Horoscope Today : ದಿನಭವಿಷ್ಯ 04 ನವೆಂಬರ್ 2023 – ಯಾವ ರಾಶಿಯವರಿಗೆ ಇದೆ ಶನಿದೇವನ ಕೃಪೆ

Horoscope Today : ದಿನಭವಿಷ್ಯ 04 ನವೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುನರ್ವಸು ಮತ್ತು ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಸಂದರ್ಭದಲ್ಲಿ ಕೆಲವು ಶುಭ ಯೋಗಗಳು ಉಂಟಾಗುತ್ತದೆ.

Horoscope Today : ದಿನಭವಿಷ್ಯ 04 ನವೆಂಬರ್ 2023 ಶನಿವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುನರ್ವಸು ಮತ್ತು ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಸಂದರ್ಭದಲ್ಲಿ ಕೆಲವು ಶುಭ ಯೋಗಗಳು ಉಂಟಾಗುತ್ತದೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಮಕ್ಕಳ ಶಿಕ್ಷಣ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತರರಿಗಾಗಿ ನೀವಿಂದು ಕೆಲವೊಂದು ಕೆಲಸಗಳನ್ನು ಮಾಡಲೇ ಬೇಕಾಗುತ್ತದೆ. ಬುದ್ದಿವಂತಿಯಿಂದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಮನಸ್ಸು ಹಗುರಾಗಿಸಲು ತಂದೆಯೊಂದಿಗೆ ಚರ್ಚಿಸಿ.

ವೃಷಭ ರಾಶಿ ದಿನಭವಿಷ್ಯ
ಉದ್ಯೋಗಿಗಳು ಕಚೇರಿಯಲ್ಲಿ ಮೇಲಾಧಿಕಾರಿಗಳ ಸಲಹೆಯನ್ನು ಪಡೆಯಬೇಕು. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ. ಕುಟುಂಬದಲ್ಲಿ ನೆಮ್ಮದಿ ಕಂಡು ಬರಲಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಅನುಕೂಲ. ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ.

ಮಿಥುನ ರಾಶಿ ದಿನಭವಿಷ್ಯ
ಇಂದು ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲಕರ. ಸಹೋದರನ ಜೊತೆಗಿನ ಯಾವುದೇ ವಿವಾದಗಳು ಕೊನೆಗಳ್ಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ. ದೂರದ ಬಂಧುಗಳ ಆಗಮನ ಆಗಲಿದೆ.

ಇದನ್ನೂ ಓದಿ : ಇಂಜಕ್ಷನ್ ಚುಚ್ಚಿಕೊಳ್ಳೋ ಕಷ್ಟವಿಲ್ಲ : ಬರಲಿದೆ ಮಧುಮೇಹ ಕ್ಕೆ ಇನ್ಸುಲಿನ್ ಸ್ಪ್ರೇ

ಕರ್ಕಾಟಕ ರಾಶಿ ದಿನಭವಿಷ್ಯ
ಈ ರಾಶಿಯವರು ಇಂದು ನಕಾರಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ವೈದ್ಯಕೀಯ ಸಲಹೆಯನ್ನು ಪಡೆಯಿರಿ.

ಸಿಂಹ ರಾಶಿ ದಿನಭವಿಷ್ಯ
ಉತ್ತಮ ಯಶಸ್ಸು ಪಡೆಯಲಿದ್ದಾರೆ. ಸಂಗಾತಿಯ ಜೊತೆಗೆ ವ್ಯವಹಾರವನ್ನು ಆರಂಭಿಸುವಿರಿ. ಇದು ನಿಮಗೆ ಅಪಾರವಾದ ಪ್ರಐೋಜನವನ್ನು ತರಲಿದೆ. ಕುಟುಂಬ ಸದಸ್ಯರು ನಿಮಗೆ ಅಚ್ಚರಿಯನ್ನು ನೀಡಲಿದ್ದಾರೆ. ಸಂಗಾತಿಯ ಆರೋಗ್ಯದಲ್ಲಿ ಬದಲಾವಣೆ ಆಗಲಿದೆ.

Horoscope Today 04 November 2023 Zordic Sign 
Image Credit to Original Source

ಕನ್ಯಾ ರಾಶಿ ದಿನಭವಿಷ್ಯ
ವ್ಯಾಪಾರಿಗಳು ಅಂದುಕೊಂಡಷ್ಟು ಲಾಭ ಸಿಗದೇ ಇರಬಹುದು. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಇದರಿಂದ ನೀವು ಸ್ವಲ್ಪ ಚಿಂತೆಗೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮನ್ನು ನೀವು ನಿಯಂತ್ರಿಸಿಕೊಂಡ್ರೆ ಮಾತ್ರವೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಹಣಕಾಸನ್ನು ಉಳಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ.

