ಭಾನುವಾರ, ಏಪ್ರಿಲ್ 27, 2025
HomeCinemaBesharam Rang:‘ಬೇಷರಂ ರಂಗ್​’ ವಿರುದ್ಧ ದನಿಯೆತ್ತಿದ್ದ ಮತ್ತೊಬ್ಬ ಬಿಜೆಪಿ ನಾಯಕ : ಸಿನಿಮಾ ರಿಲೀಸ್​ ಮಾಡಿದ್ರೆ...

Besharam Rang:‘ಬೇಷರಂ ರಂಗ್​’ ವಿರುದ್ಧ ದನಿಯೆತ್ತಿದ್ದ ಮತ್ತೊಬ್ಬ ಬಿಜೆಪಿ ನಾಯಕ : ಸಿನಿಮಾ ರಿಲೀಸ್​ ಮಾಡಿದ್ರೆ ಪ್ರತಿಭಟನೆಯ ಎಚ್ಚರಿಕೆ

- Advertisement -

ಪಾಟ್ನಾ:Besharam Rang : ಶಾರುಕ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್​ ಸಿನಿಮಾ ಬಿಡುಗಡೆಗೆ ಇದೀಗ ಬಿಹಾರದಲ್ಲಿಯೂ ಅಪಸ್ವರ ಕೇಳಿ ಬಂದಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡೋದಿಲ್ಲ ಅಂತಾ ಬಿಜೆಪಿ ನಾಯಕ ಹರಿಭೂಷಣ್​ ಠಾಕೂರ್​ ಬಚೌಲ್​ ಬೆದರಿಕೆ ಹಾಕಿದ್ದಾರೆ. ‘ಸನಾತನ’ ಸಂಸ್ಕೃತಿಯನ್ನು ದುರ್ಬಲಗೊಳಿಸಲು ಚಲನ ಚಿತ್ರ ನಿರ್ಮಾಪಕರು ಮಾಡಿದ ಕೊಳಕು ಪ್ರಯತ್ನವೇ ಬೇಷರಂ ಸಿನಿಮಾ ಎಂದು ಬಚೌಲ್​ ವಾಗ್ದಾಳಿ ನಡೆಸಿದ್ದಾರೆ. ಕೇಸರಿ ಬಣ್ಣವು ಸನಾತನ ಸಂಸ್ಕೃತಿಯ ಸಂಕೇತವಾಗಿದೆ ಎಂದು ಬಿಜೆಪಿ ಶಾಸಕ ಬಚೌಲ್​ ಆಕ್ರೋಶ ಹೊರ ಹಾಕಿದ್ದಾರೆ.

ಬಿಹಾರದ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಬಿಡೋದಿಲ್ಲ ಎಂದು ಬಚೌಲ್​ ಬೆದರಿಕೆ ಹಾಕಿದ್ದಾರೆ. ಪಠಾಣ್​ ಸಿನಿಮಾ ಒಂದು ವೇಳೆ ಬಿಹಾರದಲ್ಲಿ ರಿಲೀಸ್​ ಆದರೆ ಎಲ್ಲಾ ಚಿತ್ರ ಮಂದಿರಗಳಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಬೇಷರಂ ರಂಗ್​​ ಹಾಡಿಗೆ ಮೊದಲು ಆಕ್ಷೇಪ ಎತ್ತಿದ್ದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ. ಈ ಹಾಡೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಮಿಶ್ರಾ ಅಸಮಾಧಾನ ಹೊರ ಹಾಕಿದ್ದರು. ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಕೇಸರಿ ಬಣ್ಣದ ಬಿಕನಿ ಧರಿಸಿರೋದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ.

ಈ ವಿಚಾರವಾಗಿ ಮಾತನಾಡಿದ ಬಿಹಾರ ಬಿಜೆಪಿ ನಾಯಕ ಮತ್ತು ಶಾಸಕ ಬಚೌಲ್​, ಸೂರ್ಯ ಕೇಸರಿ ಬಣ್ಣವನ್ನು ಹೊಂದಿದ್ದಾನೆ. ಬೆಂಕಿಯ ಬಣ್ಣವೂ ಕೇಸರಿಯೇ ಆಗಿದೆ. ಇದು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಚಿತ್ರದ ನಿರ್ಮಾಪಕರು ಕೇಸರಿಯನ್ನು ಬೇಷರಂ ಬಣ್ಣ ಎಂದು ತೋರಿಸಿದ್ದಾರೆ. ಇದು ನಿಜಕ್ಕೂ ಆಕ್ಷೇಪಾರ್ಹವಾಗಿದೆ. ನಾಯಕಿ ದೀಪಿಕಾ ಪಡುಕೋಣೆ ತುಂಡುಡುಗೆ ಧರಿಸುವ ಮೂಲಕ ಅಶ್ಲೀಲತೆ ಪ್ರದರ್ಶಿಸಿದ್ದಾರೆ. ಹೀಗಾಗಿ ಈ ಸಿನಿಮಾವನ್ನು ಬ್ಯಾನ್​ ಮಾಡಬೇಕೆಂದು ಆಗ್ರಹಿಸಿದ್ರು.

ಇದನ್ನೂ ಓದಿ : 10 Most-liked Instagram Posts : ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಪಡೆದ 10 ಆಲ್‌ ಟೈಮ್‌ ಪೋಸ್ಟ್‌ಗಳು

ಇದನ್ನು ಓದಿ : kichcha sudeep : ‘ದರ್ಶನ್​ಗೆ ಚಪ್ಪಲಿ ಎಸೆದಿದ್ದು ಮನಸ್ಸಿಗೆ ಘಾಸಿಯುಂಟುಮಾಡಿದೆ’ : ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸುದೀಪ್​

Besharam Rang Controversy: BJP leader threatens to stall release of Pathaan, says ‘filmmakers weakened Sanatan culture’

RELATED ARTICLES

Most Popular