Rohit Sharma – Virat Kohli : ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್‌ !

ವಿಶ್ವಕಪ್‌ ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಈ ಬಾರಿ ಎರಡನೇ ಸ್ಥಾನದಲ್ಲಿದ್ದಾರೆ. ಎರಡು ಶತಕ ಬಾರಿಸಿದ್ರೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ರೋಹಿತ್‌ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಲೀಗ್‌ ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಜಯಿಸಿ ಈಗಾಗಲೇ ಭಾರತ ಸೆಮಿಫೈನಲ್‌ ಗೆ ಎಂಟ್ರಿ ಪಡೆದಿದೆ. ಈ ನಡುವಲ್ಲೇ ಭಾರತೀಯರ ಪಾಲಿಗೆ ಬ್ಯಾಡ್‌ನ್ಯೂಸ್‌ ವೊಂದು ಹೊರಬಿದ್ದಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡಗಳಲ್ಲೊಂದು. ವಿಶ್ವಕಪ್‌ನಲ್ಲಿ ಸೋಲನ್ನೇ ಕಾಣದೇ ಸತತ ಗೆಲುವಿನ ಅಲೆಯಲ್ಲಿ ಭಾರತ ಕ್ರಿಕೆಟ್‌ ತಂಡ ತೇಲಾಡುತ್ತಿದೆ. ಬ್ಯಾಟಿಂಗ್‌, ಬೌಲರ್‌ಗಳು ಎದುರಾಳಿಗಳ ವಿರುದ್ದ ಆರ್ಭಟಿಸುತ್ತಿದ್ದಾರೆ.

Cricket News This is the last World Cup for Rohit Sharma and Virat Kohli
Image Credit to Original Source

ಆದರೆ ಅದ್ಬುತ ಫಾರ್ಮ್‌ನಲ್ಲಿರುವ ನಾಯಕ ರೋಹಿತ್‌ ಶರ್ಮಾ (Rohit Sharma) ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರಿಗೆ ಇದು ಕೊನೆಯ ವಿಶ್ವಕಪ್‌ ಆಗುವ ಸಾಧ್ಯತೆಯಿದೆ. ಕಳೆದ ಎರಡು ವಿಶ್ವಕಪ್‌ನಲ್ಲಿಯೂ ತಂಡದ ಭಾಗವಾಗಿದ್ದ ವಿರಾಟ್‌ ಕೊಹ್ಲಿ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಕಮಾಲ್‌ ಮಾಡಿದ್ದಾರೆ. ಕ್ರಿಕೆಟ್‌ ದಿಗ್ಗಜ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹಲವು ದಾಖಲೆಗಳನ್ನೇ ಅಳಿಸಿ ಹಾಕಿದ್ದಾರೆ.

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ವಿಶ್ವಕಪ್‌ 2023 ರಲ್ಲಿ ಒಟ್ಟು ವಿರಾಟ್‌ ಕೊಹ್ಲಿ 7 ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 442 ರನ್‌ ಬಾರಿಸಿದ್ದಾರೆ. ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಬಾರಿಸಿದ್ದಾರೆ. ವಿಶ್ವಕಪ್‌ ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಈ ಬಾರಿ ಎರಡನೇ ಸ್ಥಾನದಲ್ಲಿದ್ದಾರೆ. ಎರಡು ಶತಕ ಬಾರಿಸಿದ್ರೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ವಿಶ್ವಕಪ್‌ ಮೊದಲ ಹಾಗೂ ಶ್ರೀಲಂಕಾ ವಿರುದ್ದ ಪಂದ್ಯವನ್ನು ಹೊರತು ಪಡಿಸಿದ್ರೆ ಉಳಿದ ಪಂದ್ಯಗಳಲ್ಲಿ ಅದ್ಬುತ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅವರು ಒಟ್ಟು 7 ಪಂದ್ಯಗಳನ್ನು ಆಡಿದ್ದು, ಈ ಪೈಕಿ 402 ರನ್‌ ಬಾರಿಸಿದ್ದಾರೆ. ಇಂಗ್ಲೆಂಡ್‌ ತಂಡದ ವಿರುದ್ದ ಭರ್ಜರಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ 2023 : ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಯಾರಾಗ್ತಾರೆ ಟೀಂ ಇಂಡಿಯಾ ನಾಯಕ ?

