Dhoni Entertainment : ಕ್ಯಾಪ್ಟನ್ ಕೂಲ್ ಧೋನಿ ಇನ್ನು ಮುಂದೆ ಸಿನಿಮಾ ಪ್ರೊಡ್ಯೂಸರ್.. ತಮಿಳು, ತೆಲುಗು, ಮಲಯಾಳಂ ಚಿತ್ರ ನಿರ್ಮಿಸಲಿದ್ದಾರೆ ಮಾಹಿ

ಬೆಂಗಳೂರು : ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ಭಾರತಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದುಕೊಟ್ಟ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಇನ್ನು ಮುಂದೆ ಸಿನಿಮಾ ಪ್ರೊಡ್ಯೂಸರ್(Dhoni Entertainment) ಆಗಲಿದ್ದಾರೆ. ಕ್ರಿಕೆಟ್ ಜೊತೆ ಹೊಸ ಸಾಹಸಕ್ಕೆ ಕೈ ಹಾಕಿರುವ ಧೋನಿ, ದಕ್ಷಿಣ ಭಾರತದ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು, “ಧೋನಿ ಎಂಟರ್’ಟೈನ್ಮೆಂಟ್” ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. “ಧೋನಿ ಎಂಟರ್’ಟೈನ್ಮೆಂಟ್” ಪ್ರೊಡಕ್ಷನ್ಸ್’ನಲ್ಲಿ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾಗಳು ನಿರ್ಮಾಣವಾಗಲಿವೆ.

2008ರಿಂದಲೂ ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿಯವರಿಗೆ ತಮಿಳುನಾಡಿನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಧೋನಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಈ ಕಾರಣದಿಂದ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಧೋನಿ ಸಿನಿಮಾ ನಿರ್ಮಿಸಲು (Dhoni Entertainment)ಮುಂದಾಗಿದ್ದಾರೆ.

ಎಂ.ಎಸ್ ಧೋನಿಗೂ ಸಿನಿಮಾಗೂ ದೊಡ್ಡ ನಂಟಿದೆ. ಧೋನಿ ಅವರ ಜೀವನ ಚರಿತ್ರೆ ಕುರಿತಾದ “ಧೋನಿ, ದಿ ಅನ್’ಟೋಲ್ಡ್ ಸ್ಟೋರಿ” ಸಿನಿಮಾ 2016ರಲ್ಲಿ ತೆರೆ ಕಂಡಿತ್ತು. ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸದ್ದು ಮಾಡದ್ದ ಧೋನಿ ಸಿನಿಮಾ ಬಾಕ್ಸಾಫೀಸ್’ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಸಿನಿಮಾದಲ್ಲಿ ಧೋನಿಯವರ ಬದುಕಿನಲ್ಲಿ ನಡೆದ ಘಟನೆಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿತ್ತು. ಧೋನಿ ಪಾತ್ರವನ್ನು ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಿದ್ದರು. ಧೋನಿ ಅವರ ಹಾವಭಾವಗಳನ್ನು ಯಥಾವತ್ತಾಗಿ ಅಭಿನಯಿಸಿ ತೋರಿಸಿದ್ದ ಸುಶಾಂತ್ ಅಭಿನಯ ಭಾರೀ ಮೆಚ್ಟುಗೆಗೆ ಪಾತ್ರವಾಗಿತ್ತು. ಇದೀಗ ಸ್ವತಃ ಧೋನಿಯವರೇ ಸಿನಿಮಾ ನಿರ್ಮಾಪಕರಾಗಲಿದ್ದಾರೆ.

ಇದನ್ನೂ ಓದಿ : Rishabh Pant Urvashi Rautela: “ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ..” ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ ಊರ್ವಶಿ ರೌಟೇಲಾ..?

ಇದನ್ನೂ ಓದಿ : Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ ಕಟೌಟ್ ಭಾಗ್ಯ

ಇದನ್ನೂ ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

40 ವರ್ಷದ ಎಂ.ಎಸ್ ಧೋನಿ 2023ರ ಐಪಿಎಲ್ ಟೂರ್ನಿಯ ನಂತರ ಎಲ್ಲಾ ಪ್ರಕಾರದ ಕ್ರಿಕೆಟ್’ಗೆ ವಿದಾಯ ಹೇಳುವ ಸಾಧ್ಯತೆಯಿದೆ. 2014ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದ ಧೋನಿ, 2020ರಲ್ಲಿ ಏಕದಿನ ಕ್ರಿಕೆಟ್’ಗೂ ನಿವೃತ್ತಿ ಘೋಷಿಸಿದ್ದರು. ಇದೀಗ ಐಪಿಎಲ್’ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಮಾಹಿ ಮುಂದಿನ ವರ್ಷ ಐಪಿಎಲ್’ನಗೂ ವಿದಾಯ ಹೇಳುವ ಸಾಧ್ಯತೆಯಿದೆ.

Captain Cool Dhoni is now a movie producer.. Mahi will produce a Tamil, Telugu, Malayalam film.

Comments are closed.