ತುಲಾ ರಾಶಿ ದಿನಭವಿಷ್ಯ
ಸಂಬಂಧಿಕರ ಸಹಾಯದಿಂದ ಒಪ್ಪಂದಗಳಿಗೆ ಸಹಿ ಹಾಕಲಿದ್ದೀರಿ. ಅದು ನಿಮಗೆ ಲಾಭದಾಯಕವಾಗಲಿದೆ. ತಾಯಿಯೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಬಿರುಕು ಮೂಡಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ವೃಶ್ಚಿಕ ರಾಶಿ ದಿನಭವಿಷ್ಯ
ಯಾವುದೇ ಕೆಲಸವನ್ನು ಇಂದು ಅರ್ಧದಲ್ಲಿಯೇ ನಿಲ್ಲಿಸಬೇಡಿ. ಇತರರ ಮಾತನ್ನು ಯಾವುದೇ ಕಾರಣಕ್ಕೂ ಕಿವಿಗೆ ಹಾಕಿಕೊಳ್ಳಬೇಡಿ. ಕುಟುಂಬ ಜೀವನದಲ್ಲಿ ನೆಮ್ಮದಿ ದೊರೆಯಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆಂಬಲ ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯದಲ್ಲಿ ಭಾಗಿಯಾಗುವಿರಿ.

ಧನಸ್ಸುರಾಶಿ ದಿನಭವಿಷ್ಯ
ಮನಸ್ಸಿನಲ್ಲಿ ಚಂಚಲತೆ ನಿಮ್ಮನ್ನು ಕಾಡಲಿದೆ. ಮಾಡುವ ಕೆಲಸಗಳಲ್ಲಿ ತಪ್ಪಾಗಬಹುದು. ಇದರಿಂದ ನಿಮಗೆ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಯಿದೆ. ಯಾವುದೇ ಅವಕಾಶಗಳನ್ನೂ ನೀವು ಕಳೆದುಕೊಳ್ಳಬೇಡಿ. ವ್ಯಾಪಾರಿಗಳಿಗೆ ಲಾಭದಾಯಕವಾಗಲಿದೆ. ಮನಸಿಗೆ ನೆಮ್ಮದಿ ದೊರೆಯಲಿದೆ.

ಮಕರ ರಾಶಿ ದಿನಭವಿಷ್ಯ
ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ಸಂಜೆ ನಿಮ್ಮ ಮನೆಗೆ ಅತಿಥಿಗಳ ಆಗಮನವಾಗಲಿದೆ. ಇದರಿಂದ ಖರ್ಚು ವೆಚ್ಚಗಳು ಅಧಿಕವಾಗುವ ಸಾಧ್ಯತೆಯಿದೆ. ಮಕ್ಕಳ ಪ್ರಗತಿಯನ್ನು ಕಂಡು ಸಂತೋಷ ಪಡುವಿರಿ. ಹೊಂದಾಣಿಕೆ ಯಿಂದ ಕಾರ್ಯಾನುಕೂಲವಾಗಲಿದೆ.

ಇದನ್ನೂ ಓದಿ : ಬಿಗ್​​​ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್​ ಅಂದ್ರು ವಿನಯ್​ ಪತ್ನಿ ಅಕ್ಷತಾ..?

ಕುಂಭ ರಾಶಿ ದಿನಭವಿಷ್ಯ
ಶುಭ ಸುದ್ದಿಯೊಂದನ್ನು ಕೇಳುವಿರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನೆರವೇರಲಿದೆ. ಮನೆಯ ವಿಚಾರದಲ್ಲಿ ಯಾವುದೇ ಆತುರತೆ ಬೇಡ. ತಂದೆಯ ಸಲಹೆಯನ್ನು ಪಾಲಿಸುವುದರಿಂದ ನಿಮಗೆ ಲಾಭದಾಯಕವಾಗಲಿದೆ. ಮಕ್ಕಳ ಮದುವೆಯ ಬಗ್ಗೆ ಚಿಂತೆ ಮಾಡುವಿರಿ.

ಮೀನ ರಾಶಿ ದಿನಭವಿಷ್ಯ
ಶ್ರದ್ದೆಯಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ದೀರ್ಘಕಾಲದಿಂದ ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ವ್ಯಪಾರಿಗಳು ವ್ಯವಹಾರದಲ್ಲಿ ಯಶಸ್ಸು ಪಡೆಯಲಿದ್ದಾರೆ. ಉದ್ಯೋಗಕ್ಕಾಗಿ ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಯಿದೆ. ದೂರದ ಬಂಧುಗಳ ಆಗಮನ ಮನಸಿಗೆ ಸಂತಸವನ್ನು ತರಲಿದೆ.

Horoscope Today 04 November 2023 Zordic Sign 

Comments are closed.