ಶಿಲ್ಪಾ ಶೆಟ್ಟಿಯಿಂದಲೇ ನಮ್ಮ ದಾಂಪತ್ಯ ಹಾಳಾಯ್ತು…! ವಿವಾದಕ್ಕೆ ಸಿಲುಕಿದ ಕರಾವಳಿ ಬೆಡಗಿ ದಾಂಪತ್ಯ…!!

ತನ್ನ ಮಾದಕ ಸೌಂದರ್ಯದಿಂದಲೇ ಹೆಸರಾದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ತನ್ನ ಪತಿ,ಮನೆ,ಮಕ್ಕಳು ಅಂತ ಸುಖವಾಗಿದ್ದರು. ಆದರೆ ಈಗ ಅವರ ದಾಂಪತ್ಯದ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಶಿಲ್ಪಾರಿಂದಲೇ ನಮ್ಮ ದಾಂಪತ್ಯ ಹಾಳಾಯ್ತು ಅಂತ ರಾಜ್ ಕುಂದ್ರಾ ಮೊದಲ ಪತ್ನಿ ಆರೋಪಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿಯೇ ನಮ್ಮ ದಾಂಪತ್ಯ ಹಾಳಾಯ್ತು. ನಾವಿಬ್ಬರೂ ದೂರ ಆಗೋದಿಕ್ಕು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ರಾಜ್ ಕುಂದ್ರಾ ವಿಚ್ಛೇಧಿತ ಪತ್ನಿ ಕವಿತಾ ಮಾಧ್ಯಮ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.

ಉದ್ಯಮಿ ರಾಜ್ ಕುಂದ್ರಾ 2006 ರಲ್ಲಿ ಕವಿತಾಗೆ ಡಿವೋರ್ಸ್ ನೀಡಿ 2009 ರಲ್ಲಿ ಶಿಲ್ಪಾ ಶೆಟ್ಟಿಯನ್ನು ವರಿಸಿದ್ದರು. ಸದ್ಯ ರಾಜ್ ಕುಂದ್ರಾ ಹಾಗೂ ಶಿಲ್ಪಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಆದರೆ ರಾಜ್ ಕುಂದ್ರಾ ಮೊದಲ ಪತ್ನಿ  ಕವಿತಾ ಆರೋಪವನ್ನು ಸ್ವತಃ ರಾಜ್ ಕುಂದ್ರಾ ನಿರಾಕರಿಸಿದ್ದು, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ ಕುಂದ್ರಾ ಆಕೆ ಹಣಕ್ಕಾಗಿ ತನ್ನ ಆತ್ಮವನ್ನೇ ಮಾರಿಕೊಂಡವರು. ಇದನ್ನೆಲ್ಲ ಆಕೆ ಹಣಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳಿಗೆ ನೀಡಿದ ಈ ಸಂದರ್ಶನಕ್ಕಾಗಿಯೂ  ಕವಿತಾ ಸಾಕಷ್ಟು ಹಣ ಪಡೆದಿದ್ದಾರೆ. ಇದನ್ನು ಮಾಧ್ಯಮಗಳು ಬ್ಯಾಂಕ್ ಡಿಟೇಲ್ಸ್ ಜೊತೆ ವರದಿ ಮಾಡಿದ್ದಾರೆ ಎಂದು ರಾಜ್ ಕುಂದ್ರಾ ವಿವರಣೆ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ಮದುವೆಯಾಗುವುದಕ್ಕೂ ಮುನ್ನ ಕವಿತಾರನ್ನು ಮದುವೆಯಾದ ರಾಜ್ ಕುಂದ್ರಾ ಲಂಡನ್ ನಲ್ಲಿ ನೆಲೆಸಿದ್ದರು. ಆದರೆ ಕವಿತಾ ರಾಜ್ ಕುಂದ್ರಾ ಕುಟುಂಬಸ್ಥರ ಜೊತೆ ಸದಾ ಜಗಳವಾಡುತ್ತಿದ್ದು, ರಾಜ್ ಕುಂದ್ರಾ ತಂಗಿ ಪತಿಯ ಕವಿತಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಕುಂದ್ರಾ ಆರೋಪಿಸಿದ್ದಾರೆ.

ಆದರೆ ರಾಜ್ ಕುಂದ್ರಾ ಮೊದಲ ಪತ್ನಿ ಆರೋಪಗಳಿಗೆ ನಟಿ ಶಿಲ್ಪಾ ಶೆಟ್ಟಿ ಸ್ವತಃ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.