Babiya crocodile died : ಅನಂತಪದ್ಮನಾಭ ದೇವಸ್ಥಾನದ ದೇವರ ಮೊಸಳೆ ಬಬಿಯಾ ಇನ್ನಿಲ್ಲ

ಕಾಸರಗೋಡು : (Babiya crocodile died) ಕುಂಬಳೆ ಸಮೀಪದ ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿದ್ದ ದೇವರ ಮೊಸಳೆ ಎಂದೇ ಖ್ಯಾತಿ ಗಳಿಸಿದ್ದ ಮೊಸಳೆ ಬಬಿಯಾ ವಯೋಸಹಜ‌ ಅನಾರೋಗ್ಯದಿಂದ ಸಾವನ್ನಪ್ಪಿದೆ(Babiya crocodile died). ಎಲ್ಲ ಪುಣ್ಯಕ್ಷೇತ್ರಗಳಲ್ಲಿರುವ ಪಟ್ಟದ ಆನೆ,ಕುದುರೆ,ಹಸುವಿನಂತೇ ಕುಂಬಳೆ ಅನಂತ ಪದ್ಮನಾಭ ದೇವಾಲಯದಲ್ಲಿ ಮೊಸಳೆ ಅಂದಾಜು 70 ವರ್ಷಗಳಿಂದ ಅನಂತ ಪದ್ಮನಾಭನ ಕ್ಷೇತ್ರಪಾಲಕನಂತೆ ಇತ್ತು.

ಸರೋವರದ ಮಧ್ಯದಲ್ಲೇ ಇರುವ ಅನಂತ ಪದ್ಮನಾಭ ದೇವಾಲಯದಲ್ಲಿದ್ದ ಬಬಿಯಾ ದೇವರ ಮೊಸಳೆ9Babiya crocodile died) ಎಂದೇ ಖ್ಯಾತಿ ಪಡೆದಿತ್ತು. ಪ್ರತಿನಿತ್ಯ ದೇವರ ಮಹಾಮಂಗಳಾರತಿ ವೇಳೆ ಬಬಿಯಾ ನೀರಿನಿಂದ ಮೇಲಕ್ಕೆ ಬಂದು ದೇವರ ದರ್ಶನ ಪಡೆಯುತ್ತಿತ್ತು. ಅಲ್ಲದೇ ದೇವಾಲಯದಲ್ಲಿ ಮಧ್ಯಾಹ್ನ ಸಿದ್ಧಪಡಿಸಲಾಗುವ ಪ್ರಸಾದವನ್ನೇ ಬಬಿಯಾಗೆ ಅರ್ಪಿಸಲಾಗುತ್ತಿತ್ತು.

ಪ್ರತಿನಿತ್ಯ ದೇವರ ಪೂಜೆಯ ಬಳಿಕ ಪ್ರಸಾದವನ್ನು ಸಿದ್ಧಪಡಿಸಿ ಕೆರೆದಂಡೆಯ ಮೇಲಿಟ್ಟು ಬಬಿಯಾನನ್ನು ಆಹ್ವಾನಿಸಲಾಗುತ್ತಿತ್ತು. ಈ ವೇಳೆ ನೀರಿನಿಂದ ಮೇಲಕ್ಕೆ ಬರುತ್ತಿದ್ದ ದೇವರ ಪ್ರಸಾದವನ್ನೇ ಸ್ವೀಕರಿಸುತ್ತಿತ್ತು.

ಇದನ್ನೂ ಓದಿ : BBK Season9 :ಬಿಗ್ ಬಾಸ್ ಮನೆಯಿಂದ ನವಾಜ್ ಔಟ್

ಅಲ್ಲದೇ ಹಲವು ವರ್ಷಗಳ ಹಿಂದೆ ಬಬಿಯಾ ದೇವಾಲಯದ ಒಳಗೆಲ್ಲ ಓಡಾಡಿ ಅಚ್ಚರಿ ಮೂಡಿಸಿತ್ತು. ಕೆರೆಯ ಒಳಗಡೆ ಇದ್ದರೂ ಮೀನು ಸೇರಿದಂತೆ ಯಾವುದೇ ಪ್ರಾಣಿಯನ್ನು ಬಬಿಯಾ ತಿನ್ನುತ್ತಿರಲಿಲ್ಲ. ಹೀಗಾಗಿ ಬಬಿಯಾನನ್ನು ಸಸ್ಯಹಾರಿ‌ ಮೊಸಳೆ ಎಂದೇ ಕರೆಯಲಾಗುತ್ತಿತ್ತು.

