ಕನ್ನಡ ಕಿರುತೆರೆಯಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದ್ದ ಬಿಗ್ ಬಾಸ್ ಶೋ ಇದೀಗ ಪ್ರೇಕ್ಷಕರಿಗೆ ಮತ್ತೆ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಇಳಿಕೆಯ ಬೆನ್ನಲ್ಲೇ ಶೋಗೆ ಸಿದ್ದತೆ ಮಾಡಿಕೊಂಡಿರುವ ಕಲರ್ಸ್ ಕನ್ನಡ ವಾಹಿಸಿ ಸ್ಪರ್ಧಾಳುಗಳನ್ನು ಕ್ವಾರಂಟೈನ್ ಗೆ ಒಳಪಡಿಸಿದೆ.
ಬಿಗ್ ಬಾಸ್ 8ನೇ ಆವೃತ್ತಿ ಕೊರೊನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತವಾಗಿತ್ತು. ಕೊರೊನಾ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್ ಲಾಕ್ ಜಾರಿ ಮಾಡಲಾಗಿದ್ದು, ಜೂನ್ ಅಂತ್ಯದ ವೇಳೆಗೆ ಶೂಟಿಂಗ್ ನಡೆಸಲು ಅನುಮತಿ ಸಿಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಾಹಿನಿ ಸಿದ್ದತೆಗಳನ್ನು ಮಾಡಿಕೊಂಡಿದೆ. ಜೂನ್ 21ರ ಹೊತ್ತಿಗೆ ಬಿಗ್ ಬಾಸ್ ಶೋ ಆರಂಭವಾಗುವ ಸಾಧ್ಯತೆಯಿದೆ.
ಕಲರ್ಸ್ ವಾಹಿನಿ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಾಳುಗಳನ್ನು ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಿದೆ. 14 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಕ್ತಾಯವಾದ ಬೆನ್ನಲ್ಲೇ ಶೋ ಆರಂಭವಾಗುವ ಸಾಧ್ಯತೆಯಿದೆ. ಇನ್ನು ಕೊರೊನಾ ಮುನ್ನೆಚ್ಚರಿಕೆ ಹಾಗೂ ಸರಕಾರದ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಎಲ್ಲಾ ಸ್ಪರ್ಧಾಳುಗಳಿಗೂ ಎರಡು ಲಸಿಕೆಗಳನ್ನು ನೀಡಲಾಗಿದೆ.
ಕೊರೊನಾ ನಿಯಂತ್ರಣಕ್ಕೆ ಬಂದು, ಎಲ್ಲಾ ಅಂದುಕೊಂಡಂತೆ ಆದ್ರೆ ಜೂನ್ ಅಂತ್ಯಕ್ಕೆ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗೋದು ಖಚಿತ. ಕೊರೊನಾ ಮೂರನೇ ಅಲೆ ಬರೋ ಮೊದಲೇ ಶೋ ಮುಗಿಸಬೇಕು ಅನ್ನೋ ಲೆಕ್ಕಾಚಾರದಲ್ಲಿದೆ ಕಲರ್ಸ್ ವಾಹಿನಿ.