ವಿಜಯ್ ದೇವರಕೊಂಡ ನಿವಾಸದಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ..!? : ಹೌದು ಎನ್ನುತ್ತಿದೆ ಈ ಫೋಟೋಸ್
ಕಿರಿಕ್ ಬೆಡಗಿ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ಪರಸ್ಪರ ಡೇಟಿಂಗ್ನಲ್ಲಿದ್ದಾರೆ ಮಾತ್ರವಲ್ಲದೇ ಶೀಘ್ರದಲ್ಲಿಯೇ ಈ ಜೋಡಿ ವೈವಾಹಿಕ ಬಂಧನಕ್ಕೆ ಕೂಡ ಕಾಲಿಡಲಿದೆ
ಕಿರಿಕ್ ಬೆಡಗಿ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ಪರಸ್ಪರ ಡೇಟಿಂಗ್ನಲ್ಲಿದ್ದಾರೆ ಮಾತ್ರವಲ್ಲದೇ ಶೀಘ್ರದಲ್ಲಿಯೇ ಈ ಜೋಡಿ ವೈವಾಹಿಕ ಬಂಧನಕ್ಕೆ ಕೂಡ ಕಾಲಿಡಲಿದೆ ಎಂಬ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತೆ. ಈ ಮಾತಿಗೆ ಪುಷ್ಠಿ ಎಂಬಂತೆ ಈ ಜೋಡಿ ನಡೆದುಕೊಳ್ಳುತ್ತೆ ಕೂಡ.
ಕೆಲವು ದಿನಗಳ ಹಿಂದೆಯಷ್ಟೇ ಈ ಜೋಡಿ ಒಟ್ಟಿಗೆ ಮಾಲ್ಡೀವ್ಸ್ಗೆ ವೆಕೇಷನ್ಗೆ ತೆರಳಿದ್ದ ಬಗ್ಗೆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಇದೀಗ ನಟ ವಿಜಯ್ ದೇವರಕೊಂಡ ನಿವಾಸದಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ ಅಂತಾ ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಮನೆಗೆ ಬಂದ್ರು ವರ್ತೂರು ಸಂತೋಷ್ ತಾಯಿ : ಇನ್ನಾದ್ರೂ ಹಳ್ಳಿಕಾರ್ ಒಡೆಯನ ನಿರ್ಧಾರ ಬದಲಾಗುತ್ತಾ?
ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದ್ದು ಫೋಟೋದ ಬ್ಯಾಕ್ಗ್ರೌಂಡ್ಗಳನ್ನ ನೋಡ್ತಾ ಇದ್ರೆ ಅಭಿಮಾನಿಗಳ ಮಾತು ನಿಜ ಎನಿಸ್ತಿದೆ. ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಇಬ್ಬರೂ ದೀಪಾವಳಿ ಹಬ್ಬದ ಸೆಲೆಬ್ರೇಷನ್ ಮಾಡಿರುವ ಫೋಟೋವನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಪಿಸ್ತಾ ಬಣ್ಣದ ಸೀರೆಯನ್ನು ಉಟ್ಟು ಫೋಟೋಗೆ ಪೋಸ್ ಕೊಟ್ಟದ್ರೆ ನಟ ವಿಜಯ್ ದೇವರಕೊಂಡ ಹಳದಿ ಬಣ್ಣದ ಕುರ್ತಾದಲ್ಲಿ ಮಿಂಚಿದ್ದಾರೆ, ಅಲ್ಲದೇ ನಟ ವಿಜಯ್ ದೇವರಕೊಂಡ ಜೊತೆಯಲ್ಲಿ ಅವರ ಫ್ಯಾಮಿಲಿ ಮೆಂಬರ್ಸ್ ಕೂಡ ಫೋಟೋಗೆ ಪೋಸ್ ನೀಡಿದ್ದಾರೆ.
ಆದರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಫೋಟೋಗಳ ಬ್ಯಾಕ್ಗ್ರೌಂಡ್ಗಳಲ್ಲಿ ಸಾಕಷ್ಟು ಸಾಮ್ಯತೆ ಇರೋದನ್ನ ಕಾಣಬಹುದಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಇರುವ ಗೋಡೆಯ ಬಣ್ಣ ಹಾಗೂ ಮನೆಯ ಇಂಟಿರಿಯರ್ ಡಿಸೈನ್ ಒಂದೇ ರೀತಿ ಇದೆ.
ಇದನ್ನೂ ಓದಿ : New Pet Alert : ದರ್ಶನ್ ತೂಗುದೀಪ್ ಪತ್ನಿ ವಿಜಯಲಕ್ಷ್ಮೀ ಟಾಂಗ್ ಕೊಟ್ಟಿದ್ದ್ಯಾರಿಗೆ ಗೊತ್ತಾ ?
ಅಲ್ಲದೇ ರಶ್ಮಿಕಾ ಮಂದಣ್ಣ ತಮ್ಮ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದಂತೆ ಕಾಣುತ್ತಿಲ್ಲ. ಸಿಂಗಲ್ ಆಗಿಯೇ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ವಿಜಯ್ ದೇವರಕೊಂಡ ಮಾತ್ರ ತಮ್ಮ ಕುಟುಂಬಸ್ಥರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಪಕ್ಕಾ ಈ ಲವ್ಬರ್ಡ್ಸ್ ಒಂದೇ ಕಡೆ ದೀಪಾವಳಿ ಹಬ್ಬ ಆಚರಿಸಿದೆ ಎಂದು ಅಭಿಪ್ರಾಯ ಹೊರ ಹಾಕ್ತಿದ್ದಾರೆ.
ಲೈಗರ್ ಸಿನಿಮಾ ಸೋಲಿನ ಬಳಿಕ ವಿಜಯ್ ದೇವರಕೊಂಡ ಶಿವ ನಿರ್ವಾಣರ ಖುಷಿ ಸಿನಿಮಾ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ತಂದುಕೊಟ್ಟಂತೆ ಕಾಣುತ್ತಿದೆ. ಸಮಂತಾ ರುತ್ಪ್ರಭುಗೆ ಜೋಡಿಯಾಗಿ ನಟಿಸಿದ್ದ ವಿಜಯ್ ದೇವರಕೊಂಡ ಈ ಸಿನಿಮಾದ ಬಳಿಕ ಮತ್ತೆ ಫಾರ್ಮ್ಗೆ ಬರುವ ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್ ಅಂದ್ರು ವಿನಯ್ ಪತ್ನಿ ಅಕ್ಷತಾ..?
ಅಂದಹಾಗೆ ಈ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ ಒಂದರಂದು ತೆರೆ ಕಂಡಿತ್ತು. ಸದ್ಯ ವಿಜಯ್ ದೇವರಕೊಂಡ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ.
Rashmika mandanna celebrates diwali with vijay deverakonda
Comments are closed.