ಇದನ್ನೂ ಓದಿ : Gandhadagudi Trailer Release : ಪುನೀತ್ ರಾಜ್ ಕುಮಾರ್ “ಗಂಧದಗುಡಿ”ಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಬಬಿಯಾ ಮೊಸಳೆ ಇಷ್ಟು ವರ್ಷಗಳ ಕಾಲ ಇದೇ ಕೆರೆಯಲ್ಲಿ ಇದ್ದರೂ ದೇವಾಲಯಕ್ಕೆ ಬಂದ ಯಾವುದೇ ಪ್ರವಾಸಿಗರಿಗೆ ತೊಂದರೆ ಕೊಟ್ಟ ಉದಾಹರಣೆ ಇರಲಿಲ್ಲ. ಶುದ್ಧ ಕೆರೆಯ ನೀರಿನಲ್ಲಿ ಇದ್ದ ಈ ಮೊಸಳೆಯನ್ನು ಸ್ಥಳೀಯರು ಹಾಗೂ ದೇವಾಲಯದ ಭಕ್ತರು ಅನಂತ ಪದ್ಮನಾಭನ ಪ್ರತಿರೂಪ ಎಂದೇ ಭಾವಿಸಿದ್ದರು.

ದೀರ್ಘಕಾಲದವರೆಗೆ ಅನಂತ ಪದ್ಮನಾಭನ ಸನ್ನಿಧಾನದಲ್ಲಿದ್ದ ಬಬಿಯಾ ಈಗ ತನ್ನ ಬದುಕಿಗೆ ವಿದಾಯ ಹೇಳಿದ್ದು, ದೇವಾಲಯದ ಆವರಣದಲ್ಲಿ ಬಿಳಿ ಪಂಜೆ ಹಾಸಿ‌ ಅದರ ಮೇಲೆ ಬಬಿಯಾ ಕಳೇಬರ ಇಟ್ಟು ಅದಕ್ಕೆ ಪೂಜೆ ಸಲ್ಲಿಸಿ ಅಂತಿಮ ವಿಧಿ ವಿಧಾನದ ಮೂಲಕ ಭಕ್ತರು ಬಬಿಯಾಗೆ ವಿದಾಯ ಕೋರಿದ್ದಾರೆ

ಇದನ್ನೂ ಓದಿ : Pawan Sehrawat Injured : ಪ್ರೊ ಕಬಡ್ಡಿ ಲೀಗ್: ಮಾಜಿ “ಗೂಳಿ” ಪವನ್ ಸೆಹ್ರಾವತ್‌ಗೆ “ಪ್ರಥಮ ಚುಂಬನಂ ದಂತಭಗ್ನಂ

ತಿರುವನಂತಪುರದಲ್ಲಿರೋ ಅನಂತ ಪದ್ಮನಾಭ ದೇವಾಲಯಕ್ಕೆ ಈ ದೇವಾಲಯವೇ ಮೂಲ ಸ್ಥಾನವೆಂದು ಹೇಳಲಾಗಿದ್ದು , ಈ ದೇವಾಲಯದ ಬಳಿ ಇರುವ ಸುರಂಗದಲ್ಲಿ‌ಸಾಗಿದರೇ ತಿರುವನಂತಪುರದಲ್ಲಿರೋ ಅನಂತ ಪದ್ಮನಾಭ ಸ್ವಾಮಿ ದೇವಾಲಯ ತಲುಪಬಹುದೆಂಬ ಪ್ರತೀತಿಯೂ ಇದೆ.

ಇದನ್ನೂ ಓದಿ : Dhoni Entertainment : ಕ್ಯಾಪ್ಟನ್ ಕೂಲ್ ಧೋನಿ ಇನ್ನು ಮುಂದೆ ಸಿನಿಮಾ ಪ್ರೊಡ್ಯೂಸರ್.. ತಮಿಳು, ತೆಲುಗು, ಮಲಯಾಳಂ ಚಿತ್ರ ನಿರ್ಮಿಸಲಿದ್ದಾರೆ ಮಾಹಿ

ಎಲ್ಲೆಡೆ ದೇವಾಲಯದಲ್ಲಿ ಸಾಮಾನ್ಯವಾಗಿ ವಿಗ್ರಹ ಕಲ್ಲು ಅಥವಾ ಲೋಹದಿಂದ ನಿರ್ಮಾಣವಾಗಿರುತ್ತದೆ. ಆದರೆ ಇಲ್ಲಿ ಮಾತ್ರ ಆರ್ಯುವೇದ ಮೂಲಿಕೆಗಳಿಂದ ಹಾಗೂ ವಿವಿಧ ದ್ರವ್ಯಗಳ ಲೇಪನದಿಂದ ಮೂರ್ತಿ ತಯಾರಾಗಿದ್ದು ಇದನ್ನು ಕಡು ಶರ್ಕರ ಪಾಕದ ವಿಗ್ರಹ ಎಂದು ಕರೆಯಲಾಗುತ್ತದೆ.

(Babiya crocodile died) Babiya, the crocodile who was famous as God’s crocodile in Sri Ananta Padmanabha temple near Kumbale, died due to old age.

Comments are closed.