ಕನ್ನಡ ಕಿರುತೆರೆಯ ಅತೀದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್ (BiggBoss Kannada season 10) . ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colours Kannada) ಬಿಗ್ಬಾಸ್ ಸೀಸನ್ 10 ನಡೀತಾ ಇದ್ದು ವಿನಯ್ (Vinay) ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ. ಕಳೆದ ವಾರ ಸುದೀಪ್ ವಿನಯ್ರನ್ನು ಆನೆಗೆ ಹೋಲಿಕೆ ಮಾಡಿದ ಬಳಿಕ ವಿನಯ್ ಅಬ್ಬರ ಜೋರಾಗಿದೆ.

ಈ ವಾರ ಹಳ್ಳಿ ಸೊಗಡಿನ ಗೇಮ್ ನ್ನು ಬಿಗ್ಬಾಸ್ ಸ್ಪರ್ಧಿಗಳು ಆಡಿದ್ದು ಇದರಲ್ಲಿ ವಿನಯ್ & ಟೀಂ ಜಯಭೇರಿ ಬಾರಿಸಿದೆ. ಅಷ್ಟೇ ಅಲ್ಲದೇ ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆ ಕೂಡ ಆಗಿದ್ದಾರೆ. ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಿದ್ದಂತೆಯೇ ಆನೆ ಬಂತೊಂದಾನೆ ಅಂತಾ ಸಂಗೀತಾಗೆ ಟಾಂಗ್ ನೀಡಿದ್ದು ಈ ಪ್ರೊಮೋ ಇದೀಗ ಸಖತ್ ವೈರಲ್ ಕೂಡ ಆಗಿದೆ.
ಇದನ್ನೂ ಓದಿ : ‘ಬಿಗ್ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು’ : ಹೀಗ್ಯಾಕ್ ಅಂದ್ರು ವಿನಯ್ ಪತ್ನಿ ಅಕ್ಷತಾ..?
ವಿನಯ್ ಕ್ಯಾಪ್ಟನ್ ಆಗ್ತಿದ್ದಂತೆಯೇ ಬಿಗ್ಬಾಸ್ ಸ್ಪರ್ಧಿ, ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ನನ್ನ ಕೆಟ್ಟದಿನಗಳು ಅರಂಭವ ಅದಂತಿದೆ ಅಂತ ಕೂಡ ಹೇಳಿದ್ದಾರೆ. ಆದರೆ ಬಿಗ್ಬಾಸ್ನಲ್ಲಿ ವಿನಯ್ ಮಹಿಳಾ ಸ್ಪರ್ಧಿಗಳನ್ನು ಏಕವಚನದಲ್ಲಿ ಮಾತನಾಡಿಸುವ ರೀತಿ ಹಾಗೂ ಕಾಲು ಕೆರೆದುಕೊಂಡು ಜಗಳ ಮಾಡುವ ಪರಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ.

ವಿನಯ್ನಂತಹ ಅಂಹಕಾರಿ ಸ್ಪರ್ಧಿ ಬಿಗ್ಬಾಸ್ ಇತಿಹಾಸದಲ್ಲಿಯೇ ಇರಲಿಲ್ಲ ಅಂತಾ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಇನ್ನು ಈ ಎಲ್ಲದರ ನಡುವೆ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ ಪತ್ನಿ ಅಕ್ಷತಾ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಪತಿಯ ಹೆಸರು ಹಾಳಾಗುತ್ತಿದೆ ಎಂದು ಗೋಗರೆದಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ
ನನ್ನ ಪತಿ ತುಂಬಾ ಒಳ್ಳೆಯ ಮನುಷ್ಯ. ಸಮಾಜದಲ್ಲಿ ಇಂದು ಅವರ ಹೆಸರು ಹಾಳಾಗಿದೆ ಅಂದ್ರೆ ಅದಕ್ಕೆ ಬಿಗ್ಬಾಸ್ ಕಾರಣ ಅಂತಾ ಭಾವುಕರಾಗಿದ್ದಾರೆ. ಬೇಕು ಬೇಕಂತಲೇ ಪ್ರೋಮೋಗಳಲ್ಲಿ ನನ್ನ ಪತಿಯನ್ನು ವಿಲನ್ರಂತೆ ತೋರಿಸುತ್ತಿದ್ದಾರೆ. ಅವರು ಮಾಡುವ ಒಳ್ಳೆಯ ಕೆಲಸಗಳು ಮೇನ್ ಎಪಿಸೋಡ್ನಲ್ಲಿ ಇರೋದೇ ಇಲ್ಲ.

ನನ್ನ ಪತಿ ಇಮೇಜ್ ಯಾಕೆ ಹಾಳು ಮಾಡುತ್ತಿದ್ದೀರಿ ಎಂದು ಪ್ರಶ್ನಿಸೋಣ ಅಂತಾ ಬಿಗ್ಬಾಸ್ ಟೀಂಗೆ ಕರೆ ಮಾಡಿದ್ರೆ ಅವರು ಕಾಲ್ ರಿಸೀವ್ ಮಾಡುತ್ತಿಲ್ಲ. ನನ್ನ ಮಗನಿಗೆ ಶಾಲೆಯಲ್ಲಿ ನಿನ್ನ ಅಪ್ಪ ಕೆಟ್ಟವರು ಅಂತಾ ಹೇಳುತ್ತಿದ್ದಾರಂತೆ. ನನಗೆ ಅಂತಹ ಗಂಡನ ಜೊತೆ ಹೇಗೆ ಸಂಸಾರ ಮಾಡುತ್ತೀಯಾ ಎಂದು ಕೇಳ್ತಿದ್ದಾರೆ.
ಇದನ್ನೂ ಓದಿ : ರಂಗಿತರಂಗ ಹೀರೋ ಗ್ರ್ಯಾಂಡ್ ರ್ರೀ ಎಂಟ್ರಿ: ದೂದ್ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ
ನಮ್ಮನ್ನು ನಂಬಿ ನನ್ನ ಪತಿ ಅಂತವರಲ್ಲ ಎಂದು ಹೇಳಿದ್ದಾರೆ. ಇನ್ನು ಅಕ್ಷತಾ ಕಣ್ಣೀರು ಹಾಕಿದ ವಿಡಿಯೋಗಳ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಬಿಗ್ಬಾಸ್ ಮನೆ ಒಳಗೆ ನಿನ್ನ ಗಂಡ ಮಹಿಳಾ ಸ್ಪರ್ಧಿಗಳಿಗೆ ಕಣ್ಣೀರು ಹಾಕಿಸುತ್ತಿದ್ದಾನೆ. ಹೊರಗೆ ನೀನು ಕಣ್ಣೀರು ಹಾಕುತ್ತಿದ್ದೀಯಾ. ಕರ್ಮ ಎಂದರೆ ಇದೇ ಎಂದು ಹೇಳ್ತಿದ್ದಾರೆ .
Bigg Boss cheated on my husband says Bigg Boss Kannada Contest Vinay wife Akshatha