Ankita Lihande Pregnancy Test : ರಿಯಾಲಿಟಿ ಶೋಗಳ ಇತಿಹಾಸದಲ್ಲಿಯೇ ಅತೀ ದೊಡ್ಡ ರಿಯಾಲಿಟಿ ಶೋ (Biggboss Reality Show) ಅಂದ್ರೆ ಅದು ಬಿಗ್ಬಾಸ್ . ಇದೇ ಕಾರಣಕ್ಕೆ ಬಿಗ್ಬಾಸ್ ಶೋವನ್ನ ರಿಯಾಲಿಟಿ ಶೋಗಳ ದೊಡ್ಡಪ್ಪ ಅಂತಾ ಸಹ ಕರೆಯಲಾಗುತ್ತೆ. ಕನ್ನಡದಲ್ಲಿ ಈ ಕಾರ್ಯಕ್ರಮವನ್ನ ಸುದೀಪ್ ನಡೆಸಿಕೊಡ್ತಾರೆ. ಅದೇ ರೀತಿ ಬೇರೆ ಬೇರೆ ಭಾಷೆಗಳಲ್ಲಿ ಅಲ್ಲಿನ ಫೇಮಸ್ ನಟರು ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ. ಸದ್ಯ ನಾವೀಗ ಹೇಳೋಕೆ ಹೊರಟಿರೋದು ಹಿಂದಿ ಆವೃತ್ತಿಯ ಬಿಗ್ಬಾಸ್ ಕಾರ್ಯಕ್ರಮದ ಬಗ್ಗೆ. ಕನ್ನಡದಲ್ಲಿ ಬಿಗ್ಬಾಸ್ ಸೀಸನ್ 10 ನಡೀತಾ ಇದ್ರೆ ಹಿಂದಿಯಲ್ಲಿ ಸದ್ಯ ಬಿಗ್ಬಾಸ್ ಸೀಸನ್ 17 ನಡೆಯುತ್ತಿದೆ.
ಹಿಂದಿ ಆವೃತ್ತಿಯ ಬಿಗ್ಬಾಸ್ ಶೋನ ವಿಶೇಷತೆ ಏನಂದ್ರೆ ಇಲ್ಲಿ ದಂಪತಿ ಜೋಡಿಯಾಗಿ ಸೀಸನ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ದಂಪತಿಯ ಪೈಕಿ ಖ್ಯಾತ ನಟಿ ಅಂಕಿತಾ ಲೋಖಂಡೆ (Ankita Lihande) ಹಾಗೂ ವಿಕ್ಕಿ ಕೂಡ ಒಬ್ಬರು. ಬಿಗ್ಬಾಸ್ನ ಎಪಿಸೋಡ್ನಲ್ಲಿ ವಿಕ್ಕಿ ತನ್ನ ಪತ್ನಿ ಅಂಕಿತಾ ಲೋಖಂಡೆಯನ್ನು ನಡೆಸಿಕೊಳ್ತಿರುವ ರೀತಿ ಪ್ರೇಕ್ಷಕರ ಅಸಮಾಧಾನಕ್ಕೆ ಕೂಡ ಕಾರಣವಾಗಿದೆ.

ಇಬ್ಬರೂ ಪದೇ ಪದೇ ಕಿತ್ತಾಡಿಕೊಳ್ಳುವುದನ್ನ ನೋಡಿ ನೋಡಿ ಪ್ರೇಕ್ಷಕರಿಗೆ ಸುಸ್ತಾಗಿದೆ. ಅಂಕಿತಾ ಅನೇಕ ಬಾರಿ ನನಗೆ ಇಲ್ಲಿ ಒಂಟಿತನ ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಮಂಗಳವಾರದಂದು ತಾನು ಪ್ರೆಗ್ನೆನ್ಸಿ ಟೆಸ್ಟ್ಗೆ ಒಳಗಾಗಿದ್ದೇನೆ ಎಂಬ ವಿಚಾರವನ್ನು ಅಂಕಿತಾ ಬಾಯ್ಬಿಟ್ಟಿದ್ದಾರೆ. ನನ್ನ ಪೀರಿಯಡ್ಸ್ ಮಿಸ್ ಆಗಿದ್ದು ಗರ್ಭಧಾರಣೆ ರಿಪೋರ್ಟ್ನ ಫಲಿತಾಂಶಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ
ಬಿಗ್ಬಾಸ್ ಸೀಸನ್ 17ನ ಹಿಂದಿನ ಎಪಿಸೋಡ್ನಲ್ಲಿ ವಿಕ್ಕಿ ಹಾಗೂ ಅಂಕಿತಾ ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿರುತ್ತಾರೆ. ವಿಕ್ಕಿ ಹಾಗೂ ಅಂಕಿತಾ ನಡುವೆ ಜಗಳ ಕೂಡ ಆಗುತ್ತೆ. ಈ ವೇಳೆ ಅಂಕಿತಾ ನಿನ್ನ ಗಮನ ಸೆಳೆಯೋಕೆ ನಾನು ನಿನ್ನೊಡನೆ ಜಗಳ ಮಾಡುತ್ತೇನೆ ಎಂದು ಪತಿಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಿಕ್ಕಿ ನನಗೆ ನಿನ್ನ ನಡವಳಿಕೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ ಅಂತಾ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಂಕಿತಾ, ನಾನು ಸೋತು ಹೋಗಿದ್ದೇನೆ. ಮಾನಸಿಕವಾಗಿ ನಾನು ದುರ್ಬಲಳಾಗಿದ್ದೇನೆ. ನನಗೆ ನಾನು ಆನಾರೋಗ್ಯಕ್ಕೆ ಒಳಗಾಗಿದ್ದೇನೆ ಎಂದೆನಿಸುತ್ತಿದೆ. ನನಗೆ ಪೀರಿಯಡ್ಸ್ ಕೂಡ ಆಗುತ್ತಿಲ್ಲ ನನಗೆ ಮನೆಗೆ ಹೋಗಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ವಿಕ್ಕಿ ನಾನು ನಿನ್ನೆ ನೀನು ಋತುಮತಿಯಾಗಿದ್ದೀಯಾ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.

