Bigg Boss Ott Kannada Season 1 : ಬಿಗ್ಬಾಸ್ ಒಟಿಟಿ ಶೋ ಆರಂಭಗೊಂಡು ಒಂದು ವಾರಗಳೇ ಕಳೆದಿದ್ದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ವಾರದ ಹಿಂದೆಯಷ್ಟೇ ಬಿಗ್ಬಾಸ್ ಮನೆಗೆ ಸ್ಪರ್ಧಿಗಳನ್ನು ಕಳುಹಿಸಿಕೊಟ್ಟಿದ್ದ ಕಿಚ್ಚ ಸುದೀಪ ಇದೀಗ ಮೊದಲ ಎಲಿಮಿನೇಷನ್ ಕೂಡ ಮಾಡಿದ್ದಾರೆ. ಬಿಗ್ಬಾಸ್ ಒಟಿಟಿ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬಾಕೆಯಾದ ಸೋನುಗೌಡನಿಗೆ ಸುದೀಪ್ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ .
ಬಿಗ್ಬಾಸ್ ಮನೆಯಲ್ಲಿ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಶೋನಲ್ಲಿ ಯೆಸ್ ಆರ್ ನೋ ರೌಂಡ್ ನಡೆಯುವುದು ಮೊದಲಿನಿಂದಲೂ ಇದೆ. ಇದೇ ಪ್ರಕ್ರಿಯೆಯನ್ನು ಬಿಗ್ಬಾಸ್ ಒಟಿಟಿಗೂ ಅಳವಡಿಸಲಾಗಿದೆ. ಈ ಪ್ರಶ್ನಾವಳಿಯಲ್ಲಿ ಸಾಮಾನ್ಯವಾಗಿ ಫನ್ನಿ ಪ್ರಶ್ನೆಗಳನ್ನೇ ಸುದೀಪ್ ಕೇಳುತ್ತಾರೆ. ಅದೇ ರೀತಿ ಕಿಚ್ಚ ಸುದೀಪ್ ಸೋನು ಗೌಡ ವಿಚಾರವಾಗಿ ದೊಡ್ಮನೆಯ ಸದಸ್ಯರ ಎದುರು ಪ್ರಶ್ನೆಯೊಂದನ್ನು ಇಟ್ಟಿದ್ದರು.
ಸೋನುಗೌಡ ಆಯವರ್ಧನ್ ರೀತಿಯಲ್ಲಿಯೇ ಒಂದು ಟಾಪಿಕ್ನಿಂದ ಇನ್ನೊಂದು ಟಾಪಿಕ್ಗೆ ಹೋಗುತ್ತಾರೆ ಎಂಬುದು ಸುದೀಪ್ರ ಪ್ರಶ್ನೆಯಾಗಿತ್ತು. ಇದಕ್ಕೆ ಬಿಗ್ಬಾಸ್ ಮನೆಯ ಸ್ಪರ್ಧಿಗಳು ನೀಡಿದ ಉತ್ತರವನ್ನು ಸೋನು ಗೌಡಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಗರಂ ಆಗಿದ್ದಾರೆ. ಸೋನು ಗೌಡ ಪ್ರತಿಕ್ರಿಯೆಯನ್ನು ಕೇಳಿದ ಕಿಚ್ಚ ಸುದೀಪ್ ತಮ್ಮದೇ ಆದ ರೀತಿಯಲ್ಲಿ ಸೋನು ಗೌಡ ಕಿವಿ ಹಿಂಡಿದ್ದಾರೆ.
ಚೈತ್ರಾ ಹಳ್ಳಿಕೇರಿ, ರಾಕೇಶ್ ಅಡಿಗ ಸೇರಿದಂತೆ ಅನೇಕರು ಕಿಚ್ಚ ಸುದೀಪ್ರ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಚೈತ್ರಾ ಹಳ್ಳಿಕೇರಿ ಸೋನು ಗೌಡನ ಮಾತಿಗೆ ಕನೆಕ್ಷನ್ ಇರಲ್ಲ ಎಂದರೆ ರಾಕೇಶ್ ಅಡಿಗ ನನಗೆ ಇಂತಹ ಅನುಭವವಾಗಿಲ್ಲ ಎಂದಿದ್ದರು. ಈ ವೇಳೆಯಲ್ಲಿ ಮನೆಯ ಮತ್ತೊಬ್ಬ ಸ್ಪರ್ಧಿ ಸಾನ್ಯ ಅಯ್ಯರ್, ಸೋನು ಗೌಡ ಪ್ರೌಢಿಮೆ ಇಲ್ಲದೇ ಮಾತನಾಡುತ್ತಾರೆ, ಅವರು ಆರ್ಯವರ್ಧನ್ರ ಅಸಿಸ್ಟಂಟ್ ಆಗಬಹುದು ಎಂದು ಹೇಳಿದ್ದಾರೆ.
ಇದಕ್ಕೆ ಗರಂ ಆದ ಸೋನು ಗೌಡ ನನ್ನನ್ನು ಆರ್ಯವರ್ಧನ್ ಅಸಿಸ್ಟಂಟ್ ಎಂದು ಕರೀಬೇಡ ಎಂದು ಸಾನ್ಯಾರಿಗೆ ಗದರಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸುದೀಪ್, ನಿಮ್ಮಂತೆಯೇ ಆರ್ಯವರ್ಧನ್ ಕಾಲನ್ನೂ ಎಳೆದಿದ್ದಾರೆ. ಆದರೆ ಅವರು ಏನೂ ಮಾತನಾಡದೇ ಸುಮ್ಮನಿದ್ದಾರೆ. ಇದನ್ನೇ ಕ್ರೀಡಾಭಾವನೆ ಎಂದು ಕರೆಯೋದು, ನೀವು ತಮಾಷೆ ಮಾಡಿದರೆ ಅದು ಕಾಮಿಡಿ. ಉಳಿದವರು ನಿಮ್ಮ ಮೇಲೆ ತಮಾಷೆ ಮಾಡಿದರೆ ಅವರನ್ನು ಮೂರ್ಖರು ಎಂದುಕೊಳ್ಳುವುದು ತಪ್ಪು ಎಂದು ಸೋನು ಗೌಡರ ಕಿವಿ ಹಿಂಡಿದ್ದಾರೆ .
ಇದನ್ನು ಓದಿ : rocking star Yash Radhika : ಯಶ್ ರಾಧಿಕಾ ಸ್ವಾತಂತ್ರ್ಯ ಸಂಭ್ರಮ : ಫ್ಯಾಮಿಲಿ ಜೊತೆ ಧ್ವಜಾರೋಹಣ ನಡೆಸಿದ ರಾಕಿಂಗ್ ಸ್ಟಾರ್
ಇದನ್ನೂ ಓದಿ : Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ
Bigg Boss Ott Kannada Season 1 Kiccha Sudeep Suggestion To Sonu Gowda