ಸಾಲು ಸಾಲು ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದಾರೆ ಬಹುಭಾಷಾ ಬೆಡಗಿ ಪೂಜಾ ಹೆಗ್ಡೆ (Actress Pooja Hegde ). ಹೀಗಾಗಿ ಈಗಾಗಲೇ ಕುಲದೇವರ ಮೊರೆ ಹೋಗಿರೋ ಪೂಜಾ ಹೆಗ್ಡೆ ಉಡುಪಿಗೆ ಆಗಮಿಸಿ ಪೂಜೆ ಕೂಡ ಸಲ್ಲಿಸಿದ್ದಾರೆ. ಇಷ್ಟೆಲ್ಲ ಆದ ಮೇಲೂ ಪೂಜಾ ಹೆಗ್ಡೆಗೆ ಬೇಡಿಕೆ ಕಡಿಮೆಯಾಗಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ಅಂಶ. ಆದರೆ ಇದೆಲ್ಲದರ ಮಧ್ಯೆ ಪೂಜಾ ಬೀಸ್ಟ್ ನಿರ್ಮಾಪಕರು ಶಾಕ್ ನೀಡಿದ್ದಾರೆ.
ಹೌದು ಬಾಲಿವುಡ್ ನಲ್ಲಿ ಮಿಂಚಿದ ಕರಾವಳಿ ಬೆಡಗಿ ಪೂಜಾಗೆ ಈ ವರ್ಷ ಅದೃಷ್ಟ ಕೈಕೊಟ್ಟಿದೆ. ತೆರೆಕಂಡ ಮೂರು ಸಿನಿಮಾಗಳು ಸೋತಿವೆ. ಈ ಮಧ್ಯೆ ಪೂಜಾ ಸಖತ್ ಸಿನಿಮಾ ಗಳಲ್ಲಿ ಈಗಾಗಲೇ ಬ್ಯುಸಿಯಾಗಿದ್ದು, ವಿಜಯ್ ದೇವರಕೊಂಡ ಸೇರಿದಂತೆ ಹಲವು ನಾಯಕರ ಜೊತೆ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಮಧ್ಯೆ ಇತ್ತೀಚಿಗೆ ತೆರೆಕಂಡ ಭೀಸ್ಟ್ ಸಿನಿಮಾ ಪೂಜಾರನ್ನು ಗೆಲ್ಲಿಸಬಹುದು ಎಂದು ನೀರಿಕ್ಷಿಸಲಾಗಿತ್ತು. ಆದರೆ ಈ ನೀರಿಕ್ಷೆ ಸುಳ್ಳಾಗಿದೆ. ಆದರೆ ಸಿನಿಮಾ ಗೆಲ್ಲದೇ ಸೋತಿರೋ ಬೇಸರದಲ್ಲಿರೋ ಪೂಜಾಗೆ ಸಿನಿಮಾದ ನಿರ್ಮಾಪಕರು ಮತ್ತೊಂದು ಶಾಕ್ ನೀಡಿದ್ದಾರಂತೆ.
ಸಿನಿಮಾ ಸೋತಿರೋದರಿಂದ ನಿರ್ದೇಶಕರಿಂದ ಆರಂಭಿಸಿ ನಿರ್ಮಾಪಕರ ತನಕ ಎಲ್ಲರೂ ಕಂಗಾಲಾಗಿದ್ದಾರೆ. ಅದರಲ್ಲೂ ಭೀಸ್ಟ್ ನಿರ್ಮಾಪಕರು ಈ ಸಿನಿಮಾಕ್ಕಾಗಿ ಕೋಟ್ಯಾಂತರ ರೂಪಾಯಿ ಚೆಲ್ಲಿದ್ದರು. ಆದರೂ ಸಿನಿಮಾ ಗೆದ್ದಿಲ್ಲ. ಹೀಗಾಗಿ ಸಾಲದ ಸುಳಿಗೆ ಸಿಲುಕಿರೋ ನಿರ್ಮಾಪಕರು ತಮಗೆ ಹೊರೆಯಾಗಿರುವ ನಟಿ ಪೂಜಾ ಭದ್ರತಾ ಸಿಬ್ಬಂದಿ ಹಾಗೂ ಇತರ ಸಹಾಯಕರ ದುಬಾರಿ ಹೊಟೇಲ್ ಮತ್ತು ಊಟ ತಿಂಡಿಯ ಬಿಲ್ ಭರಿಸುವಂತೆ ಪೂಜಾಗೆ ಕಳುಹಿಸಿದ್ದಾರಂತೆ.