ಆಗ ಅಂಕಿತಾ ನಾನು ನಿನ್ನೆ ಬಿಗ್ಬಾಸ್ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ನಿನ್ನೆ ಹಾಗೂ ಇಂದು ನನಗೆ ಟೆಸ್ಟ್ ನಡೆದಿದೆ. ವೈದ್ಯರು ನನ್ನ ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಿದ್ದಾರೆ. ನನ್ನಲ್ಲಿ ಭಾವನೆಗಳ ಏರಿಳಿತವಾಗುತ್ತಿದೆ. ನಾನು ಏನೋ ಕಷ್ಟದಲ್ಲಿದ್ದೇನೆ ಅದನ್ನ ವಿವರಿಸೋಕೆ ನನಗೆ ಆಗುತ್ತಿಲ್ಲ. ನಾನೇ ಗೊಂದಲದಲ್ಲಿದ್ದೇನೆ , ಇದಕ್ಕೆ ನಾನು ನಿನ್ನನ್ನು ದೋಷಿ ಮಾಡಲಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಿಜಯ್ ದೇವರಕೊಂಡ ನಿವಾಸದಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ..!? : ಹೌದು ಎನ್ನುತ್ತಿದೆ ಈ ಫೋಟೋಸ್
ಅಂದಹಾಗೆ ಅಂಕಿತಾ ಲೋಖಂಡೆ ಬಾಲಿವುಡ್ ಅಂಗಳಕ್ಕೆ ಕಾಲಿಡುವ ಮುನ್ನ ಹಿಂದಿ ಕಿರುತೆರೆ ವಾಹಿನಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ನಟಿ. ಏಕ್ತಾ ಕಪೂರ್ ನಿರ್ದೇಶನದ ಪವಿತ್ರ ರಿಶ್ತಾ ಧಾರವಾಹಿಯಲ್ಲಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಜೋಡಿಯಾಗಿ ನಟಿಸುತ್ತಿದ್ದರು. ಅಂಕಿತಾ ಲೋಖಂಡೆ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅನೇಕ ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದರು.

ಆದರೆ ಬಾಲಿವುಡ್ನಲ್ಲಿ ಸ್ವಲ್ಪ ಹೆಸರು ಮಾಡ್ತಿದ್ದಂತೆಯೇ ಸುಶಾಂತ್ ಸಿಂಗ್ ಅಂಕಿತಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಅಂಕಿತಾ ಮಾತನಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದ ಸಂದರ್ಭದಲ್ಲಿಯೂ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವಂಥ ವ್ಯಕ್ತಿಯಲ್ಲ. ಇದು ಅಸಹಜ ಸಾವು ಅಂತಾ ಸಾಕಷ್ಟು ಹೋರಾಟ ಮಾಡಿದ್ದರು.
ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಬ್ರೇಕಪ್ ಆದ ಬಳಿಕ ವಿಕ್ಕಿ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಆದರೆ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಅಂಕಿತಾ ಜೊತೆ ವಿಕ್ಕಿ ವರ್ತಿಸುತ್ತಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಸುಶಾಂತ್ ಹಾಗೂ ಅಂಕಿತಾ ಮದುವೆಯಾಗಿದ್ದರೆ ಎಷ್ಟು ಚೆನ್ನಾಗಿ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ದಾರೆ.
Bigg boss 17 ankita Lihande Takes Pregnancy Test in side Reality Show house