BCCI big meeting tomorrow : ನಾಳೆ ಬಿಸಿಸಿಐ ಬಿಗ್ ಮೀಟಿಂಗ್, ಟಿ20 ತಂಡಕ್ಕೆ ಹೊಸ ಕ್ಯಾಪ್ಟನ್ ಕೋಚ್ ಬಗ್ಗೆ ನಾಳೆಯೇ ನಿರ್ಧಾರ

ಮುಂಬೈ: ಭಾರತ ಟಿ20 ತಂಡಕ್ಕೆ ಪ್ರತ್ಯೇಕ ನಾಯಕ ಹಾಗೂ ಪ್ರತ್ಯೇಕ ಕೋಚ್ ಬರುವ ದಿನ ಸನ್ನಿಹಿತವಾಗಿದೆ. ಬಿಸಿಸಿಐ (BCCI) ಮಹತ್ವದ ಸಭೆ ನಾಳೆ (BCCI big meeting tomorrow) (ಬುಧವಾರ) ನಡೆಯಲಿದ್ದು, ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ಮತ್ತು ಕೋಚ್ ಆಯ್ಕೆಯ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.

ಬರೋಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಭಾರತ ಟಿ20 ತಂಡದ (Indian Cricket Team) ನೂತನ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಹಾಗೂ ಅದಕ್ಕೂ ಮೊದಲು ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾದ ವೈಫಲ್ಯದ ನಂತರ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಟಿ20 ತಂಡಕ್ಕೆ ಪ್ರತ್ಯೇಕ ನಾಯಕ ಹಾಗೂ ತರಬೇತುದಾರನನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದ್ದು, ಹಾಲಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಏಕದಿನ ಹಾಗೂ ಟೆಸ್ಟ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿ ಗೆದ್ದಿತ್ತು. ಅದಕ್ಕೂ ಹಿಂದೆ ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್’ನಲ್ಲಿ ಭಾರತ ತಂಡ ಪಾಂಡ್ಯ ನಾಯಕತ್ವದಲ್ಲೇ ಟಿ20 ಸರಣಿಗಳನ್ನು ಕೈವಶ ಮಾಡಿಕೊಂಡಿತ್ತು. 2024ರ ಟಿ20 ವಿಶ್ವಕಪ್’ಗೆ ಈಗಿಂದ್ಲೇ ತಂಡ ಕಟ್ಟಲು ಮುಂದಾಗಿರುವ ಬಿಸಿಸಿಐ ನಾಯಕನ ಬದಲಾವಣೆಗೆ ಮುಂದಾಗಿದೆ.

ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಮುಂದಿನ ವರ್ಷ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್’ವರೆಗೆ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ನಂತರ ಟೆಸ್ಟ್, ಏಕದಿನ ತಂಡಕ್ಕೂ ಹೊಸ ನಾಯಕನ ನೇಮಕವಾಗಲಿದೆ.ಟಿ20 ವಿಶ್ವಕಪ್’ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್’ನಲ್ಲಿ 10 ವಿಕೆಟ್’ಗಳ ಹೀನಾಯ ಸೋಲು ಕಂಡ ನಂತರ ಸೀನಿಯರ್ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿತ್ತು. ಹೀಗಾಗಿ ಹೊಸ ಆಯ್ಕೆ ಸಮಿತಿಯ ನೇಮಕದ ಬಗ್ಗೆಯೂ ಬುಧವಾರ ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ನಿರ್ಧಾರವಾಗಲಿದೆ.

ಇದನ್ನೂ ಓದಿ : Overseas Players in IPL Auction 2023: ಸ್ಯಾಮ್ ಕರನ್ to ಸಿಕಂದರ್ ರಾಜಾ: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ವಿದೇಶಿ ಆಟಗಾರರ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Ranji Trophy Karnataka : ತವರು ನೆಲದಲ್ಲಿ ಕರ್ನಾಟಕಕ್ಕೆ ಮತ್ತೊಂದು ಚಾನ್ಸ್, ಗೆಲುವಿನ ಖಾತೆ ತೆರೆಯುತ್ತಾ ಮಯಾಂಕ್ ಬಳಗ ?

ಇದನ್ನೂ ಓದಿ : FIFA World Cup Final : ಸ್ಪೆಷಲ್ ಸ್ಕ್ರೀನ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು

ಟೀಮ್ ಇಂಡಿಯಾದ ಕೆಲ ಸಹಾಯಕ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆಯೂ ಬಿಸಿಸಿಐಗೆ ಅಸಮಾಧಾನವಿದೆ. ಮುಖ್ಯವಾಗಿ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಫಿಸಿಯೊ ಕಾರ್ಯವೈಖರಿ ಕುರಿತಾಗಿ ಬಿಸಿಸಿಐ ಅಸಮಾಧಾನಗೊಂಡಿದ್ದು, ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಬಿಸಿಸಿಐ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

BCCI big meeting tomorrow, decision on new captain coach for T20 team tomorrow itself

Comments are closed.