uday surya evicted : ವೂಟ್ ಸೆಲೆಕ್ಟ್ನಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕನ್ನಡ ಒಟಿಟಿ ಸೀಸನ್ 1 ಕಾರ್ಯಕ್ರಮವು ಮೂರು ವಾರಗಳನ್ನು ಪೂರೈಸಿದೆ. ಮೂರನೇ ವಾರ ಬಿಗ್ಬಾಸ್ ಮನೆಯಿಂದ ನಟ ಉದಯ್ ಸೂರ್ಯ ಎಲಿಮಿನೇಟ್ ಆಗಿದ್ದಾರೆ. ಬಿಗ್ಬಾಸ್ ಮನೆ ಒಟಿಟಿಗೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದ್ದ ಉದಯ್ ಸೂರ್ಯ ಭಾರೀ ಮುಖಭಂಗವನ್ನು ಅನುಭವಿಸಿಕೊಂಡೇ ದೊಡ್ಮನೆಯಿಂದ ಹೊರ ಬಿದ್ದಿದ್ದಾರೆ.
ಬಿಗ್ಬಾಸ್ ಒಟಿಟಿ ಸೀಸನ್ 1ರಲ್ಲಿ ಮೂರನೇ ವಾರದಲ್ಲಿ ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್ ಗುರೂಜಿ, ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಹಾಗೂ ಸೋಮಣ್ಣ ಮಾಚಿಮಾಡ ನಾಮಿನೇಟ್ ಆಗಿದ್ದರು. ಈ ಏಳು ಜನರಲ್ಲಿ ಕೊನೆಯದಾಗಿ ಜಯಶ್ರೀ ಆರಾಧ್ಯ ಹಾಗೂ ಉದಯ್ ಸೂರ್ಯ ಉಳಿದುಕೊಂಡಿದ್ದರು. ಆದರೆ ಕೊನೆಯದಾಗಿ ನಟ ಸುದೀಪ್ ಜಯಶ್ರೀ ಸೇಫ್ ಆಗಿದ್ದಾರೆ ಎಂದು ಹೇಳುವ ಮೂಲಕ ಉದಯ್ ಸೂರ್ಯರಿಗೆ ಸೂಟ್ಕೇಸ್ ಸಮೇತ ಮನೆಯಿಂದ ಹೊರಬಿದ್ದಿದ್ದಾರೆ.
ಬಿಗ್ಬಾಸ್ ಕನ್ನಡ ಒಟಿಟಿ 1ರ ಕಾರ್ಯಕ್ರಮದಲ್ಲಿ ಮೂರನೇ ವಾರದಲ್ಲಿ ಕೊನೆಯದಾಗಿ ಎಲಿಮಿನೇಟ್ ಆಗುವ ಮೂಲಕ ದೊಡ್ಮನೆಗೆ ಟಿವಿ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಕಳೆದ ವಾರದಲ್ಲಿ ಉದಯ್ ಸೂರ್ಯ ಸಾನ್ಯ ಅಯ್ಯರ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಚೈತ್ರಾ ಹಳ್ಳಿಕೇರಿ ಹಾಗೂ ಜಯಶ್ರೀ ಆರಾಧ್ಯ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದು ಉದಯ್ ಸೂರ್ಯರಿಗೆ ಭಾರೀ ದೊಡ್ಡ ಪೆಟ್ಟನ್ನು ನೀಡಿತ್ತು. ಇದಾದ ಬಳಿಕ ನನ್ನ ಉದ್ದೇಶ ಆಗಿರಲಿಲ್ಲ ಎಂದೆಲ್ಲ ಸ್ಪಷ್ಟನೆ ನೀಡಿದ್ದರು. ಆದರೆ ಉದಯ್ ಸೂರ್ಯರನ್ನು ಚೈತ್ರಾ ಹಳ್ಳಿಕೇರಿ, ಸಾನ್ಯ ಅಯ್ಯರ್, ನಂದಿನಿ, ಜಶ್ವಂತ್ ಬೋಪಣ್ಣ ಹಾಗೂ ರೂಪೇಶ್ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದರು.
ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಉದಯ್ ಸೂರ್ಯ ನನ್ನ ಉದ್ದೇಶ ಆ ರೀತಿ ಇರಲಿಲ್ಲ. ವೀಕ್ಷಕರು ನನಗೊಂದು ಚಾನ್ಸ್ ನೀಡಬಹುದು ಎಂದುಕೊಂಡಿದ್ದೆ ಎಂದು ಹೇಳುತ್ತಾ ಮನೆಯಿಂದ ಹೊರ ಬಿದ್ದಾರೆ. ಅಲ್ಲದೇ ಸಾನ್ಯಾ ಅಯ್ಯರ್ ಹಾಗೂ ಚೈತ್ರಾ ಹಳ್ಳಿಕೇರಿ ಜೊತೆ ಉದಯ್ ಸೂರ್ಯ ಕ್ಷಮೆಯಾಚಿಸಿದ್ದಾರೆ.
ಇದನ್ನು ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ
ಇದನ್ನೂ ಓದಿ : KS Eshwarappa : ಮುರುಘಾ ಶರಣರ ವಿರುದ್ಧ ಹರಡಿರುವ ಅನಿಷ್ಟ ಸುದ್ದಿ ಸುಳ್ಳಾಗಲಿ ಎಂದ ಕೆ.ಎಸ್ ಈಶ್ವರಪ್ಪ
bigg boss kannada ott 1 week 3 elimination uday surya evicted