ವಿರಾಟ್‌ ಕೊಹ್ಲಿ ನಾಯಕತ್ವದಿಂದ ಕೆಳಗಿದ ನಂತರ ರೋಹಿತ್‌ ಶರ್ಮಾ ಟೆಸ್ಟ್‌, ಏಕದಿನ ಹಾಗೂ ಟಿ20 ತಂಡ ನಾಯಕರಾಗಿದ್ದಾರೆ. ಹಲವು ಸರಣಿಗಳಲ್ಲಿ ಭಾರತ ತಂಡವನ್ನು ಸಮರ್ಥವಾಗಿ ಮುನ್ನೆಡೆಸಿದ್ದಾರೆ. ಜೊತೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿದ್ದಾರೆ. ಆದ್ರೆ ರೋಹಿತ್‌ ಶರ್ಮಾ ಮುಂದಿನ ಏಕದಿನ ವಿಶ್ವಕಪ್‌ ಆಡುವುದು ಅನುಮಾನ.

Cricket News This is the last World Cup for Rohit Sharma and Virat Kohli
Image Credit to Original Source

ರೋಹಿತ್‌ ಶರ್ಮಾ ಅವರಿಗೆ ಸದ್ಯ 36 ವರ್ಷ. ಐದು ವರ್ಷಗಳ ಬಳಿಕ ಅವರ ವಯಸ್ಸು 41 ದಾಟಲಿದೆ. ಐದು ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ ಎದುರಾಗಲಿದ್ದು, ಈ ವೇಳೆಯಲ್ಲಿ ರೋಹಿತ್‌ ಶರ್ಮಾ ತಂಡದಲ್ಲಿ ಉಳಿದುಕೊಳ್ಳುವುದು ಕೂಡ ಅನುಮಾನ. ಬಿಸಿಸಿಐ ಅಷ್ಟು ವರ್ಷಗಳ ಕಾಲ ಆಡಲು ಅವಕಾಶ ನೀಡುವುದು ಅಸಾಧ್ಯ ಎನ್ನಲಾಗುತ್ತಿದೆ.

ಇನ್ನು ವಿರಾಟ್‌ ಕೊಹ್ಲಿ ಸದ್ಯ ಅದ್ಬುತ ಫಾರ್ಮನಲ್ಲಿದ್ದಾರೆ. ಟೀಂ ಇಂಡಿಯಾದ ನಾಯಕತ್ವ ತೊರೆದ ನಂತರವೂ ತಂಡದಲ್ಲಿ ಖಾಯಂ ಸದಸ್ಯರಾಗಿ ಉಳಿದುಕೊಂಡಿದ್ದಾರೆ. ಅಷ್ಟೇ ಅಲ್ಲಾ ಸಾಲು ಸಾಲು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಅವರಿಗೆ ಸದ್ಯ 34 ವರ್ಷ ವಯಸ್ಸು.

ಇದನ್ನೂ ಓದಿ : ಐಪಿಎಲ್ 2024 : ಆರ್‌ಸಿಬಿ ತಂಡಕ್ಕೆ ಮತ್ತೆ ವಿರಾಟ್‌ ಕೊಹ್ಲಿ ನಾಯಕ

ಮುಂದಿನ ಏಕದಿನ ವಿಶ್ವಕಪ್‌ ಹೊತ್ತಲ್ಲಿ 39 ವರ್ಷ ವಯಸ್ಸಾಗಿರುತ್ತದೆ. ಹೀಗಾಗಿ ಅವರು ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಈಗಾಗಲೇ ಬಿಸಿಸಿಐ ಈ ಬಾರಿಯ ವಿಶ್ವಕಪ್‌ಗೆ ಮೊದಲೇ ಹಿರಿಯ ಆಟಗಾರರಿಗೆ ಹಲವು ಸರಣಿಗಳಲ್ಲಿ ಕೋಕ್‌ ನೀಡಿದೆ. ಜೊತೆಗೆ ಪರ್ಯಾಯ ನಾಯಕರ ಆಯ್ಕೆಗೂ ಸಜ್ಜಾದಂತಿದೆ.

ಕನ್ನಡಿಗ ಕೆಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನೆಡೆಸಿದ್ದಾರೆ. ಕೆಎಲ್‌ ರಾಹುಲ್‌ ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕನಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರಾಹುಲ್‌ ಸದ್ಯ ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಹೊತ್ತಿದ್ದು, ಟೆಸ್ಟ್‌, ಏಕದಿನ ಹಾಗೂ ಟಿ20 ತಂಡಕ್ಕೂ ರಾಹುಲ್‌ ನಾಯಕನಾಗಿ ಆಯ್ಕೆಯಾದ್ರೆ ಅಚ್ಚರಿಯಿಲ್ಲ.

This is the last World Cup for Rohit Sharma and Virat Kohli !

Comments are closed.