ಭೀಸ್ಟ್ ಸಿನಿಮಾದ ಶೂಟಿಂಗ್ ವೇಳೆ ಪೂಜಾ ಹೆಗ್ಡೆ ಭದ್ರತಾ ಹಾಗೂ ಸಹಾಯಕ ಸಿಬ್ಬಂದಿಗಾಗಿ ಸಾಕಷ್ಟು ಹಣ ಖರ್ಚಾಗಿದೆಯಂತೆ. ಲಕ್ಷಾಂತರ ರೂಪಾಯಿಯನ್ನು ಕೇವಲ ಊಟ ತಿಂಡಿಗಾಗಿ ಖರ್ಚು ಮಾಡಿದ್ದಾರಂತೆ. ಈ ಬಿಲ್ ನೋಡಿ ಶಾಕ್ ಆದ ನಿರ್ಮಾಪಕರು ಈಗ ಬಿಲ್ ನ್ನು ಪೂಜಾ ಹೆಗ್ಡೆಗೆ ಕಳುಹಿಸಿ ಭರಿಸುವಂತೆ ಸೂಚಿಸಿದ್ದಾರಂತೆ. ಇದನ್ನು ನೋಡಿದ ನಟಿಗೆ ಮುಜುಗರವಾಗಿದ್ದು, ಆದರೂ ಅದನ್ನು ತೋರಿಸಿಕೊಳ್ಳದೇ ಆಯ್ತು ಸಿಬ್ಬಂದಿಯ ಬಿಲ್ ತಾನೇ ಭರಿಸೋಣ ಬಿಡಿ ಎಂದು ಪ್ರತ್ಯುತ್ತರ ನೀಡಿ ಬಿಲ್ ಪಾವತಿಗೆ ಸಿದ್ಧವಾಗಿದ್ದಾರಂತೆ.
ಸದ್ಯ ಪೂಜಾ ಹೆಗ್ಡೆ ಹೆಸರು ತೆಲುಗು, ತಮಿಳು ಚಿತ್ರರಂಗದಲ್ಲಿ ಜೋರಾಗಿ ಕೇಳಿ ಬರ್ತಿದ್ದು, ಶೂಟಿಂಗ್ ಗೆ ಸಜ್ಜಾಗ್ತಿರೋ ಕೆಜಿಎಫ್-3 ನಲ್ಲೂ ಪೂಜಾ ಇರ್ತಾರೆ ಅನ್ನೋ ಗಾಸಿಪ್ ಕೂಡ ಕೇಳಿಬಂದಿದೆ.
ಇದನ್ನೂ ಓದಿ : Bhuvanam Gaganam : ಪೃಥ್ವಿ- ಪ್ರಮೋದ್ ಸಂಗಮ, ಬರ್ತಿದೆ ‘ಭುವನಂ ಗಗನಂ’ ಸಿನಿಮಾ
ಇದನ್ನೂ ಓದಿ : Notice For Jug Jugg Jeeyo :”ಜಗ್ ಜಗ್ ಜೀಯೋ” ಚಿತ್ರಕ್ಕೆ ಕೋರ್ಟಿನಿಂದ ತಡೆ..!!
Beast movie Producer Notice to Actress Pooja Hegde refund the Helpers expenditure