥುನ್‌ ರೈ

ಇದನ್ನೂ ಓದಿ : ಉಡುಪಿ ಕೃಷ್ಣ ಮಠದ ಕುರಿತು ಮಿಥುನ್‌ ರೈ ವಿವಾದತ್ಮಕ ಹೇಳಿಕೆ : ಟ್ವಿಟರ್‌ನಲ್ಲಿ ಕಿಡಿಕಾರಿದ ನಟ ರಕ್ಷಿತ್‌ ಶೆಟ್ಟಿ

ತುಳುನಾಡಿನ ಶ್ರೇಯೋಭಿವೃದ್ದಿಗಾಗಿ ತಾನು ಯಾವಾಗಲು ದುಡಿಯುತ್ತೇನೆ ಗೌರವಾನ್ವಿತ ಶ್ರೀಗಳು ಕಲಿಸಿದಂತೆಯೇ ತಾನೂ ಕೂಡ ಕೋಮು ಸೌಹಾರ್ದತೆಯನ್ನು ಬೋಧಿಸುವುದಾಗಿ ಹೇಳಿದ್ದಾರೆ.

Mithun Rai controversial statement: Rakshit Shetty’s pride is crushed, don’t target him: Mithun Rai

Comments are closed.