Bigg Boss Kannada OTT : ಬಿಗ್​ಬಾಸ್​ ಕನ್ನಡ ಸೀಸನ್​ 9 ಅಲ್ಲ..ಸೀಸನ್​ 1 : ಆಗಸ್ಟ್​ 6ರಿಂದ ಶುರು ಒಟಿಟಿ ಶೋ

Bigg Boss Kannada OTT : ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋ ಯಾವಾಗ ಶುರುವಾಗುತ್ತೆ ಅಂತಾ ಕಾಯುತ್ತಿರೋ ಅನೇಕ ವೀಕ್ಷಕರು ನಮ್ಮಲ್ಲಿದ್ದಾರೆ. ಬಹುನಿರೀಕ್ಷಿತ ಬಿಗ್​ ಬಾಸ್​ ಕನ್ನಡ ಸೀಸನ್​ 9 ಇನ್ನೇನು ಶುರುವಾಗಲಿದೆ ಎಂಬ ಸುಳಿವುಗಳನ್ನು ಕಲರ್ಸ್​ ಕನ್ನಡ ಚಾನೆಲ್​ ನೀಡುತ್ತಲೇ ಬಂದಿದೆ. ಕಲರ್ಸ್ ಕನ್ನಡ ಬ್ಯುಸಿನೆಸ್​ ಹೆಡ್​ ಪರಮೇಶ್ವರ್ ಗುಂಡ್ಕಲ್​ ಈ ಬಗೆಗಿನ ಹಲವಾರು ಮಾಹಿತಿಗಳನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮೊದಲೇ ಶೇರ್​ ಮಾಡ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟ ಸುದೀಪ್​ ಕೂಡ ಪ್ರೋಮೋ ಶೂಟ್​ನಲ್ಲಿ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದರು. ಇದೀಗ ಬಿಗ್​ ಬಾಸ್​ ನೂತನ ಸೀಸನ್​​ನ ಮೊದಲ ಪ್ರೊಮೋ ಲಾಂಚ್​ ಆಗಿದೆ. ಅಂದಹಾಗೆ ಈ ಬಾರಿ ಬರ್ತಿರೋದು ಬಿಗ್​ಬಾಸ್​ ಕನ್ನಡ ಸೀಸನ್ 9 ಅಲ್ಲ ಬದಲಾಗಿ ಸೀಸನ್​ 1..!


ಇದೇನಪ್ಪಾ ಕಳೆದ ಬಾರಿ ಬಿಗ್​ ಬಾಸ್​ ಕನ್ನಡ ಸೀಸನ್​ 8 ಮುಕ್ತಾಯಗೊಂಡಿತ್ತು. ಅದುಹೇಗೆ ಮತ್ತೆ ಸೀಸನ್​ 1 ಶುರುವಾಗೋಕೆ ಸಾಧ್ಯ..? ಎಂದು ನೀವು ಅಂದುಕೊಂಡಿದ್ದರೆ… ಟ್ವಿಸ್ಟ್​ ಇರೋದೇ ಇಲ್ಲಿ. ಈ ಬಾರಿ ಟಿವಿಯಲ್ಲಿ ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋ ಆರಂಭವಾಗೋಕು ಮುನ್ನ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ಹೀಗಾಗಿ ಇದನ್ನು ಬಿಗ್​ಬಾಸ್​ ಕನ್ನಡ ಒಟಿಟಿ ಸೀಸನ್ 1 ಎಂದು ಕರೆಯಬಹುದಾಗಿದೆ. ಅಂದರೆ ಆರು ವಾರಗಳ ಕಾಲ ನಡೆಯಲಿರುವ ಈ ಸ್ಪರ್ಧೆಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋದಿಲ್ಲ. ಬದಲಾಗಿ ವೂಟ್​ ಆ್ಯಪ್​ನಲ್ಲಿ ದಿನದ 24 ಗಂಟೆಯೂ ಬಿಗ್​ ಬಾಸ್​ ಒಟಿಟಿ ಪ್ರಸಾರ ವಾಗಲಿದೆ.


ಇಂದು ಲಾಂಚ್​ ಮಾಡಲಾದ ಪ್ರೊಮೋದಲ್ಲಿ ಎಲ್ಲರೂ ನಟ ಸುದೀಪ್​ಗಾಗಿ ಕಾಯುತ್ತಿರ್ತಾರೆ. ಐಷಾರಾಮಿ ಕಾರಿನಲ್ಲಿ ಬರುವ ಕಿಚ್ಚ ಸುದೀಪ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಎಲ್ಲರೂ ಸೀಸನ್​ 9ಗೆ ಶುಭಾಶಯ ಕೋರುತ್ತಾರೆ. ಆದರೆ ಸುದೀಪ್​ ಇದು ಸೀಸನ್​ 9 ಅಲ್ಲ ಸೀಸನ್​ 1 ಎಂದು ಹೇಳ್ತಾರೆ. ಸೀಸನ್​ 8 ಮುಗಿದ ಮೇಲೆ ಸೀಸನ್​ 9 ಆರಂಭವಾಗಬೇಕಲ್ವೇ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ಸುದೀಪ್​ ಎಂದಾದರೂ ಬಿಗ್​ ಬಾಸ್​ ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಂಡಿತ್ತೇ ಎಂದು ಕೇಳ್ತಾರೆ..? ಇದಕ್ಕೆ ಇಲ್ಲ ಎಂಬ ಉತ್ತರ ಬರ್ತಿದ್ದಂತೆಯೇ ಸುದೀಪ್​ ಬಿಗ್​ ಬಾಸ್​ ಕನ್ನಡ ಒಟಿಟಿ ಸೀಸನ್​ 1ರ ಬಗ್ಗೆ ಮಾಹಿತಿ ನೀಡ್ತಾರೆ. ಅಲ್ಲಿಗೆ ಪ್ರೋಮೋ ಕೊನೆಯಾಗುತ್ತದೆ.


ಮೂಲಗಳ ಪ್ರಕಾರ ಬಿಗ್​ಬಾಸ್​ ಕನ್ನಡ ಒಟಿಟಿ ಸೀಸನ್​ 1ಕ್ಕೆ ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​ ಆದವರು ಹಾಗೂ ಕಿರುತೆರೆ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗ್ತಿದೆ. ಆಗಸ್ಟ್​ ಆರನೇ ತಾರೀಖು ಸಂಜೆ 7 ಗಂಟೆಗೆ ಒಟಿಟಿ ಸೀಸನ್​ ಗ್ರ್ಯಾಂಡ್ ಪ್ರೀಮಿಯರ್​ ಇರಲಿದ್ದು ಎಲ್ಲಾ ಕುತೂಹಲಗಳಿಗೆ ಅಂದೇ ತೆರೆ ಬೀಳಲಿದೆ.

ಇದನ್ನು ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?

ಇದನ್ನೂ ಓದಿ : Full domestic season 2022-23 : ದೇಶೀಯ ಕ್ರಿಕೆಟಿಗರಿಗೆ ಶುಭಸುದ್ದಿ.. ಈ ವರ್ಷದಿಂದ ಫುಲ್ ಡೊಮೆಸ್ಟಿಕ್ ಸೀಸನ್.. ಯಾವಾಗ ಯಾವ ಟೂರ್ನಿ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Bigg Boss Kannada OTT season 1 starts from 6th August

Comments are closed.