ಕೊಲ್ಕತ್ತಾ : ಖ್ಯಾತ ನಟಿಯೋರ್ವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾಚಾರವೆಸಗುವ ಬೆದರಿಕೆಯೊಡ್ಡಲಾಗಿದ್ದು, ಬಂಗಾಲಿ ನಟಿ ಪ್ರತ್ಯಶಾ ಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ನಟಿ ಪ್ರತ್ಯುಶಾ ಪಾಲ್ ಗೆ ಸುಮಾರು ಮೂವತ್ತಕ್ಕೂ ಅಧಿಕ ಬಾರಿ ಅಶ್ಲೀಲ ಮೆಸೇಜ್ ಕಳುಹಿಸಲಾಗುತ್ತಿತ್ತು. ಅಲ್ಲದೇ ನಟಿಯ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತ ಜನರಿಂದ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ ಪ್ರತ್ಯುಷಾ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಪ್ರತ್ಯುಶಾ ಪಾಲ್ ಗೆ ಆರಂಭದಲ್ಲಿ ಬೆದರಿಕೆ ಮೆಸೆಜ್ ಬರುತ್ತಾ ಇದ್ದು, ನಟಿ ಅದನ್ನು ಬ್ಲಾಕ್ ಮಾಡಿದ್ದರು. ಆದರೆ ಹೊಸ ಖಾತೆಯನ್ನು ರಚಿಸಿಕೊಂಡು ನಟಿಯ ಇನ್‌ಸ್ಟಾಗ್ರಾಮ್‌ಗೆ ಮೆಸೇಜ್ ಮಾಡಿ ಶನಿವಾರ ಅತ್ಯಾಚಾರ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಇದೀಗ ಕೊಲ್ಕತ್ತಾ ಸೈಬರ್ ಅಪರಾಧದಳದ ಪೊಲೀಸರು ಆರೋಪಿಯ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66 ಸಿ, 67, 67 ಎ, ಆರ್ / ಡಬ್ಲ್ಯೂ – ಐಪಿಸಿಯ ಸೆಕ್ಷನ್ 354 ಎ, 354 ಡಿ, 506, ಮತ್ತು 509 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.