KS Eshwarappa : ಮುರುಘಾ ಶರಣರ ವಿರುದ್ಧ ಹರಡಿರುವ ಅನಿಷ್ಟ ಸುದ್ದಿ ಸುಳ್ಳಾಗಲಿ ಎಂದ ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ : KS Eshwarappa : ಚಿತ್ರದುರ್ಗದ ಮುರುಘಾ ಮಠ ಶರಣರ ವಿರುದ್ಧ ಪೋಕ್ಸೋ ಕೇಸ್​ ದಾಖಲಾದ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ, ಚಿತ್ರದುರ್ಗದ ಮುರುಘಾಮಠ ರಾಜ್ಯವ್ಯಾಪಿ ಖ್ಯಾತಿಯನ್ನು ಗಳಿಸಿದೆ. ಈ ಸುದ್ದಿಯನ್ನು ಕೇಳಿ ನನಗೆ ತುಂಬಾ ಬೇಸರವಾಯ್ತು. ಇದೊಂದು ಅನಿಷ್ಟಕರ ಸುದ್ದಿ. ಈ ಆರೋಪಗಳು ಸುಳ್ಳು ಎಂದು ಸಾಬೀತಾಗಲೆಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.


ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬಂದ ಬಳಿಕ ಏನಾದರೂ ಹೇಳಬಹುದು. ನಾವೆಲ್ಲ ತನಿಖೆಯನ್ನೇ ನಂಬಿಕೊಂಡವರು.ತನಿಖೆಯಲ್ಲಿ ಏನು ರಿಪೋರ್ಟ್ ಬರುತ್ತದೆ ಅದನ್ನು ನಾವು ಒಪ್ಪಿಕೊಳ್ಳಬೇಕು. ಈ ದರಿದ್ರ ಸುದ್ದಿ ಹೇಗೆ ಬಂತು, ಇದಕ್ಕೆ ಕಾರಣೀಕರ್ತ ಯಾರು..? ಇದು ಸುಳ್ಳೋ ಅಲ್ಲವೋ ಎಂಬುದರ ಬಗ್ಗೆ ತನಿಖೆಯ ಮೂಲಕವೇ ತಿಳಿಯಬೇಕಿದೆ ಎಂದು ಹೇಳಿದರು.


ಇದೇ ವೇಳೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಈಶ್ವರಪ್ಪ. ಕೇಂದ್ರದ ನಾಯಕರು ಈಗಾಗಲೇ ಯಡಿಯೂರಪ್ಪರಿಗೆ ಪಕ್ಷದಲ್ಲಿ ವಿಶೇಷವಾದ ಸ್ಥಾನಮಾನಗಳನ್ನು ನೀಡಿದ್ದಾರೆ. ಇದರಿಂದ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸಂತೋಷವಾಗಿದೆ. ಬಿಎಸ್​ವೈ ಈ ಬಾರಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ 150 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಬಿಎಸ್​ವೈ ಆಸೆ ಈಡೇರುತ್ತೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.


ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ಕುರಿತು ಇದೇ ವೇಳೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಯಾರು ಪಕ್ಷದ ಅಧ್ಯಕ್ಷರಾಗಬೇಕು, ಯಾರು ಆಗಬಾರದು ಅಂತಾ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅವರು ಯಾವ ತೀರ್ಮಾನ ತೆಗೆದುಕೊಳ್ತಾರೋ ನಾವೆಲ್ಲ ಅದಕ್ಕೆ ಬದ್ಧರಾಗಿರ್ತೇವೆ ಎಂದು ಹೇಳಿದರು.

ಇದನ್ನು ಓದಿ : Murugashri to weaken the POCSO case : ಪೋಕ್ಸೋ ಪ್ರಕರಣ ದುರ್ಬಲಗೊಳಿಸಲು ಮುರುಘಾಶ್ರೀಗಳ ಸಮ್ಮುಖದಲ್ಲಿ ನಡೆಯಿತಾ ಸಂಧಾನ ಸಭೆ

ಇದನ್ನೂ ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

KS Eshwarappa said that the allegation against Marugasharanaru should be false

Comments are closed.