potholes on roads : ಗುಂಡಿ‌ ಹುಡುಕಿ ಬಹುಮಾನ ಗೆಲ್ಲಿ : ಸರ್ಕಾರದ ಗಮನಸೆಳೆಯಲು ಮಂಗಳೂರಿನಲ್ಲೊಂದು ವಿಶಿಷ್ಟ ಸ್ಪರ್ಧೆ

ಮಂಗಳೂರು : potholes on roads : ನಗರದ ಸ್ಮಾರ್ಟ್ ಸಿಟಿಯ ರಸ್ತೆಯಲ್ಲಿ ಹೊಂಡ ಗುಂಡಿಗಳ ಅಧ್ವಾನ ಹೇಳತೀರದಂತಾಗಿದೆ. ರಸ್ತೆ ಗುಂಡಿಯಿಂದ ಆದ ಅಪಘಾತಕ್ಕೆ ಮೂವರ ಬಲಿಯಾಗಿದ್ರೆ, ಹಲವಾರು ಮಂದಿ ಗಾಯಗಳಾಗಿ ಆಸ್ಪತ್ರೆಗೆ ಸೇರಿದ್ದಾರೆ.‌ ಇದೀಗ ರಸ್ತೆಗುಂಡಿಗಳ ಬಗ್ಗೆ ಅಧಿಕಾರಿಗಳ,ಸರ್ಕಾರದ ಗಮನ ಸೆಳೆಯಲು ವಿಶಿಷ್ಟವಾದ ಸ್ಪರ್ಧೆಯೊ‌ಂದನ್ನು ಸಮಾನಮನಸ್ಕರು ಆಯೋಜನೆ ಮಾಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೆಚ್ಚಿನ ರಸ್ತೆಗಳಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅನ್ನೋದೆ ಅರ್ಥವಾಗುತ್ತಿಲ್ಲ. ದುರಂತ ಅಂದ್ರೆ ಈ ರಸ್ತೆ ಗುಂಡಿಗಳಿಂದಾಗಿ ನಡೆದ ಅಪಘಾತದಲ್ಲಿ ಈವರೆಗೆ ಮೂವರು ಮೃತಪಟ್ಟಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಸರ್ಕಾರದ ಅಧಿಕಾರಿಗಳ ಗಮನ ಸೆಳೆಯಲು ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ದೊಡ್ಡ ಮತ್ತು ಅಪಾಯಕಾರಿ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವರು ಅಪಾಯಕಾರಿ ರಸ್ತೆಗುಂಡಿಗಳನ್ನು ಗುರುತಿಸಿ ಅದರ ಫೋಟೋ ಅಥವಾ ವಿಡಿಯೋ ತೆಗೆದು ಲೊಕೇಷನ್ ಜೊತೆ ಕೊಟ್ಟಿರುವ ವಾಟ್ಸಪ್ ನಂಬರಿಗೆ ಕಳುಹಿಸಲು ಸೂಚಿಸಲಾಗಿದೆ. ಈವರೆಗೆ 800ಕ್ಕೂ ಹೆಚ್ಚು ಫೋಟೋ ವಿಡಿಯೋಗಳನ್ನು ಜನರು ಕಳುಹಿಸಿ ಕೊಟ್ಟಿದ್ದಾರೆ. ಸ್ಪರ್ದೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ 5000 ರೂಪಾಯಿ, ದ್ವಿತೀಯ ಬಹುಮಾನ 3000 ರೂಪಾಯಿ, ಹಾಗು ತೃತೀಯ ಬಹುಮಾನ 2000 ರೂಪಾಯಿ ನೀಡಲು ತೀರ್ಮಾನಿಸಲಾಗಿದೆ. ಸಪ್ಟೆಂಬರ್ 30 ರಂದು ವಿಜೇತರಿಗೆ
ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯ ಮುಂದೆ ಬಹುಮಾನ ವಿತರಿಸಲು ತೀರ್ಮಾನಿಸಲಾಗಿದೆ.

ನಗರದಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತಿದ್ದು,ರಸ್ತೆ ದುರಸ್ತಿಯ ಬಗ್ಗೆ ಪಾಲಿಕೆ ತಲೆ ಕೆಡಿಸಿಕೊಂಡಿಲ್ಲ. ರಸ್ತೆಯಲ್ಲಿ ಗುಂಡಿಗಳ ಸಂಖ್ಯೆ ಹಚ್ಚಾಗಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಒಟ್ಟಿನಲ್ಲಿ ಈ ಸ್ಪರ್ಧೆಯ ಬಳಿಕವಾದರೂ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರ ಎಂದು ಕಾದುನೋಡಬೇಕಿದೆ.

ಇದನ್ನು ಓದಿ : KS Eshwarappa : ಮುರುಘಾ ಶರಣರ ವಿರುದ್ಧ ಹರಡಿರುವ ಅನಿಷ್ಟ ಸುದ್ದಿ ಸುಳ್ಳಾಗಲಿ ಎಂದ ಕೆ.ಎಸ್​ ಈಶ್ವರಪ್ಪ

ಇದನ್ನೂ ಓದಿ : uday surya evicted : ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ನಟ ಉದಯ್​ ಸೂರ್ಯ

Competition in Mangalore over potholes on roads

Comments are closed.